ಶಹಾಪುರ : ಆಗಸ್ಟ್ 15ರಂದು ತಾಲೂಕಿನ ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವಂತೆ ಆದೇಶ ಹೊರಡಿಸಬೇಕೆಂದು ತಾಲೂಕು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಯಲ್ಲಪ್ಪ ನರಿ ಸಲಾದಾಪೂರ ಹೇಳಿದರು. ಕರ್ನಾಟಕ ಪ್ರದೇಶ ಕುರುಬರ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಮತ್ತು ಕನಕ ಗುತ್ತಿಗೆದಾರರ ಸಂಘ ಜಂಟಿಯಾಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಸ್ವಾತಂತ್ರ್ಯ ಹೋರಾಟಗಾರ ಕಿತ್ತೂರು ರಾಜ್ಯದ ಸೇನಾನಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವ್ಯಕ್ತಿ ಸಂಗೊಳ್ಳಿ ರಾಯಣ್ಣ. ಅಂತಹ ವ್ಯಕ್ತಿಯ ಜನ್ಮ ದಿನಾಚರಣೆ ಆಗಸ್ಟ್ 15ರಂದು ಗೌರವ ಸಮರ್ಪಣೆ ಸಲ್ಲಿಸುವುದರ ಮುಖಾಂತರ ತಾಲೂಕಿನ ಎಲ್ಲಾ ಸರಕಾರಿ ಕಾಲೇಜುಗಳಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುವುದರಿಂದ ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನಕ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮಾಳಿಂಗರಾಯ ಮಂಡಗಳ್ಳಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ರಾಯಪ್ಪ ಚಲುವಾದಿ, ಪ್ರಧಾನ ಕಾರ್ಯದರ್ಶಿ ಮಹೇಶ ರಸ್ತಾಪುರ, ಸೀನು ನಾಶಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಲಭೀಮ ಮಡ್ನಾಳ, ಭೀಮಣ್ಣಗೌಡ ಹುಲಕಲ್, ಮರ್ದಾನಿ ಸಲಾದಪುರ ಸೇರಿದಂತೆ ಇತರರು ಇದ್ದರು.