ಕುರುಬರನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರ ಸಚಿವರಿಗೆ ಮನವಿ 

ಶಹಾಪುರ,,

ರಾಜ್ಯದಲ್ಲಿ ಕುರುಬ ಸಮುದಾಯವು ಅತ್ಯಂತ ಹಿಂದುಳಿದಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ತಿಂಥಣಿ ಬ್ರಿಡ್ಜ್ ನ ಕನಕ ಗುರು ಪೀಠದ ಪೂಜ್ಯರಾದ ಪೂಜ್ಯಶ್ರೀ ಸಿದ್ದರಾಮಯ್ಯನಂದಪುರಿ ಮಹಾಸ್ವಾಮಿಗಳು, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ರಘುನಾಥ್ ಮಲ್ಕಾಪುರೆ, ಮಾಜಿ ಶಾಸಕರು ಮತ್ತು ಸಮುದಾಯದ ಮುಖಂಡರು ದೆಹಲಿಯಲ್ಲಿಂದು ಬುಡಕಟ್ಟು ಸಚಿವರಿಗೆ ಹಾಗೂ ರಾಜ್ಯದ ಸಂಸದರಿಗೆ ಮತ್ತು ಕೇಂದ್ರ ಸಚಿವರಿಗೆ ಮನವಿ ಮಾಡಿದರು.

“ರಾಜ್ಯದಲ್ಲಿ ಕುರಿಗಳೊಟ್ಟಿಗೆ ಕುರಿ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದ ತೀರ ಹಿಂದುಳಿದ ಕುರುಬರಿಗೆ ಎಸ್ ಟಿ ಮೀಸಲಾತಿ ಒದಗಿಸಿಕೊಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ರಾಜಕೀಯ ಮುಖಂಡರು ರಾಜ್ಯ ಸರಕಾರವು ಕಡತಗಳನ್ನು ಕಳುಹಿಸಿದ್ದರೂ ಕೂಡ ಕೇಂದ್ರವು ಹೆಚ್ಚು ಪರಿಗಣಿಸುತ್ತಿಲ್ಲ ಎನ್ನಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ರಾಜಕೀಯ ಮುಖಂಡರ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಕುರುಬರ ಎಸ್ ಟಿ ಮೀಸಲಾತಿ ಹಿಂದುಳಿಯುತ್ತಾ ಬಂದಿದೆ. ಕರ್ನಾಟಕದ ಬೀದರ್ ಮತ್ತು ಕೊಡಗು ಜಿಲ್ಲೆಗಳಲ್ಲಿ ಕುರುಬ ಸಮುದಾಯದವರು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದನ್ನು ರಾಜ್ಯಾದ್ಯಂತ ನೀಡಲಿ ಎಂದು ರಾಜ್ಯದ ಕುರುಬರ ಆಶಯವಾಗಿದೆ. ಆದರೆ ಇದನ್ನು ಸರಕಾರಗಳು ಅಷ್ಟಾಗಿ ಪರಿಗಣಿಸುತ್ತಿಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಜಗದ್ಗುರುಗಳು ಮತ್ತು ಶಾಖಾಮಠದ ಪೂಜ್ಯರಿಂದ ರಾಜ್ಯದಲ್ಲಿ ಪಾದಯಾತ್ರೆ ಕೈಗೊಂಡರು ಫಲ ಸಿಗಲಿಲ್ಲ”

” ರಾಜ್ಯದಲ್ಲಿ ಕುರುಬರು ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ರಾಜಕೀಯ,ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲವಾಗಿದ್ದಾರೆ. ರಾಜಕೀಯವಾಗಿ ಬೆಳೆದ ಕೆಲವು ಮುಖಂಡರನ್ನು ಹೊರತುಪಡಿಸಿದರೆ ಶೇಕಡ 80ರಷ್ಟು ಜನ ಹಿಂದುಳಿದಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಕುರುಬರು ಆರ್ಥಿಕವಾಗಿ ದುರ್ಬಲರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ರಾಜ್ಯದ ಸಂಸದರು ಇದಕ್ಕೆ ಸ್ಪಂದಿಸಬೇಕು ಎಂದು ಯಾದಗಿರಿ ಜಿಲ್ಲಾ ಕುರುಬ ಸಮಾಜದ ಮುಖಂಡರಾದ ಶರಬಣ್ಣ ರಸ್ತಾಪುರ ಮತ್ತು ಸಿದ್ದಣ್ಣ ಕನ್ಯಾಕೋಳೂರು ಒತ್ತಾಯಿಸಿದ್ದಾರೆ “