ಹಯ್ಯಳ ಬಿ, ಗ್ರಾಮ ಪಂಚಾಯಿತಿಯ ಆಶ್ರಯ ವಸತಿ ಮನೆಗಳ ಹಂಚಿಕೆಯಲ್ಲಿ ಶಾಸಕ ವೆಂಕಟರೆಡ್ಡಿ ಮತ್ತು ಗ್ರಾ.ಪಂ.ಅಧ್ಯಕ್ಷ ಮೌನೇಶ್ ಪೂಜಾರಿ ನಡುವೆ ಜಟಾಪಟಿ!

ಶಹಾಪೂರ:ವಡಗೇರಾ ತಾಲೂಕಿನ ಹಯ್ಯಳ ಬಿ. ಗ್ರಾಮ ಪಂಚಾಯಿತಿಯ ಆಶ್ರಯ ವಸತಿ ಮನೆಗಳ ಹಂಚಿಕೆಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಯಾದಗಿರಿ ಕ್ಷೇತ್ರದ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೌನೇಶ್ ಪೂಜಾರಿ ನಡುವೆ ಹೊಂದಾಣಿಕೆ ಇರದ ಕಾರಣ ಇಬ್ಬರ ನಡುವೆ ಜಟಾಪಟಿ ನಡೆದಿದ್ದು, ಇದರಿಂದ ಫಲಾನುಭವಿಗಳು ಅನಾಥರಾಗಿದ್ದಾರೆ!

ಆಶ್ರಯ ಮನೆಗಳಿಗೆ ಪ್ರಸ್ತುತದಲ್ಲಿ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿದ್ದು,ನಮ್ಮ ಕಾರ್ಯಕರ್ತರಿಗೆ ಆಶ್ರಯ ಮನೆಗಳು ನೀಡಬೇಕೆಂದು ಶಾಸಕರು ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.ಹೈಯ್ಯಾಳ ಬಿ ಗ್ರಾಮ ಪಂಚಾಯಿತಿಗೆ 30 ಮನೆಗಳು ಮಂಜೂರಾಗಿದ್ದು,ಅದರಲ್ಲಿ 18 ಮನೆಗಳನ್ನು ಈಗಾಗಲೇ ಬಿಜೆಪಿ ಕಾರ್ಯಕರ್ತರಿಗೆ ಕೊಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಾದವಾಗಿದೆ.ಇನ್ನು ಆರು ಮನೆಗಳು ಬಿಜೆಪಿ ಕಾರ್ಯಕರ್ತರಿಗೆ ಕೊಡಬೇಕೆಂದು ಶಾಸಕರು ಹಠ ಹಿಡಿದಿದ್ದಾರೆ ಎಂದು ಹೇಳಲಾಗಿದ್ದು! ಇದಕ್ಕೆ ಒಪ್ಪದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಾಧ್ಯವಿಲ್ಲ,ಬಂದಿರುವ 30 ಮನೆಗಳಲ್ಲಿ ಈಗಾಗಲೇ 18 ಮನೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಡಲಾಗಿದೆ.ಇನ್ನು ಹನ್ನೆರಡು ಮನೆಗಳನ್ನು ಮನೆಗಳಿಲ್ಲದ ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದಾಗಿ ಹಠ ಹಿಡಿದು ಪರಿಣಾಮ ಮನೆ ಹಂಚಿಕೆಯು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ!.

ಪ್ರಸ್ತುತ ಬಿಜೆಪಿ ಸರಕಾರ ರಾಜ್ಯದಲ್ಲಿ ಬಂದ ನಂತರ ಗ್ರಾಮ ಪಂಚಾಯಿತಿಯ ಅಧಿಕಾರವನ್ನು ಹಂತಹಂತವಾಗಿ ಮೊಟಕುಗೊಳಿಸಲಾಗುತ್ತಿದೆ.ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಡಳಿತ ನಿರ್ವಹಣೆ ಮಾಡಲು ಸ್ಥಳೀಯ ಶಾಸಕರು ಬಿಡುತ್ತಿಲ್ಲ ಎನ್ನುವುದು ಗ್ರಾಮ ಪಂಚಾಯಿತಿಯ ಸದಸ್ಯರ ವಾದವಾಗಿದೆ!.

ಈಗಾಗಲೇ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ 18 ಮನೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಡಲಾಗಿದೆ ಎಂದು ಹೇಳಲಾಗಿದ್ದು,ಉಳಿದ ಹನ್ನೆರಡು ಮನೆಗಳನ್ನು ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು.ಮನೆಗಳ ಹಂಚಿಕೆಯಲ್ಲಿ ಭೇದಭಾವ ಮಾಡದೇ,ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎನ್ನುವುದು ಗ್ರಾಮ ಪಂಚಾಯಿತಿ ಸದಸ್ಯರ ಮತ್ತು ಅಧ್ಯಕ್ಷರ ವಾದವಾಗಿದೆ!.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲಿ ಗ್ರಾಮ ಪಂಚಾಯಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿತ್ತು. ಗ್ರಾಮ ಪಂಚಾಯಿತಿಯಲ್ಲಿ ಶಾಸಕರಿಗೆ ಯಾವುದೇ ರೀತಿಯ ಅಧಿಕಾರ ಕೊಟ್ಟಿರಲಿಲ್ಲ.ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಗ್ರಾಮಸಭೆ ಮಾಡಿ ಮನೆಗಳನ್ನು ಹಂಚಿಕೆ ಮಾಡುವ ಸಂಪೂರ್ಣ ಅಧಿಕಾರ ಗ್ರಾಮ ಪಂಚಾಯಿತಿಗೆ ನೀಡಲಾಗಿತ್ತು.ಆದರೆ ಬಿಜೆಪಿ ಸರಕಾರ ಬಂದ ಮೇಲೆ ನಮ್ಮ ಅಧಿಕಾರ ಕಿತ್ತುಕೊಂಡು ಶಾಸಕರಿಗೆ ಕೊಟ್ಟಿರುವುದರಿಂದ ಸ್ಥಳೀಯ ಆಡಳಿತದಲ್ಲಿ ತೊಂದರೆಯಾಗಿದೆ ಎನ್ನುವುದು ಗ್ರಾಮ ಪಂಚಾಯಿತಿಯ ಸದಸ್ಯರ ಅಳಲಾಗಿದೆ.

 

“ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ  ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಸ್ಥಳೀಯ ಶಾಸಕರನ್ನು ಮಾಡಿರುವುದರಿಂದ ಗ್ರಾಮ ಪಂಚಾಯಿತಿ ಅಧಿಕಾರವನ್ನು ಕಸಿದುಕೊಂಡಂತಾಗಿದೆ.ಪದೇ ಪದೇ ಶಾಸಕರು ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಅಧಿಕಾರ ಚಲಾಯಿಸುವುದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಗ್ರಾಮೀಣ ಮಟ್ಟದಲ್ಲಿ ಕುಂಠಿತವಾಗುತ್ತಿವೆ”

ಮೌನೇಶ್ ಪೂಜಾರಿ
ಗ್ರಾ. ಪಂ. ಅಧ್ಯಕ್ಷರು ಹಯ್ಯಳ ಬಿ.

About The Author