ಶಹಾಪುರ,,
ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಯುವ ನಾಯಕ ಶಾಂತಗೌಡ ನಾಗನಟಗಿಯವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರು. ಪಕ್ಷದಲ್ಲಿ ಯಾವುದೇ ಹುದ್ದೆ ಬಯಸದೆ ಪಕ್ಷಕ್ಕಾಗಿ ದುಡಿಯುತ್ತಿರುವ ಯುವ ನಾಯಕರಾಗಿ ಹೊರಹೊಮ್ಮುತ್ತಿರುವುದು ಸಂತಸದ ವಿಚಾರ. ಹಾಲುಮತ ಸಮಾಜದ ನಾಯಕರಾದ ಶಾಂತಗೌಡರು ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿಯಲ್ಲಿ ಯಾದಗಿರಿ ಮತ್ತು ರಾಯಚೂರು ವಲಯದ ನಿರ್ದೇಶಕರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಸಚಿವರು ನೀಡಿರುವ ಗ್ರಾಮ ಪಂಚಾಯಿತಿ ಮಟ್ಟದಿಂದಿಡಿದು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಚಿವರ ಮಾತಿನಂತೆ ನಡೆದುಕೊಂಡು ಬಂದ ಯುವ ರುವಾರಿ. ಪಕ್ಷದ ಜೊತೆಗೆ ಕುರಿಗಾರರ ಹಿತ ಕಾಪಾಡುವಲ್ಲಿ ಸರಕಾರಿ ಅಧಿಕಾರಿಗಳಿಂದಿಡಿದು ರಾಜಕೀಯ ಮುಖಂಡರವರೆಗೆ ಹಲವಾರು ಅಭಿವೃದ್ಧಿ ಕೆಲಸಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ ಕುರಿಗಾಯಿಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಕುರಿಗಾರರ ಹಿತಕಾಪಾಡುವ ಬಗ್ಗೆ ಸಚಿವರ ಜೊತೆ ಚರ್ಚಿಸಿದ್ದುಂಟು. ಶ್ರಮ ಸ್ವಲ್ಪವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯಿಂದಾಗಿ ಕೊನೆಗೂ ಕುರಿಗಾರರ ಹಿತರಕ್ಷಣಾ ಕಾಯ್ದೆ ಜಾರಿಗೆ ಬಂದು ಯಶ ಕಂಡಿದೆ. ಸಚಿವರ ಆಪ್ತ ಬಳಗದಲ್ಲಿರುವ ಶಾಂತಗೌಡರು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರಗಯ್ದು ಪಕ್ಷ ಅಧಿಕಾರಕ್ಕೆ ಬರಲು ಶ್ರಮವಹಿಸಿದ್ದುಂಟು.

ಕುರುಬ ಸಮಾಜದ ಯುವ ನಾಯಕರಾದ ಶಾಂತಗೌಡರು ಜಾತ್ಯತೀತದಿಂದ ಎಲ್ಲಾ ಸಮಾಜದ ಮುಖಂಡರಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ಕುರಿಗಾಯಿಗಳಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಅತಿ ಹೆಚ್ಚಿನ ಶ್ರಮವಹಿಸಿದ್ದಾರೆ.

ಸಚಿವ ಶರಣಬಸಪ್ಪಗೌಡ ದರ್ಶನಪುರ ಅವರ ಮೇಲೆ ಒತ್ತಡ ಹಾಕಿ ಸರಕಾರ ನೀಡುವ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ. ಸಚಿವರ ಜೊತೆಗೂಡಿ ಎಲೆಮರೆಕಾಯಿಯಂತೆ ತಮ್ಮ ಕೆಲಸ ಮಾಡುತ್ತಿರುವುದು ಜವಾಬ್ದಾರಿಯು ಸ್ಥಾನ ಎನ್ನಬಹುದು.ಮುಂದಿನ ದಿನಮಾನಗಳಲ್ಲಿ ಅವರ ಕಾರ್ಯವನ್ನು ಗುರುತಿಸಿ ಒಳ್ಳೆಯ ಸ್ಥಾನಮಾನ ನೀಡಲಿ ಎಂದು ಹಾರೈಸೋಣ.