ಮಾನಸಿಕ ಸಮತೋಲನ ಕಾಪಾಡುವುದು ಮುಖ್ಯ – ರಾಕೇಶ ಕಾಂಬಳೆ

ಚಿಕ್ಕಮಗಳೂರು : ಮಾನಸಿಕ ಆರೋಗ್ಯವೂ ಆರೋಗ್ಯಕರವಾಗಿರುವ ಗ್ರಹಣಶಕ್ತಿಯ ಅಥವಾ ಭಾವನೆಯ ಮಟ್ಟವನ್ನು ಅಥವಾ ಮಾನಸಿಕ ಅಸ್ವಸ್ಥತೆ ಇಲ್ಲದಿರುವುದನ್ನು ವಿವರಿಸುವುದರ ಜೊತೆಗೆ ರಚನಾತ್ಮಕ ಮತ್ತು ಮನೋವಿಜ್ಞಾನ ಅಥವಾ ಸಮಗ್ರತಾ ಸಿದ್ಧಾಂತ ವಿಭಾಗದ ದೃಷ್ಟಿಕೋನಗಳಿಂದ ಮಾನಸಿಕ ಆರೋಗ್ಯ ಜೀವನವನ್ನು ಅನುಭವಿಸಬಲ್ಲ ವ್ಯಕ್ತಿಯ ಸಾಮರ್ಥ್ಯವನ್ನು ಹಾಗೂ ಜೀವನದ ಚಟುವಟಿಕೆಗಳು ಮತ್ತು ಮನೋವೈಜ್ಞಾನಿಕ ಸ್ಥಿತಿಸ್ಥಾಪಕತ್ವವನ್ನು ಸಾಧಿಸಲು ಮಾಡುವ ಪ್ರಯತ್ನದ ನಡುವೆ ಸಮತೋಲನ ಗಳಿಸುವುದನ್ನು ಒಳಗೊಂಡಿರುತ್ತದೆ ಎಂದು ಚಿಕ್ಕಮಂಗಳೂರು ಕಾರಾಗೃಹದ ಅಧೀಕ್ಷಕರಾದ ರಾಕೇಶ ಕಾಂಬಳೆ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ ಕಾರಾಗೃಹ ಮತ್ತು ಜಿಲ್ಲಾ ಕಾರಾಗೃಹ ಚಿಕ್ಕಮಗಳೂರು ಸಾಮಾಜಿಕ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ವಿಶ್ವ ಸ್ಕಿಜೋಫ್ರಿನಿಯಾ ದಿನ ಮತ್ತು ಮಾನಸಿಕ ಆರೋಗ್ಯ ಅರಿವು ಮತ್ತು ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ತಜ್ಞರಾದ ಡಾ:ವಿನಯ್ ಕುಮಾರ್ ಕೆ.ಎಸ್. ಮಾತನಾಡಿ ಮಾನಸಿಕ ಆರೋಗ್ಯ ಎಂಬುದು ನಮ್ಮ ಭಾವನೆಗಳ ಅಭಿವ್ಯಕ್ತಿಯಾಗಿದ್ದು ಬೇಡಿಕೆಗಳ ವ್ಯಾಪ್ತಿಗೆ ಯಶಸ್ವಿಯಾಗಿ ಹೊಂದಿಕೊಳ್ಳುವುದನ್ನು ಸೂಚಿಸುತ್ತದೆ ಎಂದು ಹೇಳಿದರು. ಜಿಲ್ಲಾ ಚಿಕಿತ್ಸೆ ಮನಶಾಸ್ತ್ರಜ್ಞರಾದ ಎಸ್.ಎಂ.ರಾಜಕುಮಾರ್ ಜಯಣ್ಣ, ಮನೋಸಾಮಾಜಿಕ ಶ್ರುಶೂಷಕಿ ಉಷಾ,ಕಿರಣ್ ವೆಂಕಟೇಶ್ ಇತರರು ಹಾಜರಿದ್ದರು.

About The Author