ಬಸವರಾಜ ಕರೇಗಾರ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನ | ಸೇವೆಗೆ ಸಂದ ಗೌರವ | ಸ್ನೇಹಿತ ಬಂಧುಗಳಿಂದ ಅಭಿನಂದನೆಗಳ ಮಹಾಪೂರ

ಶಹಾಪುರ,,

ಜುಲೈ 26ರಂದು ಯಾದಗಿರಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು ಅಂದು ನಡೆಯುವ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ ಸೇವೆಗೈದ 11 ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಜಿಲ್ಲಾ ಕಾರ್ಯನಿರತ ಪತ್ರಿಕರ್ತರ ಸಂಘದ ಅಧ್ಯಕ್ಷರಾದ ಮಲ್ಲಪ್ಪ ಸಂಕೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಸತತ 20 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.2005 ರಿಂದ ಇಲ್ಲಿಯವರೆಗೂ ವಾರಪತ್ರಿಕೆ, ಮಾಸಪತ್ರಿಕೆ, ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದು ಇದನ್ನು ಪರಿಗಣಿಸಿ ನನ್ನನ್ನು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಶಸ್ತಿ ಪುರಸ್ಕೃತ ಶಹಾಪುರ ತಾಲೂಕು ಪತ್ರಕರ್ತರಾದ ಬಸವರಾಜ ಕರೇಗಾರ ತಿಳಿಸಿದರು.

 ” ಪತ್ರಿಕೋದ್ಯಮದಲ್ಲಿ ನನಗೆ ಮಾರ್ಗದರ್ಶಕರಾಗಿ ಲೋಪ ದೋಷಗಳನ್ನು ತಿದ್ದಿದ ಗುರುಗಳಾದ ಪೂಜ್ಯ ಮುಕ್ಕಣ್ಣ ಕರಿಗಾರ ಅವರಿಗೂ, ನನ್ನ ವರದಿಗಳನ್ನು ನೋಡಿ ಸದಾ ನನಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಪೂಜ್ಯ ಶರಣು ಬಿ ಗದ್ದುಗೆಯವರೆಗೂ,ಹಿರಿಯರು ಸದಾ ನನಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ಪ್ರಹ್ಲಾದ್ ತಿಳಗೋಳ ಸರ್ ಅವರಿಗೂ, ತಮ್ಮ ನೇರ ನುಡಿಗಳಿಂದ ನನ್ನನ್ನು ಸದಾ ಪ್ರೋತ್ಸಾಹಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಲ್ಲಪ್ಪ ಸಂಕೀನ್ ರವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸದಾ ನನ್ನ ಜೊತೆಗಿದ್ದು ಕೆಲವು ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾದಾಗ ನನಗೆ ದಾರಿದೀಪವಾಗಿ ಪ್ರೋತ್ಸಾಹಿಸಿದ ತಾಲೂಕು ಪತ್ರಿಕರ್ತರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮುದ್ನೂರ್ ಅವರಿಗೆ, ಸದಾ ನನ್ನ ಹಿತವನ್ನು ಬಯಸುತ್ತಿರುವ ನನ್ನ ಹಿತೈಷಿಯಾಗಿ ಜೊತೆಗೂಡಿ ತಿದ್ದಿ ತಿಡಿದ ಮಲ್ಲಯ್ಯ ಪೋಲಂಪಲ್ಲಿಯವರೆಗೂ ನಾನು ಸದಾ ಚಿರಋಣಿ. ಸದಾ ನನಗೆ ಆತ್ಮೀಯರಂತೆ ನನ್ನ ಒಳಿತನ್ನು ಬಯಸುತ್ತಿರುವ ವಿಶಾಲ್ ಶಿಂದೆಯವರಿಗೆ, ಆತ್ಮೀಯರಾದ ರಾಘವೇಂದ್ರ ಹಾರಣಗೇರಾ,ಪ್ರಕಾಶ್ ಅವರಿಗೆ ಧನ್ಯವಾದಗಳು.

” ಪತ್ರಿಕಾ ಮಾಧ್ಯಮದಲ್ಲಿ ನನ್ನ ಸುದ್ದಿಗಳನ್ನು ಪ್ರಕಟಿಸಿ ಪ್ರಚಾರಿಸಿದ ಯಾದಗಿರಿ ಟೈಮ್ಸ್ ಪತ್ರಿಕೆಯ ಸಂಪಾದಕರಾದ ವೈಜನಾಥ್ ಹಿರೇಮಠ ಅವರಿಗೆ ಧನ್ಯವಾದಗಳು. ಪತ್ರಕರ್ತರಾದ ರಾಜಶೇಖರ್ ಪಾಟೀಲ್, ಮಲ್ಲಿಕಾರ್ಜುನ ಮಳ್ಳಿಕೇರಿ, ಮಹೇಶ ಪತ್ತಾರ ಸೇರಿದಂತೆ ಅಭಿನಂದನೆ ಸಲ್ಲಿಸಿದ ನನ್ನ ಸ್ನೇಹಿತರು ಹಿತ ಬಂಧುಗಳು ಎಲ್ಲರಿಗೂ ನಾನು ಚಿರಋಣಿ.