ಶಹಾಪೂರ : ತಾಲೂಕಿನ ವಿಭೂತಿಹಳ್ಳಿಯಲ್ಲಿ ಬರುವ ರಾಜ್ಯ ಹೆದ್ದಾರಿಯಿಂದಿಡಿದು ತಿಪ್ಪನಹಳ್ಳಿ,ಕನ್ಯಾ ಕೋಳೂರು, ಅನ್ವಾರ್, ಬೊಮ್ಮನಹಳ್ಳಿ, ಟೀ ವಡಗೇರಾ, ಹಯ್ಯಳ ಕೆ ಗ್ರಾಮಗಳಿಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸವಾರರು,ವಿದ್ಯಾರ್ಥಿಗಳು, ಶಾಲಾ ಮಕ್ಕಳು, ರೈತರು ಸಾರ್ವಜನಿಕರು, ವಾಹನಗಳು ಓಡಾಡಲು ತುಂಬಾ ತೊಂದರೆಯಾಗುತ್ತಿದ್ದು, ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಭೀಮರಾಯ ಪೂಜಾರಿ ಆಗ್ರಹಿಸಿದ್ದಾರೆ. ಎರಡು ವರ್ಷಗಳಿಂದ ರಸ್ತೆ ರಿಪೇರಿ ಮಾಡಲಾಗಿತ್ತು. ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಿಂದಾಗಿ ಪ್ರಸ್ತುತ ರಸ್ತೆ ಹದಗೆಟ್ಟಿದೆ. ಸಾರ್ವಜನಿಕರು ರಸ್ತೆಯ ಮೇಲೆ ಓಡಾಡುತ್ತಿದ್ದು ಭಾರಿ ಉಸುಕಿನ ವಾಹನಗಳು ಓಡಾಡುತ್ತಿವೆ. ಪಿಡಬ್ಲ್ಯೂಡಿ ಅಧಿಕಾರಿಗಳು ಗಮನಹರಿಸಿ ರಸ್ತೆ ದುರಸ್ತಿ ಮಾಡದಿದ್ದರೆ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.