ರಾಜ್ಯದ್ಯಾದಂತ ಸರಕಾರದ ವತಿಯಿಂದ ರಾಯಣ್ಣನ ಜಯಂತಿ ಆಚರಿಸಲು ಅಯ್ಯಪ್ಪಗೌಡ ಕರೆ

ಬೆಂಗಳೂರು : ರಾಜ್ಯದ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲಾ ಸರ್ಕಾರಿ ಅರೆ ಸರ್ಕಾರಿ, -ಖಾಸಗಿ ಕಛೇರಿಗಳಲ್ಲಿ ಮತ್ತು ಗ್ರಾಮ ಪಂಚಾಯತಗಳಲ್ಲಿ ಬರುವ ಆಗಸ್ಟ್ 15ರಂದು 79 ನೇ ಸ್ವಾತಂತ್ಯ ದಿನಾಚರಣೆಯಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ 229 ನೇಯ ಜಯಂತಿ ಅಂಗವಾಗಿ ಸಂಗೊಳ್ಳಿ ರಾಯಣ್ಣ ನವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುವ ಮೂಲಕ ಕಡ್ಡಾಯವಾಗಿ ಜಯಂತಿ ಆಚರಿಸಬೇಕೆಂದು ಸರ್ಕಾರ ಸುತ್ತೊಲೆ ಹೊರಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘ (ರಿ) ಬೆಂಗಳೂರು ಯುವ ಘಟಕದ ರಾಜ್ಯ ಉಪಾಧ್ಯಕ್ಷ ಅಯ್ಯಪ್ಪಗೌಡ ಕರೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಗೊಳ್ಳಿ ರಾಯಣ್ಣ ನವರ ನಾಡು-ನುಡಿ, ನೆಲ-ಜಲ, ದೇಶಪ್ರೇಮ, ದೇಶಭಕ್ತಿ ಅನುಕರಣೀಯವಾಗಿದ್ದು, ಕಿತ್ತೂರು ರಾಣಿ ಚೆನ್ನಮ್ಮ ರವರ ಆಪ್ತರಾದ ಸಂಗೊಳ್ಳಿ ರಾಯಣ್ಣ ರಾಣಿ ಚೆನ್ನಮ್ಮ ನವರ ಆಸ್ಥಾನದಲ್ಲಿ ಸೈನ್ಯವನ್ನು ಮುನ್ನಡೆಸಿ, ಸೇವೆ, ಕಾಯಕ ನಿಷ್ಠೆ ಮೆರೆದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನ ಸಾಮಾನ್ಯರನ್ನು ಸಂಘಟಿಸಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದ ರಾಯಣ್ಣ ನವರ ಜೀವನ ಚರಿತ್ರೆ ಕುರಿತು ಭಾಷಣ, ಪ್ರಬಂಧ, ನಿಬಂಧ, ರಂಗೋಲಿ ಸ್ಪರ್ಧೆಗಳು ನಡೆಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಹಾಗೂ ಸ್ಪರ್ಧೆ ಯಲ್ಲಿ ಭಾಗವಹಿಸಿದವರಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಬೇಕು. ಇದಲ್ಲದೆ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕ್ರಾಂತಿ ಗೀತೆಗಳು, ಜನಪದ ಹಾಡುಗಳು ಹಾಡಿಸುವುದು. ನಾಟಕ, ನೃತ್ಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿ ಸುವ ಮುಖಾಂತರ ಅರ್ಥ ಪೂರ್ಣವಾಗಿ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಜಯಂತಿ ಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಸರ್ಕಾರ ಸುತ್ತೊಲೆ ಹೊರಡಿಸಲು ಅಯ್ಯಪ್ಪಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಕೋರಿಕೊಂಡಿದ್ದಾರೆ.