ಸಾವಿರಾರು ಕುಟುಂಬಗಳಿಗೆ ಬಾಳ್ವೆ ಕೊಟ್ಟ ಬಂಗಾರದ ಮನುಷ್ಯನಿಗೆ ಬಂಗಾರದ ಕಾಣಿಕೆ 

ಶಹಾಪುರ : ಬಡವರು, ಶೋಷಿತರು ಆರ್ಥಿಕವಾಗಿ ದುರ್ಬಲ ಜನರಿಗೆ ಅಪದ್ಭಾಂಧವರಾಗಿ ಕಣ್ಣಿಗೆ ಕಾಣುವ ವ್ಯಕ್ತಿ ಎಂದರೆ ಜಿಲ್ಲಾ ಪಂಚಾಯತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿನೋದಗೌಡ ಮಾಲಿಪಾಟೀಲ್ ದೋರನಹಳ್ಳಿಯವರು. ತುರ್ತು ಸಂದರ್ಭದಲ್ಲಿ, ಸಂಕಷ್ಟದ ಸಮಯದಲ್ಲಿ ಕಲಬುರ್ಗಿ ಮತ್ತು ಯಾದಗಿರಿಯ ಆಸ್ಪತ್ರೆಗಳಲ್ಲಿ ಹಣ ಕಟ್ಟದೇ ಸಂಕಷ್ಟದಲ್ಲಿರುವಾಗ ಆಗ ನೆನಪಾಗುವುದೇ ವಿನೋದಗೌಡ ಮಾಲಿಪಾಟೀಲರು. ಸಾವಿರಾರು ಜನರು ಸಂಕಷ್ಟದಲ್ಲಿದ್ದವರಿಗೆ ಆಸ್ಪತ್ರೆಗಳಲ್ಲಿ ಸ್ಪಂದಿಸಿದ್ದಾರೆ. ಹಣಕಾಸು ವ್ಯವಸ್ಥೆಯಲ್ಲಿ ಸ್ಪಂದಿಸಿ ಆಸರೆಯಾಗಿದ್ದಾರೆ. ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯ ನೂರಾರು ಹಳ್ಳಿಗಳ ಜನರು ಅವರ ಬಾಳ್ವೆಗೆ ಬದುಕಾಗಿ ಬೆಳಕಾಗಿದ್ದಾರೆ. ಇಂದಿಗೂ ವಿನೋದಗೌಡರನ್ನು ನೆನೆಪಿಸಿಕೊಳ್ಳುತ್ತಿದ್ದಾರೆ.

ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಅತಿ ಹಿಂದುಳಿದ ಜಿಲ್ಲೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ದೃಷ್ಟಿಯಿಂದ ಜಿಲ್ಲೆಯ ಹಲವು ನಗರಗಳಲ್ಲಿ ತರಬೇತಿ ಶಿಬಿರಗಳನ್ನು ಬೇಸಿಗೆ ರಜೆ ಕೊಟ್ಟ ಸಂದರ್ಭದಲ್ಲಿ ಅತಿಥಿ ಶಿಕ್ಷಕರು ಆರಂಭಿಸಿದ್ದರು. ಹಲವು ಜನರು ಇದನ್ನು ಆಕ್ಷೇಪಿಸಿದ್ದರು. ಅತಿಥಿ ಶಿಕ್ಷಕರನ್ನು ಒಳಗೊಂಡು ನೂರಾರು ಅತಿಥಿ ಶಿಕ್ಷಕರು ವಿನೋದಗೌಡರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ತಿಳಿಸಿದರು. ಇದಕ್ಕೆ ವಿನೋದಗೌಡರು ಸ್ಪಂದಿಸಿ ಶೈಕ್ಷಣಿಕವಾಗಿ ಮಕ್ಕಳಿಗೆ ಬೇಸಿಗೆ ಸಂದರ್ಭದಲ್ಲಿ ವಿದ್ಯಾಭ್ಯಾಸದ ಅಗತ್ಯವಿದೆಯೆಂದು ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಬೇಸಿಗೆ ದಿನಗಳಲ್ಲಿ ತರಬೇತಿ ಶಿಬಿರಗಳನ್ನು ಆರಂಭಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ತರಬೇತಿ ಶಿಬಿರಗಳನ್ನು ನಡೆಸುವಂತೆ ಮನವೊಲಿಸಿ ಆರಂಭಿಸಿದರು.

ಇದರಿಂದಾಗಿ ಹಲವಾರು ತರಬೇತಿ ಶಿಬಿರಗಳನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ವರ್ಷದಲ್ಲಿ ತರಬೇತಿ ಶಿಬಿರಗಳು ಪೂರ್ತಿಗೊಂಡಿದ್ದು ತರಬೇತಿ ಶಿಕ್ಷಕರು, ಪಾಲಕರು ಸೇರಿ ಇಬ್ರಾಹಿಂಪುರದಲ್ಲಿ ವಿನೋದಗೌಡರನ್ನು ಸರಳ ಸಮಾರಂಭದಲ್ಲಿ ಚಿಕ್ಕ ಕಾಣಿಕೆಯಾಗಿ ಬಂಗಾರ ಅರ್ಪಿಸಿದರು. ಸಿದ್ದಪ್ಪ ಮೇಟಿ ಸಾಬಯ್ಯದಿಗ್ಗಿ, ಸಂಗಪ್ಪ ದಿಗ್ಗಿ ಸಿದ್ದರಾಮ್ ರೆಡ್ಡಿ ರಸ್ತಾಪುರ, ಸಾಬಯ್ಯ ತಂಗಡಗಿ, ಶೇಖರ್ ಮೇಟಿ,ಮಲ್ಲಪ್ಪ ಮೇಟಿ ಇದ್ದರು.

ವಿನೋದಗೌಡ ಮಾಲಿಪಾಟೀಲರು ಬಡವರ ಅಪದ್ಬಾಂದವರು. ಫೋನ್ ಕರೆಗಳಲ್ಲಿ ಸಮಸ್ಯೆಗಳನ್ನು ಆಲಿಸಿ ಸಹಾಯ ಮಾಡಿದ ನಿಜನಾಯಕರು.ಬೇಸಿಗೆ ತರಬೇತಿ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳ ಬದುಕಿಗೆ ಆಸರೆಯಾದರು. 

ಮಲ್ಲಿಕಾರ್ಜುನ ಮೇಟಿ

ಅತಿಥಿ ಶಿಕ್ಷಕರು. ಇಬ್ರಾಹಿಂಪುರ.

ಬಡವರ ಪಾಲಿಗೆ ಕರುಣಾಮಯಿ ಆಶಾಕಿರಣ ವಿನೋದಗೌಡ ಮಾಲಿಪಾಟೀಲರು ಅವಳಿ ಜಿಲ್ಲೆಯಲ್ಲಿ ಹಲವು ಜನರಿಗೆ ಸಹಾಯ ಮಾಡಿದ್ದಾರೆ. ಶೈಕ್ಷಣಿಕವಾಗಿ ಹಲವಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ನಮ್ಮ ಕರೆಗೆ ಒಗೊಟ್ಟು ಅತಿಥಿ ಶಿಕ್ಷಕರ ಕುಟುಂಬಗಳಿಗೆ ಆಸರೆಯಾದರು. ಇದರಿಂದ ಶಿಕ್ಷಕರು ಪಾಲಕರು ಅವರಿಗೆ ಚಿರಋಣಿ‌.

ಶಿವರಾಜ್ ದಿಗ್ಗಿ ಇಬ್ರಾಹಿಂಪುರ.