ಶಹಾಪೂರ : ಕಳೆದ ನಾಲ್ಕು ವರ್ಷಗಳಿಂದ ಮುಖ್ಯಮಂತ್ರಿ ಮತ್ತು ಕಾರ್ಮಿಕ ಸಚಿವರಿಗೆ ಮನವಿ ಮಾಡುತ್ತಾ, ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವಂತೆ ನಾಲ್ಕೈದು ಬಾರಿ ಮನವಿ ಮಾಡಿದ್ದರೂ ಕೂಡ ನಮ್ಮ ಗೋಳನ್ನು ಕೇಳುತ್ತಿಲ್ಲ ಎಂದು ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ ಕಿಡಿಗಾರಿದ್ದಾರೆ. ರಾಜ್ಯದಲ್ಲಿಯೇ ಹಿಂದುಳಿದ ಜಿಲ್ಲೆ ಯಾದಗಿರಿ. ಸುಮಾರು ಒಂದು ಲಕ್ಷ ಎಪ್ಪತ್ತೆಂಟು ಸಾವಿರ ಕಾರ್ಮಿಕರು ನಮ್ಮ ಜಿಲ್ಲೆಯಲ್ಲಿದ್ದಾರೆ. ಅತಿ ಹೆಚ್ಚು ಕಾರ್ಮಿಕರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ದುಡಿದ ದಿನದ ಕೂಲಿ ಸಾಕಾಗುತ್ತಿಲ್ಲ. ಮೂಲಭೂತಸೌಕರ್ಯ, ಸ್ವಂತ ಮನೆಯನ್ನು ಒದಗಿಸಿ ಕೊಡುವಂತೆ ಸ್ಥಳೀಯ ಸಚಿವ ಶರಣಬಸಪ್ಪಗೌಡ ದರ್ಶನಪುರ ಅವರಿಗೆ ಮನವಿ ಮಾಡಲಾಗಿದೆ. ಆದರೂ ಕಾರ್ಯಗತವಾಗಿಲ್ಲ. ದಿನಗೂಲಿ ಸಾಕಾಗುತ್ತಿಲ್ಲ. ಪಟ್ಟಣಗಳಿಗೆ ಗೂಳೆ ಹೋಗುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಸರಕಾರ ಮತ್ತು ಮುಖ್ಯಮಂತ್ರಿ ಕಾರ್ಮಿಕ ಸಚಿವರು ಆದ ಸಂತೋಷಲಾಡ್ ಒಂದು ಬಾರಿಯಾದರೂ ಜಿಲ್ಲೆಗೆ ಆಗಮಿಸಿ, ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವಂತೆ ಆಗ್ರಹಿಸಿದ್ದಾರೆ.