ಬಡವರ ಅಲ್ಪಸಂಖ್ಯಾತರ ಏಳಿಗೆ ಬಯಸುತ್ತಿರುವ ರಾಜ್ ಮೈನುದ್ದೀನ್ ಜಮಾದರ್

ರಾಜ್ಯಸಭೆ ಸದಸ್ಯರು ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸಿರ್ ಹುಸೇನ್ ರವರನ್ನು ಭೇಟಿಯಾದ ರಾಜ್ ಮೈನುದ್ದೀನ್

ಶಹಾಪೂರ : ಬಡವರ ಶೋಷಿತರ ಅಲ್ಪಸಂಖ್ಯಾತರ ಏಳಿಗೆಗಾಗಿ ಮನ ಮಿಡಿಯುತ್ತಿರುವ, ಅವರ ಏಳಿಗೆ ಬಯಸುತ್ತಿರುವ ಸಾಮಾಜಿಕ ಕಳಕಳೆ ಇರುವ ವ್ಯಕ್ತಿ ರಾಜ್ ಮೈನುದ್ದೀನ್ ಜಮಾದಾರ್. ಅವರ ತಂದೆಯ ರಾಜಕೀಯ ಅನುಭವದಿಂದ ತಾನು ಕೂಡ ಜನರ ಮಧ್ಯೆ ಇದ್ದು ಜನಪರ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾಜ್ಯ ಕೆಪಿಸಿಸಿ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ರಾಜ್ ಮೈನುದ್ದೀನ್ ಕಾಂಗ್ರೆಸ್ ಪಕ್ಷ ವಹಿಸಿಕೊಟ್ಟ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

 ರಾಜ್ಯ ವಸತಿ ಸಚಿವ ಜಹೀರ್ ಅಹ್ಮದ್ ಖಾನ್ ರವರನ್ನು ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳನ್ನು ವಿವರಿಸುತ್ತಿರುವ ರಾಜ್ ಮೈನೂದ್ದೀನ್ ಜಮಾದಾರ್.

ಗ್ರಾಮೀಣ ಮಧ್ಯದಿಂದ ಹಿಡಿದು ರಾಜ್ಯಮಟ್ಟದವರೆಗೆ ಹಲವಾರು ನಾಯಕರ  ಜೊತೆ ಗುರುತಿಸಿಕೊಂಡಿರುವ ರಾಜ್ ಮೈನೂದ್ದೀನ್ ಜನಪರ ಕೆಲಸ ಮಾಡುತ್ತಿದ್ದಾರೆ.ತನ್ನ ಸ್ವಂತ ಗ್ರಾಮ ದೋರನಹಳ್ಳಿಯಿಂದಿಡಿದು ಯಾದಗಿರಿ ಜಿಲ್ಲೆಯಾದ್ಯಂತ ಪ್ರತಿ ಗ್ರಾಮಗಳಲ್ಲಿಯೂ ಕೂಡ ಬಡವರ ಅಲ್ಪಸಂಖ್ಯಾತರ ಏಳಿಗೆಗಾಗಿ ಅವರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ಸರಕಾರದ ಹಲವು ಯೋಜನೆಗಳ ಬಗ್ಗೆ ರಾಜ್ಯದ ಮುಖಂಡರ ಗಮನ ಸೆಳೆಯುತ್ತಿದ್ದು ಮುಖ್ಯಮಂತ್ರಿಗಳು, ಸಚಿವರು, ಶಾಸಕರ ಗಮನ ಸೆಳೆದು ಜಿಲ್ಲೆಯ ಸಮಸ್ಯೆಗಳನ್ನು ಮುಂದಿಡುತ್ತಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಶ್ರಮಿಸುತ್ತಿದ್ದಾರೆ ಎನ್ನುವುದು ಗಮನಾರ್ಹ. ಬಡವರ ಬಗ್ಗೆ ಕಾಳಜಿ ತೋರಿಸುತ್ತಾ ಜನಪರ ಹೋರಾಟಗಾರನಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ರಾಜ್ ಮೈನೂದ್ದೀನ್ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಗಲಿ ಎಂದು ಆಶಿಸೋಣ.