ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹೇಳಿಕೆ ರಾಜ್ ಮೈನುದ್ದೀನ್ ಆಕ್ರೋಶ 

ಶಹಾಪುರ : ರಾಜ್ಯದ ಕ್ಯಾಬಿನೆಟ್ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಖಂಡನಿಯ ಎಂದು ಕೆಪಿಸಿಸಿ ರಾಜ್ಯ ಸಂಯೋಜಕರಾದ ರಾಜ್ ಮೈನುದ್ದೀನ್ ಜಮಾದಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೇಡಿಯ ಕೊನೆಯ ಅಸ್ತ್ರವೇ ಅಪಪ್ರಚಾರ ಎನ್ನುವ ಹಾಗೆ ರಾಜಕೀಯವಾಗಿ, ಸೈದ್ಧಾಂತಿಕವಾಗಿ ಅಸಹಾಯಕರಾದ ನೀವು ವೈಯಕ್ತಿಕವಾಗಿ ದಾಳಿ ಮಾಡಿರುವುದು ಸರಿಯಲ್ಲ. ಮಾತನಾಡುವ ಭರದಲ್ಲಿ ಹೇಗಾದರೂ ಮಾತನಾಡುವುದು ಸರಿಯೇ. ಆರೋಪ ಪ್ರತ್ಯಾರೋಪ ಇರಬೇಕು. ಪ್ರಧಾನಿಯಾದರೇನು, ಮುಖ್ಯಮಂತ್ರಿಯಾದರೇನು.ನಿಂದಿಸುವ ಭರದಲ್ಲಿ ವೈಯಕ್ತಿಕ ನಿಂದನೆ ಆಗಬಾರದು. ಸಚಿವರಿಗೆ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. ಮುಂದಿನ ದಿನದಲ್ಲಿ ಈ ರೀತಿ ಹೇಳಿಕೆ ನೀಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.