ವಡಗೇರಾ: ತಾಲೂಕಿನಲ್ಲಿ ತಾಲೂಕು ಕಚೇರಿಗಳು ಹಾಗೂ ಕಾಲೇಜು ಆರಂಭಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಲ್ಯಾಣ ಕರ್ನಾಟಕ ಅಧ್ಯಕ್ಷ ಶರಣು ಇಟಗಿ ನೇತೃತ್ವದಲ್ಲಿ ಸಚಿವ ಶರಣಬಸಪ್ಪಡ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಲಾಯಿತು.ವಡಗೇರಾ ತಾಲೂಕು ಕೇಂದ್ರವಾಗಿ ಸುಮಾರು ವರ್ಷಗಳೇ ಕಳೆದರೂ ತಾಲೂಕಿಗೆ ಸಂಬಂಧಿಸಿದ ವಿವಿಧ ಕಚೇರಿಗಳು ಆರಂಭಿಸಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪದವಿ ಪೂರ್ವ ಪದವಿ ಮಹಾವಿದ್ಯಾಲಯ, ಸಮಾಜ ಕಲ್ಯಾಣ ಇಲಾಖೆ, ವಸತಿ ನಿಲಯಗಳು ಉಪನೊಂದಣೆ ಕಚೇರಿ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ, ತಾಲೂಕು ಕೋರ್ಟ್ ನಿರ್ಮಾಣ, ತಾಲೂಕು ಕ್ರೀಡಾಂಗಣ, ಕೆ ಬಿ ಜಿ ಏನ್ ಎಲ್ ಕಚೇರಿ ಸ್ಥಾಪನೆ , ತೋಟಗಾರಿಕೆ, ಅರಣ್ಯ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕೆಇಬಿ ಉಪ ವಿಭಾಗ, ಅಗ್ನಿಶಾಮಕದಳ ಕಚೇರಿ ಶಾಲೆಗಳಿಗೆ ಶಿಕ್ಷಕರ ನೇಮಕ ಸೇರಿದಂತೆ ಇತರ ಇಲಾಖೆೆಗಳನ್ನು ಪ್ರಾರಂಭಿಸಬೇಕು.ವಡಗೇರಾ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಬೇಕೆಂದು
ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಲ್ಯಾಣ ಕರ್ನಾಟಕ ಅಧ್ಯಕ್ಷ ಶರಣು ಇಟಗಿ, ಕಾಂಗ್ರೆಸ್ ಯುವ ಮುಖಂಡರಾದ ಬಸ್ಸುಗೌಡ ಬಿಳಾರ, ಸಂಗನಗೌಡ ಮಾಲಿ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.