ಸಗರನಾಡಿನ ಅಕ್ಷರ ಲೋಕದ ನಕ್ಷತ್ರ ಡಾ.ಭೀಮಣ್ಣ ಮೇಟಿರವರ ಜನುಮ ದಿನ ಪ್ರಯುಕ್ತ ಈ ಲೇಖನ
(1974-2024-25 ಸುವರ್ಣ ಸಂಭ್ರಮ)
ಕಾಯಕವೇ ನಾಯಕನ ಲಕ್ಷಣವೆಂದು ನಂಬಿ ಸಮಾಜ ಸೇವೆಗಾಗಿ ಸರ್ಕಾರಿ ಸೇವೆಯನ್ನು ತ್ಯಾಗ ಮಾಡಿದ ನಾಯಕನೆಂದೆ ಜನಮಾನಸದಲ್ಲಿ ನೆಲೆನಿಂತಿರುವ ಶಿಕ್ಷಣ ಪ್ರೇಮಿ ಡಾ.ಭೀಮಣ್ಣ ಮೇಟಿರವರ 50 ಸಂವತ್ಸರಗಳನ್ನು ಅತ್ಯುತ್ಸಾಹದಿಂದ ಸವೆದು ಸುವರ್ಣ ಮಹೋತ್ಸವದ ಸಂಭ್ರಮದ ಆಚರಣೆಯ ಸಂತಸದ ಸುದಿನವಾಗಿದೆ.
ಬಡತನವೇ ಬದುಕಿನ ಮೆಟ್ಟಿಲಾಗಿಸಿಕೊಂಡು ನೋವು ಅವಮಾನವೇ ಜೀವನದ ಅಡಿಗಲ್ಲು ಮಾಡಿಕೊಂಡು ಶಿಕ್ಷಣವೇ ಜೀವನದ ಏಳಿಗೆಯ ಶಿಖರವಾಗಿಸಿಕೊಂಡು ತಾನು ಬೆಳೆದು ತನ್ನವರನ್ನು ಬೆಳಸಿದ ಕಾಯಕವೇ ನಾಯಕನ ಗುಣವೆಂದು ನಂಬಿ ಬದುಕಿ ಬಾಳಿದ ನಾಯಕ ಡಾ.ಭೀಮಣ್ಣ ಮೇಟಿ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸೈದಾಪುರ ಎಂಬ ಕುಗ್ರಾಮದಲ್ಲಿ ಅತ್ಯಂತ ಬಡತನ ಕುಟುಂಬದಲ್ಲಿ 1974 ಅಗಸ್ಟ್ 20 ರಂದು ಜನಿಸಿದರು. ಚಿಕ್ಕವರಿರುವಾಗಲೆ ತಾಯಿ ಪ್ರೀತಿಯಿಂದ ವಂಚಿತರಾಗಿ ನನಗೆ ತಾಯಿ ಇಲ್ಲ, ನನಗೆ ಹಣ ಇಲ್ಲ, ಆಸ್ತಿ ಸೌಲಭ್ಯಗಳು ಇಲ್ಲ, ಹೀಗೆ ಹಲವು ಇಲ್ಲಗಳ ಮದ್ಯೆ ಎಲ್ಲವನ್ನೂ ಸಾಧಿಸಬೇಕೆಂಬ ಛಲವುಳ್ಳ ಬದುಕಿನ ಬವಣೆಗಳನ್ನು ಮೆಟ್ಟಿ ನಿಂತು ನಮ್ಮ ಕಣ್ಣು ಮುಂದೆ ಬೆಳೆದು ನಿಂತ ಸ್ಪೂರ್ತಿದಾಯಕ ನಾಯಕ ಎಂದರೆ ಡಾ.ಭೀಮಣ್ಣ ಮೇಟಿ. ತಾನು ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ನನ್ನ ಭಾಗದ ಜನ ಅನುಭವಿಸಬಾರದು ಎಂದುಕೊಂಡು ನನ್ನ ಮಿತಿಗೆ ನಿಲುಕಿದಷ್ಟದಾರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮತ್ತು ಆರ್ಥಿಕವಾಗಿ ಪ್ರಗತಿ ಹೊಂದಲು ನಾನು ಸೇವೆ ಸಲ್ಲಿಸಬೇಕು ಎಂಬ ತುಡಿತದಿಂದ ಅವರು ಸರ್ಕಾರಿ ನೌಕರಿಗೆ ಸ್ವಯಂ ಪ್ರೇರಿತರಾಗಿ ರಾಜಿನಾಮೆ ಸಲ್ಲಿಸಿ ಸಮಾಜ ಸೇವೆಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡರು. ತನ್ನ ನಿಮಿತ್ತವಾಗಿ ಪ್ರಪ್ರಥಮವಾಗಿ ಸಮಾಜ ಸುಧಾರಣೆಯಾಗಲು ಮುಖ್ಯ ಕಾರಣ ಶಿಕ್ಷಣವೇ ಮೂಲ ಮಂತ್ರ ಎಂದುಕೊಂಡು ಶೋಷಿತ ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಸದುದ್ದೇಶದಿಂದ ಶಹಾಪುರ ನಗರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಾಮಾಜಿಕ ನ್ಯಾಯದ ಹರಿಕಾರ ಹೂಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರ ಯೋಜನೆಯನ್ನು ಜಾರಿಗೆಗೊಳಿಸಿ ಸರ್ವ ಭೂರಹಿತ ಕುಟುಂಬಗಳಿಗೆ ಭೂಮಿ ಒದಗಿಸಿದ ನಾಯಕ ಅಂದು ಈ ಯೋಜನೆಯಿಂದಾಗಿ ಡಾ.ಭೀಮಣ್ಣ ಮೇಟಿಯವರ ಪೋಷಕರು ಭೂಮಿ ಒಡೆಯರಾದರು. ತನ್ನಿಮಿತ್ತವಾಗಿ ಅವರ ಸ್ಮರಣಾರ್ಥವಾಗಿ ಶಹಾಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ 2009 ರಲ್ಲಿ ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ಡಿ.ದೇವರಾಜ ಅರಸು ಶಿಕ್ಷಣ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣ ವಂಚಿತ ಸಮುದಾಯಗಳಿಗೆ ಶಿಕ್ಷಣ ನೀಡುವುದೇ ಸಂಸ್ಥೆಯ ದೇಯೋದ್ದೇಶ ಎಂದು ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದರು. ನಂತರ ಕನ್ನಡ ಮಾಧ್ಯಮ ಶಾಲೆ, CBSE ಶಾಲೆ, ICSE ಶಾಲೆಗಳನ್ನು ಶಹಾಪುರ ಹಾಗೂ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಳವಾದ ಕಲುಬುರ್ಗಿ, ಯಾದಗಿರಿ, ವಡಗೇರ, ಸೇಡಂ, ದೋರನಹಳ್ಳಿ, ಸೈದಾಪುರಗಳಲ್ಲಿ ಸಂಸ್ಥೆಯ ಸಪ್ತ ಶಾಖೆಗಳನ್ನು ಸ್ಥಾಪಿಸಿ ಈ ಮೂಲಕ 18 ಶಾಲಾ-ಕಾಲೇಜುಗಳು ಯಶಸ್ವಿಯಾಗಿ ನಡೆಸುತ್ತಾ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುವ ಮೂಲಕ ಅಕ್ಷರ ವಂಚಿತ ಶೋಷಿತ ಸಮುದಾಯಗಳಿಗೆ ಅಕ್ಷರದ ದೀವಿಗೆಯನ್ನು ಬೆಳಗಿಸಿದ ನಾಯಕ ಎಂದರೆ ಡಾ.ಭೀಮಣ್ಣ ಮೇಟಿ ಎಂದರೆ ಅತೀಶಯೋಕ್ತಿಯಾಗಲಾರದು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸಿಗಲೇಬೇಕು ಎಂಬ ಹಂಬಲದಿಂದ 2009ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಪ್ರತಿ ವರ್ಷ ನೂರಾರು ಬಡವ, ನಿರ್ಗತಿಕರ, ರೈತರ,ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕೆಲವರ ಸ್ವತ್ತಾಗದೆ ಹಲವರ ಸ್ವತಾಗಬೇಕು ಎಂಬ ಅಭಿಲಾಷೆಯಂತೆ ಅಕ್ಷರಶಃ ಅದನ್ನು ಅನುಷ್ಠಾನಗೊಳಿಸುವ ಮೂಲಕ ತಮ್ಮ ಸೇವೆಯಲ್ಲಿ ಮೇಟಿಯವರು ಸಾರ್ಥಕತೆ ಪಡೆದುಕೊಂಡಿದ್ದಾರೆ.
ಈ ಸಂಸ್ಥೆ ಮೂಲಕ ಈ ಭಾಗದ ಜನರಿಗೆ ಆರೋಗ್ಯದ ಕಾಳಜಿ ವಹಿಸಲು ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶೈಕ್ಷಣಿಕ ಉದ್ಯೋಗ ಮೇಳ, ಗ್ರಾಮೀಣ ಕ್ರೀಡಾಕೂಟ, ಬಡವರಿಗೆ ಆಹಾರದ ಕಿಟ್ ಹಂಚುವುದು ಹೀಗೆ ಹತ್ತಾರು ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ತನ್ನ ಸಂಸ್ಥೆಯ ಜೊತೆಯಲ್ಲಿ ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳು ಶೈಕ್ಷಣಿಕ ಸುಧಾರಣೆಗಾಗಿ ಪಾಸಿಂಗ್ ಮತ್ತು ಸ್ಕೋರಿಂಗ್ ಪ್ಯಾಕೇಜ ಪುಸ್ತಕಗಳನ್ನು ಸಂಪನ್ಮೂಲ ಶಿಕ್ಷಕರಿಂದ ತಯಾರಿಸಿ SSLC ಓದುತ್ತಿರುವ ಸರ್ಕಾರಿ ಶಾಲೆಗಳಿಗೆ ಪ್ರತಿ ವರ್ಷ ಉಚಿತವಾಗಿ ನೀಡುವುದರೊಂದಿಗೆ ಮಕ್ಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿ ಸ್ಪರ್ಧಾ ವಿಜೇತ ಹೀಗೆ ಹತ್ತಾರು ಕ್ರೀಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಭಾಗದ ಬಡ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲಿ ಎಂಬ ಸದಾಶಯವನ್ನು ಹೊಂದಿದ್ದಾರೆ.
ಡಾ.ಭೀಮಣ್ಣ ಮೇಟಿಯವರು ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದೆ ಕಟ್ಟಿಹಿದು ಸರ್ವಜ್ಞ ಎನ್ನುವ ಕವಿವಾಣಿಯಂತೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಮ್ಮ ಅಳಿಲು ಸೇವೆ ದೊರೆಯಬೇಕು ಎಂದು ಭಾವಿಸಿಕೊಂಡು ತಮ್ಮ ಬದುಕಿನ ಅರ್ಧ ಶತಮಾನವನ್ನು ಅರ್ಥಪೂರ್ಣವಾಗಿ ಕಳೆದಿರುವ ನಿಮಗೆ ಇನ್ನೂ ಹೆಚ್ಚಿನ ಶೈಕ್ಷಣಿಕ ಹಾಗೂ ಸಾಮಾಜಿಕ, ರಾಜಕೀಯ ಸೇವೆ ನಿಮ್ಮಿಂದ ನಡೆಯಲಿ ಆಶಿಸುತ್ತಾ 51ನೇ ವರ್ಷದ ಜನುಮ ದಿನದ ಹಾರ್ಧಿಕ ಶುಭಾಶಯಗಳು ಕೋರುವೆನು. ನಿಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಸುಖ ಸಂತೋಷ ಭಗವಂತ ದಯಪಾಲಿಸಲಿ ಭವಿಷ್ಯದ ದಿನಗಳಲ್ಲಿ ಇನ್ನೂ ಹೆಚ್ಚಿನ ಜನಸೇವೆ ಮಾಡುವ ಶಕ್ತಿ ನೀಡಲಿ ಶುಭ ಕೊಡುವೆನು.
ಲೇಖನ : ಚಂದ್ರಶೇಖರ ಕರ್ನಾಳ
ಕನ್ನಡ ಉಪನ್ಯಾಸಕರು ಡಿ.ಡಿ.ಯು.ಪದವಿ ಪೂರ್ವ ಕಾಲೇಜು ಶಹಾಪುರ, ದೋರನಹಳ್ಳಿ.