ಶಹಾಪುರ : ಶಹಪೂರು ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಅನುಗುಣವಾಗಿ ಕುಡಿಯುವ ನೀರು ಪರಿಹಾರಕ್ಕಾಗಿ ರಾಜ್ಯ ಸರ್ಕಾರ 180 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು. ಸನ್ನತಿ ಬ್ರಿಡ್ಜ್ ನಲ್ಲಿನಿಂದ ಶಹಪುರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಕಾಮಗಾರಿ ವೀಕ್ಷಿಸಿದ ಸಚಿವರು ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಬೇಕಿದೆ. ಜನರಿಗೆ ನೀರು ಒದಗಿಸುವ ಕಾರ್ಯ ಮಾಡಬೇಕಿದೆ.
ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಗರಕ್ಕೆ ಆಹ್ವಾನಿಸಲಿದ್ದು ವಿವಿಧ ಕಾಮಗಾರಿಗಳ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಅದರಲ್ಲಿ ಸನ್ನತಿ ಬ್ರಿಜ್ ಕಂ ಬ್ಯಾರೇಜ್ ಹತ್ತಿರದ ಭೀಮಾ ನದಿಯಿಂದ ಪೈಪ್ ಲೈನ್ ಮೂಲಕ ನಗರದ ಫಿಲ್ಟರ್ ಬೆಡ್ ಕೆರೆಗೆ ನೀರು ಸರಬರಾಜು ಮಾಡಲಾಗುವುದು. ಇದು 70 ಕೋಟಿ ರೂ. ವೆಚ್ಚ ಕಾಮಗಾರಿ ಆಗಿದ್ದು, ಈಗಾಗಲೇ ಬಹುತೇಕ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಇನ್ನೂ 15 ದಿನಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್, ಕೆಯುಡಬ್ಲ್ಯೂಎಸ್ ಮಂಡಳಿಯ ಇಇ ನರಸಿಂಗರೆಡ್ಡಿ, ವಿಜಯಕುಮಾರ, ಕಲ್ಯಾಣಕುಮಾರ,ಎಇಇ ರಮೇಶ, ಎಇಇ ಅಶೋಕಕುಮಾರ, ಎಇ ಶಂಕರಗೌಡ, ಎಇ ರಾಜಕುಮಾರ, ಮುಖಂಡರಾದ ಸೈಯದ್ ಮುಸ್ತಫಾ ದರ್ಬಾನ್,ಲಿಯಾಖತ್ ಪಾಶಾ, ಸೋಮನಗೌಡ ಚೆನ್ನಶೆಟ್ಟಿ ಅಣಬಿ, ಮಲ್ಲಿಕಾರ್ಜುನ ಸಜ್ಜನ ಆಣಜಿ, ನಗರಸಭೆ ಸದಸ್ಯರಾದ ರಾಜಶೇಖರ ಮಡ್ನಾಳ, ಬಸವರಾಜ ಚೆನ್ನೂರು, ಸದ್ದಾಂ ವಾದುಲ್ಲಾ ಸೇರಿದಂತೆ ಇತರರು ಇದ್ದರು.
************
ವಿವಿಧ ಕಾಮಗಾರಿಗಳು.
* 16 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ
* 292 ಕೋಟಿ ವೆಚ್ಚದಲ್ಲಿ ಒಳಚರಡಿ ಕಾಮಗಾರಿ.
* 16 ಕೋಟಿ ವೆಚ್ಚದಲ್ಲಿ ಶಿರವಾಳ ಮತ್ತು ಉಕ್ಕಿನಾಳ ಗ್ರಾಮದಲ್ಲಿ ಮುರಾರ್ಜಿ ವಸತಿ ಶಾಲೆ
* 21 ಕೋಟಿ ವೆಚ್ಚದಲ್ಲಿ ಸಗರ ಗ್ರಾಮದಲ್ಲಿ ಅಂಬೇಡ್ಕರ್ ವಸತಿ ನಿಲಯ
* 9 ಕೋಟಿ ವೆಚ್ಚದಲ್ಲಿ ಬಾಲಕಿಯರ ವಸತಿ ನಿಲಯ
* 8 ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯ
* 4 ಕೋಟಿ ವೆಚ್ಚದಲ್ಲಿ ಶಾಲಾ ಕೊಣೆಗಳು
* 2 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ
************
86.82ಕೋಟಿ ರೂ.ವೆಚ್ಚದ ಅಮೃತ ಯೋಜನೆ.
ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಡಿ ಸನ್ನತಿ ಬೀಚ್ ಕಂ ಬ್ಯಾರೇಜ್‌ನ ಮೂಲಕ ಸುಮಾರು 18 ಕಿ.ಮಿ.ಪೈಪ್ ಲೈನ್ ಮೂಲಕ ಮಾರ್ಗ ಮಧ್ಯದ 2 ಗ್ರಾಮಗಳು ಸೇರಿ ನಗರದ ಫಿಲ್ಟರ್ ಬೆಡ್ ಕೆರೆಗೆ ನೀರು ಹರಿಸುವುದು. ಅಮೃತ 2.0 ಯೋಜನೆಯಡಿ 86.82 ಕೋಟಿ ರೂ. ವೆಚ್ಚಗಳಲ್ಲಿ ನಗರದಲ್ಲಿ8 ಜೋನ್ ಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಸುಮಾರು 15 ಲಕ್ಷ ಲೀಟರ್ ಸಾಮರ್ಥ್ಯದ 2 ನೀರಿನ ಟ್ಯಾಂಕ್ ಗಳ ಮೂಲಕ 31 ವಾರ್ಡ್‌ಗಳ ಪ್ರತಿ ಮನೆಮನೆಗೆ 12828 ನಳದ ಮೂಲಕ 24×7 ಶುದ್ದ ಕುಡಿಯುವ ನೀರು ಸರಬರಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ದರ್ಶನಾಪುರ ತಿಳಿಸಿದರು.