ಬೊಮ್ಮನಾಳ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವು

ದೇವದುರ್ಗ: ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ಮನೆ ಜಾಗದಲ್ಲಿ ಕಟ್ಟಿದ್ದ ಎತ್ತು ಸಾವಿಗೀಡಾದ ಘಟನೆ ಜರುಗಿದೆ.ಗ್ರಾಮದ ವಿಜಯಕುಮಾರ ತಂದೆ ಮಾರೆಪ್ಪ ಎಂಬವರಿಗೆ ಸೇರಿದ ಎತ್ತುಗಳನ್ನು ಮನೆ ಜಾಗದಲ್ಲಿ ಕಟ್ಟಿದ್ದರು ಗುರುವಾರ ಸಂಜೆ ಏಕಾಏಕಿ ಭಾರಿ ಗಾಳಿ ಮಳೆ ಬಂದು ಈ ವೇಳೆ ಸಿಡಿಲು ಅಪ್ಪಳಿಸಿ ಕಟ್ಟಿದ್ದ ಎತ್ತಿಗೆ ಬಡಿದಿದೆ ಇದರಿಂದಾಗಿ ಎತ್ತು ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಕಂದಾಯ ಇಲಾಖೆ ಗಾಮ ಆಡಳಿತ ಅಧಿಕಾರಿಗಳು ಹಾಗೂ ಪಶು ವೈದ್ಯಕೀಯ ಇಲಾಖೆಯ ವೈದ್ಯರು ಸ್ಥಳಕ್ಕೆ ಧಾವಿಸಿ ಮಹಜರು ಮಾಡಬೇಕೆಂದು ಎತ್ತಿನ ಮಾಲಿಕರು ಆಗ್ರಹಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ: ಈಗ ಜಮೀನುಗಳನ್ನು ಹದ ಮಾಡುವ ಸಂದರ್ಭದಲ್ಲಿಯೇ ಲಕ್ಷಾಂತರ ಬೆಲೆಬಾಳುವ ಎತ್ತು ಕಳೆದುಕೊಂಡು ಸಂಕಷ್ಟದಲ್ಲಿರುವ ರೈತನಿಗೆ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿ ಯೋಜನೆ ಅಡಿ ರೈತನಿಗೆ ಪರಿಹಾರ ನೀಡಬೇಕು ಎಂದು ದಲಿತ ಸಂಘಟನೆಯ ಮುಖಂಡ ಜಾಕೋಬ್ ಟೇಲರ್ ಬೊಮ್ಮನಾಳ ಒತ್ತಾಯಿಸಿದ್ದಾರೆ.