ದಿ.ಮರಿಗೌಡ ಹುಲ್ಕಲ್ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಈ ಲೇಖನ  : ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಮರಿಗೌಡ ಹುಲ್ಕಲ್ 

ದಿ.ಮರಿಗೌಡ ಹುಲ್ಕಲ್ 

ಲೇಖನ :: ಬಸವರಾಜ ಕರೇಗಾರ 

ಜನರ ಹೃದಯದಲ್ಲಿ ಅಜರಾಮರರಾಗಿ ಹೋದ ಮರಿಗೌಡರು ನಿಷ್ಕಲ್ಮಶ ಹೃದಯಿ,ಪಕ್ಷನಿಷ್ಠೆ, ಜನನಾಯಕ, ಜಾತ್ಯಾತೀತವಾಗಿ ನಾವೆಲ್ಲರೂ ಒಂದೇ ನಮ್ಮಲ್ಲಿ ಭೇದ ಭಾವವಿಲ್ಲ ರಾಜಕೀಯವೇ ಬೇರೆ ಮಾನವೀಯತೆಯೆ ಬೇರೆ ಎಲ್ಲರೂ ಸುಖ ದುಃಖದಲ್ಲಿ ಪಾಲ್ಗೊಂಡು ತನ್ನ ಆಸೆಗಳನ್ನೆಲ್ಲಾ ಬದಿಗೊತ್ತಿ ಇತರರ ಸುಖ ದುಃಖದಲ್ಲಿ  ಸಮಾಜದ ಒಳಿತಿಗಾಗಿ ದುಡಿದವರು ಮರಿಗೌಡ ಹುಲ್ಕಲ್ ಅವರು. ಸುದೀರ್ಘಕಾಲ ರಾಜಕೀಯದಲ್ಲಿದ್ದು ಕಾಂಗ್ರೆಸ್ ಪಕ್ಷದ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ನಡೆದುಕೊಂಡವರು. ದರ್ಶನಾಪುರ ಕುಟುಂಬದ ಅನುಯಾಯಿಯಾಗಿ ಪರಮಾಪ್ತರಾಗಿದ್ದರು. ಸಿದ್ದರಾಮಯ್ಯನವರ ಆಪ್ತರಾಗಿದ್ದರೂ ಎಂದು ನಾನು ಮುಖ್ಯಮಂತ್ರಿಗಳ ಆಪ್ತರೆಂದು ಬೇರೊಬ್ಬರಲ್ಲಿ ಅಹಂ ತೋರಿಸಿಕೊಳ್ಳಲಿಲ್ಲ. ಇಂದು ಮುಖ್ಯಮಂತ್ರಿಗಳ ಹಿಂದೆ ನಿಂತು ಪೋಸ್ ಕೊಡುವ ನೂರಾರು ಜನರು ನಾಯಕರಿದ್ದಾರೆ. ಮರಿಗೌಡರು ಅಂತಹ ಯಾವುದೇ ಅಹಂ ತೋರದೆ ಸಾರ್ವಜನಿಕ ಜನರ ಮಧ್ಯದಲ್ಲಿದ್ದು ಜನ ನಾಯಕರಾದರು. ಸರಕಾರದ ಕೆಲಸ ಎಂದು ಕೇಳಿ ಬಂದವರಿಗೆ ಕಾನೂನಿನಡಿಯಲ್ಲಿ ಕೆಲಸಗಳನ್ನು ಕೊಡಿಸಿದರು. ಸಚಿವರ ಆಪ್ತರೆಂದು ಹೇಳಿಕೊಂಡು ಇಂದಿನ ದಿನಮಾನಗಳಲ್ಲಿ ಲಕ್ಷಾನುಗಟ್ಟಲೆ ಹಣ ಪೀಕುವ ವಿಧಾನಸೌಧ, ತಾಲೂಕು ಜಿಲ್ಲಾ ಮಟ್ಟದಲ್ಲಿರುವ ಅನೇಕ ಆಪ್ತರನ್ನು ನಾವು ಕಾಣಬಹುದು. ರಾಜ್ಯದ ನಾಯಕರಾಗಿದ್ದರೂ ಕೂಡ ದರ್ಶನಪುರ ಕುಟುಂಬವನ್ನು ಬಿಡಲಿಲ್ಲ. ನಂಬಿಕೆಗೆ ಅರ್ಹರೆಂದರೆ ಮರಿಗೌಡ ಹುಲ್ಕಲ್ ಅವರು.

ಕುರಿ ನಿಗಮದ ಅಧ್ಯಕ್ಷರಾದರು. ಕಾಡಾ ಅಧ್ಯಕ್ಷರಾದರೂ ಕೂಡ ಜಪ್ಪಯ್ಯ ಎನ್ನಲಿಲ್ಲ. ಕೋಟಿಗಟ್ಟಲೆ ಹಣಗಳಿಕೆ ಮಾಡಬಹುದಿತ್ತು. ಸಚಿವರ ಹೆಸರೇಳಿ ಮೋಸ ಮಾಡುವ ಇಂದಿನ ರಾಜಕಾರಣಿಗಳಿಂದ ಬೇಸರಗೊಂಡಿದ್ದರು. ಮೌಲ್ಯಯುತ ತತ್ವ ಸಿದ್ಧಾಂತದ ರಾಜಕೀಯಕ್ಕೆ ಬದ್ಧರಾಗಿದ್ದರು. ನೌಕರಿ ಕೊಡಿಸಿದವರು ಆದರೆ ಅವರಿಂದ ಒಂದು ನಯಾಪೈಸೆಯನ್ನು ಅಕ್ರಮವಾಗಿ ಗಳಿಸಲಿಲ್ಲ. ಅಕ್ರಮವಾಗಿ ನೌಕರಿ ಕೊಡಿಸಿ ಎಂದು ಕೇಳಿ ಬಂದವರನ್ನು ತಿರಸ್ಕರಿಸಿದ್ದರು. ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಗೌಡರು. ಅಡ್ಡ ದಾರಿಯಲ್ಲಿ ದುಡ್ಡು ಮಾಡುವ ಗೋಜಿಗೆ ಹೋಗದ ಮರಿಗೌಡರು ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಾಗಬೇಕಿತ್ತು. ಅದೆಕೊ  ಕೈಜಾರಿ ಪರರ ಪಾಲಾಯಿತು. ಇಂತಹ ನಿಷ್ಠಾವಂತರಿಗೆ ಈಗಿನ ರಾಜಕೀಯ ಒಗ್ಗುವುದಿಲ್ಲ ಅನಿಸುತ್ತದೆ.ಸಾಲ ಮಾಡಿ ರಾಜಕೀಯ ಮಾಡಿದ ಮರಿಗೌಡರು ನಮ್ಮನ್ನಗಲಿ ಇಂದಿಗೆ ಒಂದು ವರ್ಷ ಆಯಿತು.ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೆಂದು ಹಾರೈಸೋಣ..

****************************

ಮೂರ್ನಾಲ್ಕು ವರ್ಷದ ಪರಿಚಯ ಅಚ್ಚುಮೆಚ್ಚಿನ ನಾಯಕರಾಗಿದ್ದರು ಗೌಡರು.ಬರಬೇಕು ಬಿ.ಕರೇಗಾರರು ತಾವೆನಿದ್ದರು ಸಮಸ್ಯೆಗಳ ಬುಟ್ಟಿಯನ್ನೆ ತಂದಿರುತ್ತಿರಿ.ಸಾದರಪಡಿಸಿ ಎಂದು ಕಾಮಿಡಿ ಮಾಡುತ್ತಿದ್ದರು.ನಾನು ನನ್ನ ಸಮಸ್ಯೆ ಹೇಳಿದಾಗ,ನನಗೆ ಗೊತ್ತಯ್ಯ.ಶಾಸಕರಿಗೆ ಹೇಳಿ ಮಾಡಿಸುತ್ತೇನೆ.ಅದೇನು ದೊಡ್ಡದಾ..ಎಂದು ಹೇಳಿದ ಮಹಾನ್ ಚೇತನ ನಾಳೆ ನಮ್ಮನ್ನಗಲಿ ಒಂದು ವರ್ಷವಾಯಿತು

ರಾಜಕೀಯ,ಸಮುದಾಯ,ಸಾಮಾಜಿಕದ ಬಗ್ಗೆ ಹಲವಾರು ವಿಷಯಗಳನ್ನು ಮರಿಗೌಡರಲ್ಲಿ ಮಾತನಾಡಿದ್ದೇವು. ತಮ್ಮ ವ್ಯಾಪ್ತಿಗೆ ಬಂದಿರುವ ಹಲವು ಸಮಸ್ಯೆಗಳನ್ನು ಖುದ್ದಾಗಿ ಮುಖ್ಯಮಂತ್ರಿಗಳ ಬಳಿ ಕರೆಯಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ್ದರು. ಇಂದು ರಾಜ್ಯದಲ್ಲಿ ಗುರುತಿಸಿಕೊಂಡಿರುವ ಅಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇವೆ. ನಮ್ಮ ಸಮಸ್ಯೆಗಳನ್ನು ನೇರವಾಗಿ ಶಾಸಕರ ಬಳಿ ಹೋಗಿ ಕೇಳಿದಾಗ ಇತ್ಯರ್ಥವಾಗದ ಸಂದರ್ಭದಲ್ಲಿ ಶಾಸಕರ ಮನವೊಲಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ತಿಳಿಹೇಳಿದ್ದರು. ಪ್ರಸ್ತುತ ಸಚಿವರಿಂದ ಸಮಸ್ಯೆಗಳನ್ನು ಪರಿಹರಿಸಿಕೊಟ್ಟಿದ್ದಾರೆ. ಅಂತಹ ನಾಯಕರು ನಮ್ಮ ಕಣ್ಮುಂದೆ ಇಲ್ಲ. ಹಲವು ಪ್ರಶಸ್ತಿಗಳನ್ನು ಕೂಡ ಇತರರಿಗೆ ಕೇಳಲು ಹೋದಾಗ ನಮ್ಮ ಸಾಧನೆ ನೋಡಿ ಗುರುತಿಸಿಕೊಡಬೇಕೆ ಹೊರತು ಬೇರೊಬ್ಬರಿಂದ ಹೇಳಿಸಿಕೊಳ್ಳುವಂತಾಗಬಾರದು ಎಂದು ತಿಳಿ ಹೇಳುತ್ತಿದ್ದರು. ಎಂದೂ ಕೂಡ ಒಂದೇ ಸಮುದಾಯದ ನಾಯಕರೆಂದು ಗುರುತಿಸಿಕೊಳ್ಳಲಿಲ್ಲ. ಸರ್ವ ಸಮುದಾಯದ ನಾಯಕರಾಗಿದ್ದರು.

ನಾವೆನ್ನುತ್ತೇವೆ ಯಾರನ್ನೂ ಬೆಳೆಸಲಿಲ್ಲ ಎಂದು, ಮರಿಗೌಡರು ಹೇಳುತ್ತಿದ್ದರು ನಮ್ಮಷ್ಟಕ್ಕೆ ನಾವೇ ಜನನಾಯಕರಾಗಬೇಕು. ಅಂತಹ ತತ್ವ ಮೌಲ್ಯ ಸಿದ್ದಾಂತಗಳನ್ನು ಬೆಳೆಸಿಕೊಂಡು ರಾಜಕಾರಣ ಮಾಡಬೇಕು.ಅಂದಾಗ ಮಾತ್ರ ಜನನಾಯಕರಾಗಲು ಸಾಧ್ಯ ಎಂದು..

ಗೌಡರ ಜೊತೆ  ಮಾತನಾಡುವಾಗ ಸಮಯವೇ ಗೊತ್ತಾಗುತ್ತಿರಲಿಲ್ಲ. ಕೆಲವೊಂದು ವಿಷಯ ತಾಸು ಘಟ್ಟಲೆ ಮಾತನಾಡುತ್ತಿದ್ದರು. ಎಂದು ಕೂಡ ವ್ಯವಹಾರದ ಮಾತುಗಳನ್ನಾಡಲಿಲ್ಲ. ಅಂತಹ ಪ್ರಾಮಾಣಿಕ ವ್ಯಕ್ತಿ ಅವರಾಗಿದ್ದರು.ಕಣ್ಣಂಚಿನಲ್ಲಿ ನೀರು ಬರುತ್ತಿದೆ.ಅಮೂಲ್ಯ ರತ್ನವನ್ನು ನಾವು ಕಳೆದುಕೊಂಡಿದ್ದೇವೆ. ಕೆಲವರಿಗೆ ಅನ್ನಿಸುತ್ತಿದೆ ಯಾರನ್ನು ಬೆಳೆಸಲಿಲ್ಲ ಗೌಡರು ಎಂದು. ಇಂದು ನಮ್ಮಷ್ಟಕ್ಕೆ ನಾವೇ ಬೆಳೆಯಬೇಕೆ ಹೊರತು ಬೇರಾರು ಬೆಳೆಸುವುದಿಲ್ಲ ಎಂದು.

 ನಮ್ಮ ನೋವು ನಲಿವುಗಳನ್ನು ಕೇಳುವವರು ನಮಗಿಲ್ಲ ಎಂದು ಪ್ರಸ್ತುತದಲ್ಲಿ ಅನ್ನಿಸುತ್ತಿದೆ. ನಾನು ಕೇಳಲು ಹೋದಾಗ ಆಗುವುದಿಲ್ಲ ಎಂದರು. ಮರಿಗೌಡರನ್ನು ಕರೆದುಕೊಂಡು ಹೋಗಿ ಕೇಳಿದಾಗ ಕೆಲಸವಾಯಿತು. ಇದು ಹೇಗೆ ಎಂದರೆ ಒಬ್ಬ ತಾತ್ವಿಕ ಮೌಲ್ಯಯುತ ರಾಜಕಾರಣಿಗೆ ಇದು ಸಾಧ್ಯ ಎಂದನಿಸುತ್ತದೆ.ಇಂದು ಗೌಡರು ನಮ್ಮ ಮುಂದೆ ಇಲ್ಲ.ಮನದಾಳದಲ್ಲಿ ದುಃಖವಾಗುತ್ತಿದೆ.ಮರುಹುಟ್ಟು ಇರಬಾರದೇನೊ ಎಂದು…..

ಬಸವರಾಜ ಕರೇಗಾರ