ಶಹಪುರ : ಕನಕದಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾತೃಚಾಲಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವತಂತ್ರ ದಿನಾಚರಣೆಯ ನಿಮಿತ್ತ ಬಿಜೆಪಿ ಮುಖಂಡ ಗುರುಕಾಮರವರು ಧ್ವಜಾರೋಹಣ ಗೈದು ಮಾತನಾಡುತ್ತಾ, ಬ್ರಿಟಿಷರ ಆಡಳಿತದಲ್ಲಿ ನಲುಗಿದ ಭಾರತ ದೇಶ ಸಣ್ಣಪುಟ್ಟ ರಾಜ್ಯಗಳಾಗಿ ರಾಜರು ರಾಜ್ಯಭಾರ ಮಾಡುತ್ತಿದ್ದ ಅಂತಹ ಸಂದರ್ಭದಲ್ಲಿ 1857 ರಿಂದ ಆರಂಭವಾದ ಸ್ವಾತಂತ್ರ ಹೋರಾಟ ಹಲವಾರು ಜನರ ತ್ಯಾಗ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂದು ಹೇಳಿದರು. ಸುಭಾಷ್ ಚಂದ್ರ ಬೋಸ್ ಮಹಾತ್ಮ ಗಾಂಧೀಜಿ ಸೇರಿದಂತೆ ಹಲವಾರು ಜನರ ಪ್ರಾಣ ಬಲಿದಾನದ ಫಲವಾಗಿ 1947 ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂದರು. ನಂತರ ಪತ್ರಿಕರ್ತರಾದ ಬಸವರಾಜ ಕರೇಗಾರ ಮಾತನಾಡಿ, ಬ್ರಿಟೀಷರು ವ್ಯಾಪಾರಕ್ಕಾಗಿ ಭಾರತ ದೇಶಕ್ಕೆ ಆಗಮಿಸಿದರು.300 ವರ್ಷಗಳ ಕಾಲ ವಿದೇಶಿಗರು ದೇಶವನ್ನಾಳಿದರು. ಸ್ವಾತಂತ್ರ ಪಡೆಯಲು ದೇಶದಲ್ಲಿ ಹಲವಾರು ಹೋರಾಟಗಳು ನಡೆದವು. 1885 ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೊಂಡು ನಂತರ ಹಲವಾರು ಜನರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿಪ್ಪಣ್ಣ ಕ್ಯಾತನಾಳ್ ವಹಿಸಿದ್ದರು. ಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ಕಾರ್ಯಕ್ರಮದಲ್ಲಿ ರಾಜು ಪತ್ತಾರ್, ರಾಘವೇಂದ್ರ ನಗರಸಭೆ ಸದಸ್ಯರು,ಖಾದರ್ ಪಾಷ ಇಜೇರಿ,ಯಮನಪ್ಪ ನಾಶಿ, ಹನುಮಂತ್ರಾಯ ಬಿರಾದರ, ವರ್ಧನ್ ಹಿಮ್ಮಡಗಿ ಪಾಲ್ಗೊಂಡಿದ್ದರು. ಶಿಕ್ಷಕಿ ಭಾಗ್ಯಶ್ರೀ ಗನಾತೆ ಕಾರ್ಯಕ್ರಮ ನಿರೂಪಿಸಿದರು. ಹೀನ ಬೇಗಂ ಸ್ವಾಗತಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.