*ಗುಣದ ಬುತ್ತಿ*
ಯಾರ ವರ್ತನೆ ಹೇಗೆ
ಇರಲಿ, ಬಂದರೂ,
ಬಾರದಿದ್ದರೂ, ಇಣುಕಿ
ಹೋದರೂ,
ಕೈ ಜೋಡಿಸಿದರೂ,
ಜೋಡಿಸದೆ ಇದ್ದರೂ..
ನಮ್ಮ ನಡೆ ಸನ್ಮಾರ್ಗದತ್ತ..
ನಮ್ಮದೆಂದು ಪ್ರೀತಿಯಿಂದ
ಭಾಗವಹಿಸಿದವರು,
ಭಾಗವಹಿಸದೆ ಇದ್ದವರೂ
ನೆಮ್ಮದಿ ಕಾಣಲಿ..
ನಮ್ಮದೇನಿದ್ದರೂ
ಸಾತ್ವಿಕ ಸಂಪ್ರೀತಿ ನಡೆ…
ಅವರವರ ಭಾವ ಭಕುತಿ
ಅವರಿಗೆ ಬಿಟ್ಟಿದ್ದು..
ಅವರವರ ನಡೆ ನುಡಿ,
ಸ್ವಭಾವ, ಸದ್ಭಾವ,
ದುರ್ಭಾವಕ್ಕನುಗುಣವಾಗಿ
ದೇವನೇ ಕಟ್ಟಿಹನು
ಗುಣದ ಬುತ್ತಿ
ಅವರವರ ಪಾಲಿಗೆ
ಬಂದ ಬುತ್ತಿ ತಿಂದು
ಅನುಭವಿಸಬೇಕಲ್ಲವೇ..?
ಅದನ್ನು ತಪ್ಪಿಸಲಾದೀತೆ..?
– *ಮಲ್ಲಿಕಾರ್ಜುನ ಮುದ್ನೂರ*