ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು

ಶಹಾಪುರ : ವಿದ್ಯಾರ್ಥಿಗಳ ಸಾಧನೆ ಮತ್ತು ಬೆಳವಣಿಗೆಯಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ದೇಶದ ನಿರ್ಮಾತ್ರೃಗಳು ಎಂದು ಶಾಲೆಯ ಪ್ರಾಂಶುಪಾಲ ಸಜೀಶರಾಜ ಹೇಳಿದರು. ಪಟ್ಟಣದ ಡಿಡಿಯು ಸಿಬಿಎಸ್ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಪ್ರತಿ ವ್ಯಕ್ತಿಯ ಬದುಕಿನ ದಾರಿದೀಪವಾಗಿ ಶಿಕ್ಷಕರು ನಿಲ್ಲುತ್ತಾರೆ. ಮಾಜಿ ರಾಷ್ಟ್ರಪತಿಗಳು ಹಾಗೂ ಬಹು ಭಾಷಾ ಪಂಡಿತರು ಉತ್ತಮ ಶಿಕ್ಷಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣರು ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ತೀರ್ಮಾನಿಸಿದ್ದು ನಮ್ಮೆಲ್ಲರ ಭಾಗ್ಯ ಎಂದರು. ಪ್ರತಿ ಮಗು ಬೆಳೆದು ಸಮಾಜದಲ್ಲಿ ಏನೆಲ್ಲ ಮಹತ್ತರ ಸಾಧನೆಗಳನ್ನು ಮಾಡುತ್ತದೆಯೊ ಅದೆಲ್ಲಕ್ಕೂ ಪ್ರತ್ತೇಕ್ಷವಾಗಿ ಪರೋಕ್ಷವಾಗಿ ಶಿಕ್ಷಕರ ಸಹಕಾರ ಶ್ರಮ ಬೆಂಬಲ ಇರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಸಹೃದಯಿಗಳು ಎಂದರು. ವಿದ್ಯಾರ್ಥಿಗಳು ಶಿಕ್ಷಕರ ಸಂಬಂಧ ಅಂತ ಪವಿತ್ರವಾದದ್ದು ವಿದ್ಯಾರ್ಥಿಗಳು ಮಹಾನ್ ಸಾಧಕರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೆನಪಿನ ಕಾಣಿಕೆಯಾಗಿ ಶಿಕ್ಷಕರಿಗೆ ಪುಸ್ತಕ ಮತ್ತು ಸಸಿಗಳನ್ನು ನೀಡಿ ಶುಭಕೋರಿದರು.ಇದೆ ಸಮಯದಲ್ಲಿ ಶಾಲೆಯ ಗ್ರಂಥಾಲಯಕ್ಕೆ ಮಕ್ಕಳು ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.