ಶಹಾಪುರ :ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ಹತ್ತಿ, ತೊಗರಿ, ಹೆಸರು ಮತ್ತು ತೋಟಗಾರಿಕೆ ಬೆಳೆಗಳು ಸೇರಿದಂತೆ ಇತರ ಬೆಳೆಗಳು ಅಪಾರ ನಷ್ಟ ಅನುಭವಿಸಿವೆ. ಸರ್ಕಾರ ಕೂಡಲೇ ರೈತರಿಗೆ ಎಕರೆಗೆ 50,000 ಪರಿಹಾರ ಧನ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕ ಒತ್ತಾಯಿಸಿದರು. ಇಂದು ನಗರದ ತಹಸಿಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಅವರು ಮುಂಗಾರು ಬೆಳೆಗಳು ಅತಿವೃಷ್ಟಿಯಿಂದ ಸಂಪೂರ್ಣ ನಾಶವಾಗಿವೆ. ಸಾಲ ಮಾಡಿ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಖರ್ಚು ಮಾಡಿದ ರೈತರ ಸ್ಥಿತಿ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿಯೂ ಕೂಡ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ರೈತರ ಬಗ್ಗೆ ಉಡಾಫೆ ಮಾತನಾಡಿರುವುದು ಖಂಡನೀಯ. ಕೂಡಲೇ ರೈತರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಎಸ್ ಎಂ ಸಾಗರ,ಭೀಮಣ್ಣ ತಪ್ಪಿದಾರ,ಭೀಮರಾಯ ಪೂಜಾರಿ,ತಮ್ಮಣ್ಣ ಜಾಗಿರ್ದಾರ,ಕಾರ್ಮಿಕ ಮುಖಂಡ ದೇವೇಂದ್ರ ಕುಮಾರ,
ವಿಜಯಕುಮಾರ ದೊಡ್ಡಮನಿ,ತಿಪ್ಪಣ್ಣ ಬೆನಕನಹಳ್ಳಿ,ಯಲ್ಲಪ್ಪ ನಾಯ್ಕೋಡಿ, ಮಲ್ಲಮ್ಮ ಬನ್ನಟ್ಟಿ,ಯಂಕಮ್ಮ ನಾಯ್ಕೋಡಿ ಸೇರಿದಂತೆ ಇತರರು ಇದ್ದರು.