ಶಹಾಪುರ : ಜವಾಬ್ದಾರಿ ಸ್ಥಾನದಲ್ಲಿರುವವರು ಯಾವ ರೀತಿ ಮಾತನಾಡಬೇಕು ಎಂಬುದನ್ನು ಮೊದಲು ಕಲಿಯಿರಿ. ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು ನೀವು. ವಿರೋಧ ಪಕ್ಷದಲ್ಲಿದ್ದು ಮಾತ್ರಕ್ಕೆ ಬಾಯಿಗೆ ಬಂದ ಹಾಗೆ ನಾಲಿಗೆ ಹರಿಬಿಡುವುದು ಸರಿಯಲ್ಲ. ರಾಜ್ಯದ ಕ್ಯಾಬಿನೆಟ್ ಸಚಿವರು ಪ್ರಿಯಾಂಕ್ ಖರ್ಗೆಯವರು.ಅವರಿಗೆ ಈ ರೀತಿ ಹೀಯಾಳಿಸಿ ಮಾತನಾಡಿ ದೊಡ್ಡವರಾಗುತ್ತೀರಿ ಎಂದು ಕೊಂಡಿದ್ದೀರಾ ?.ಎಂದು ಕಿಡಿಕಾರಿದರು.
ಕಲಬುರ್ಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರೋಧಪಕ್ಷದ ನಾಯಕ ಚೆಲುವಾದಿ ನಾರಾಯಣ ಸ್ವಾಮಿ ಸಚಿವರಾದ ಪ್ರಿಯಾಂಕ್ ಖರ್ಗೆ ವಿರುದ್ಧ ನೀಡಿದ ಹೇಳಿಕೆ ವಿರುದ್ಧ ಕೆಪಿಸಿಸಿ ಯಾದಗಿರಿ ವೈದ್ಯ ಘಟಕದ ಜಿಲ್ಲಾಧ್ಯಕ್ಷ ಡಾ. ಕೃಷ್ಣಮೂರ್ತಿ ಖಂಡಿಸಿದ್ದಾರೆ.
ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ. ದೇಶದ ಪ್ರಧಾನಿಯೆಂದಾಕ್ಷಣ ಅವರ ವಿರುದ್ಧ ಮಾತನಾಡಬಾರದೇನು ?.ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮಾತನಾಡುವ ಟೀಕಿಸುವ ಹಕ್ಕು ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ನೀಡಿದೆ.ನೀವು ಮಾತನಾಡಿದ್ದೆಲ್ಲವೂ ಸರಿಯಲ್ಲ. ಈ ರೀತಿ ಟೀಕೆ ಮಾಡಿದಾಕ್ಷಣ ನೀವೇನು ದೊಡ್ಡವರಾಗುತ್ತೀರಾ ಎಂದು ಕೊಂಡಿರುವಿರಿ. ಅದು ನಿಮ್ಮ ಭ್ರಮೆ. ವ್ಯಕ್ತಿಯ ವೈಯಕ್ತಿಕ ನಿಂದನೆ ಖಂಡನೀಯ. ಸರಕಾರದ ವಿರುದ್ಧ ಆರೋಪ ಪ್ರತ್ಯಾರೂಪ ಮಾಡಿ. ವ್ಯಕ್ತಿಯ ಮೇಲಲ್ಲ. ನೀವು ಕೂಡ ಹಿಂದೆ ಖರ್ಗೆ ಕುಟುಂಬದಲ್ಲಿ ಬೆಳೆದಿರುವಿರಿ.ಬಿಜೆಪಿ ಪಕ್ಷ ಸೇರ್ಪಡೆಯಾದ ನಂತರ ಈ ರೀತಿ ಮಾತನಾಡುತ್ತಿರುವಿರಾ.ಕಾಂಗ್ರೇಸ್ ಪಕ್ಷ ಮತ್ತು ಸಾರ್ವಜನಿಕರು ಇದನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದರು.