ಸರ್ವಧರ್ಮ ಸಮನ್ವಯ ಕೇಂದ್ರ ಮಹಾಶೈವ ಧರ್ಮಪೀಠದಲ್ಲಿ 113 ನೆಯ ಶಿವೋಪಶಮನ ಕಾರ್ಯ

ರಾಯಚೂರು (ಗಬ್ಬೂರು, ಅಗಸ್ಟ್ 24) :: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಶ್ರೀಕ್ಷೇತ್ರ ಕೈಲಾಸದಲ್ಲಿ ನೆಲೆನಿಂತು ಲೋಕೋದ್ಧಾರ ಕಾರ್ಯಗೈಯುತ್ತಿರುವ ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ಅಗಸ್ಟ್ 24 ರ ರವಿವಾರದಂದು 113 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾಭಯ ಕರುಣಿಸಿ,ಆಶೀರ್ವದಿಸಿದರು.

ಮಹಾಶೈವ ಧರ್ಮಪೀಠವು ನಿಜಾರ್ಥದಲ್ಲಿ ಜಾತ್ಯಾತೀತ ಮಠವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು 113 ನೆಯ ‘ ಶಿವೋಪಶಮನ ಕಾರ್ಯ’.ಇಂದಿನ ಶಿವೋಪಶಮನ ಕಾರ್ಯದಲ್ಲಿ ರಾಯಚೂರು,ಯಾದಗಿರಿ ಮತ್ತು ಕಲ್ಬುರ್ಗಿ ಜಿಲ್ಲೆಗಳಿಂದ ಬಂದಿದ್ದ ಮುಸ್ಲಿಂ ಸಮುದಾಯದ ಭಕ್ತರುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಮದುವೆಯಾಗದೆ ಇದ್ದವರು,ಮಕ್ಕಳಾಗದೆ ಇದ್ದವರು,ಸಾಂಸಾರಿಕ ಸಮಸ್ಯೆಗಳನ್ನು ಉಳ್ಳವರು ಸೇರಿದಂತೆ ನಾನಾ ಬಗೆಯ ಸಂಕಟ ಸಮಸ್ಯೆಗಳನ್ನು ಹೊತ್ತ ಮುಸ್ಲಿಂ ಸಮುದಾಯದ ಭಕ್ತರು ಸರ್ವಧರ್ಮಸಮನ್ವಯ ಕೇಂದ್ರವಾಗಿರುವ ಮಹಾಶೈವ ಧರ್ಮಪೀಠಕ್ಕೆ ಹೆಮ್ಮೆ ಅಭಿಮಾನಗಳಿಂದ ಬರುತ್ತಿರುವುದು ಲೋಕಪಿತ ವಿಶ್ವೇಶ್ವರ ಶಿವನ ವಿಶೇಷವಾಗಿದೆ.

ವಿಶ್ವೇಶ್ವರ ಶಿವ ವಿಶ್ವೇಶ್ವರಿ ದುರ್ಗಾದೇವಿಯರ ದೇವಸ್ಥಾನದ ಮುಖಮಂಟಪ – ಪ್ರಣವಮಂಟಪದ ಕಾರ್ಯ ಭರದಿಂದ ಸಾಗಿದ್ದು ಭಕ್ತರುಗಳು ದೇವಸ್ಥಾನಕ್ಕೆ ಸಲ್ಲಿಸುವ ಕಾಣಿಕೆಯಲ್ಲಿಯೇ ದೇವಸ್ಥಾನದ ನಿರ್ಮಾಣ ಕಾರ್ಯನಡೆದಿದ್ದು ಪ್ರತಿ ತಿಂಗಳು ಶಿವೋಪಶಮನ ಕಾರ್ಯದ ಬಳಿಕ ಕಾಣಿಕೆ ಪೆಟ್ಟಿಗೆಯನ್ನು ತೆರೆದು ಕಾಣಿಕೆಯನ್ನು ಎಣಿಸಲಾಗುತ್ತದೆ.ಇಂದಿನ ಎಣಿಕೆಯಲ್ಲಿ 2,28,730 ರೂಪಾಯಿಗಳ ಕಾಣಿಕೆ ಸಂಗ್ರಹವಾಗಿತ್ತು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಅರ್ಚಕ ದೇವರಾಜ ಕರಿಗಾರ,ಮೂಲ ಕಾರ್ಯಕರ್ತ ಗೋಪಾಲ ಮಸೀದಪುರ,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ್ ಪಂಚಾಳ, ಪತ್ರಕರ್ತ ಏಳುಬಾವೆಪ್ಪ ಗೌಡ,ಶರಣಪ್ಪ ಬೂದಿನಾಳ, ಸಿದ್ರಾಮಯ್ಯ ಸ್ವಾಮಿ ಹಳ್ಳಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ್, ಷಣ್ಮುಖ ಹೂಗಾರ,ಬಸವಲಿಂಗ ಕರಿಗಾರ, ಪರಮೇಶಪ್ಪ ಮಸೀದಪುರ,ರಾಮಕೃಷ್ಣ ಯಾದವ್,ಯಲ್ಲಪ್ಪ ಕರಿಗಾರ, ಪರಶುರಾಮ ಜಡೇರ್, ಬಸವಲಿಂಗ ಪೂಜಾರಿ ಅಮರಾಪುರ, ಮಾಣಿಕರೆಡ್ಡಿ ಬೀದರ,ರಂಗನಾಥ ಮಸೀದಪುರ, ಶಿವಾನಂದ, ವೆಂಕಟೇಶ,ತಿಪ್ಪಯ್ಯ ಭೋವಿ,ಬೂದಿಬಸವ ಆನಂದ ಬಾಡದ, ಕರಿಗಾರ,ಶಿವಕುಮಾರ್ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.