ಯಾದಗಿರಿ ಕ್ಷೇತ್ರಕ್ಕೆ ನಿಖಿಲ್ ಶಂಕರ್  ಜನನಾಯಕರಾಗ್ತಾರಾ ಯುವ ನಾಯಕ 

ಬಸವರಾಜ ಕರೇಗಾರ.

ಜನರ ಮಧ್ಯೆ ಜನರಿಗಾಗಿ ಜನರಿಗೋಸ್ಕರ ಇರುವ ನಾಯಕರೆಂದು,ಜನನಾಯಕರೆಂದು ಹೇಳುವರು. ಜನರ ಮಧ್ಯೆದಲ್ಲಿಯೇ ಇದ್ದು ಜನರ ಸಮಸ್ಯೆಗಳನ್ನು ಪರಿಹರಿಸುವರು ಜನನಾಯಕರು. ಅಂತಹ ನಾಯಕರಲ್ಲಿ ನಿಖಿಲ್ ವಿ. ಶಂಕರ್ ಕೂಡ ಒಬ್ಬರು. ಯಾವುದೇ ಅಧಿಕಾರ ಇಲ್ಲದಿದ್ದರೂ ಕೂಡ ತಮ್ಮ ಸ್ವಂತ ಬಲದಿಂದ ಯಾದಗಿರಿ ಜಿಲ್ಲೆಯಾದ್ಯಂತ ಜನರ ಮಧ್ಯೆ ಜನರ ನಡುವೆ ಇದ್ದು ಜನ ಸೇವೆ ಮಾಡುತ್ತಿದ್ದಾರೆ.

ಇಂತಹ ಜನನಾಯಕರು ನಮ್ಮ ಕ್ಷೇತ್ರಕ್ಕೆ ಬೇಕು ಎಂದು ಯಾದಗಿರಿ ಕ್ಷೇತ್ರದ ಜನರು ಅಂದಾಡಿಕೊಳ್ಳುತ್ತಿದ್ದಾರೆ. ಜಾತ್ಯಾತೀತ ಮನೋಭಾವನೆ ಹೊಂದಿದ ನಿಖಿಲ್ ವಿ. ಶಂಕರ್ ಅವರು ಎಲ್ಲ ಸಮಾಜದವರನ್ನು ಒಟ್ಟುಗೂಡಿಸಿ ಎಲ್ಲರೊಡನೆ ಬೆರೆತು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. 2023ರಲ್ಲಿ ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದರು ನಿಖಿಲ್ ಶಂಕರ್. ಸ್ವಲ್ಪದರಲ್ಲಿಯೇ ಟಿಕೆಟ್ ಕೈತಪ್ಪಿದ್ದನ್ನು ತಲೆಕೆಡಿಸಿಕೊಳ್ಳದೆ ಯಾದಗಿರಿ ಜಿಲ್ಲೆಯಾದ್ಯಂತ ಜನರ ನಡುವೆ ಓಡಾಡುತ್ತಿದ್ದಾರೆ. ಅಧಿಕಾರವಿಲ್ಲದೆ ಓಡಾಡುತ್ತಿರುವ ನಿಖಿಲ್ ವಿ. ಶಂಕರ್ ಅಧಿಕಾರ ಬಂದರೆ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎನ್ನುವ ಬಗ್ಗೆ ಚಿಂತಿಸುತ್ತಾರೆ.

    ರಾಜ್ಯದಲ್ಲಿಯೇ ಹಿಂದುಳಿದ ಜಿಲ್ಲೆ ಯಾದಗಿರಿ. ಅಂತಹ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಯಾವ ರೀತಿ ಕೊಂಡೊಯ್ಯಬೇಕು ಎನ್ನುವ ಮನೋಭಾವನೆ ನಿಖಿಲ್ ವಿ. ಶಂಕರ್ ಅವರದು. ಇಂತಹ ನಾಯಕರು ನಮಗೆ ಬೇಕು ಎನ್ನುವ ಮನೋಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಯಾದಗಿರಿ ಕ್ಷೇತ್ರದಲ್ಲಿ 2023ರಲ್ಲಿ ಒಂದು ಡಜನ್ ಗಿಂತಲೂ ಅತಿ ಹೆಚ್ಚು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗುವ ಭರವಸೆಯಲ್ಲಿದ್ದ ಕೆಲವು ಜನ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದ ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಕೆಲವು ಜನರು ಕೆಲವು ಸಮುದಾಯಗಳಿಗೆ ಸಮುದಾಯ ಭವನದ ನಿರ್ಮಾಣ ಸೇರಿದಂತೆ, ವೈಯಕ್ತಿಕ ಬೇಡಿಕೆಗಳ ಮಹಾ ಪಟ್ಟಿಯನ್ನೆ ಮಾಡಿದ್ದರು. ಯಾವಾಗ ಪಕ್ಷಗಳ ಟಿಕೆಟ್ ತಪ್ಪಿ ಹೋಯಿತು ಕ್ಷೇತ್ರದಿಂದಲೇ ಜಾಗ ಖಾಲಿ ಮಾಡಿದರು. ಚುನಾವಣೆ ಮುಗಿದ ತಕ್ಷಣವೇ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿಲ್ಲ. ಮದುವೆ ಸಾಂಸ್ಕೃತಿಕ ಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ನಾಯಕರು, ಜನರ ಸಮಸ್ಯೆಗಳ ಬಗ್ಗೆ ಕಿಂಚುತ್ತೂ ತಲೆಕಡಿಸಿಕೊಳ್ಳುತ್ತಿಲ್ಲ ಎನ್ನುವುದು ಕ್ಷೇತ್ರದ ಜನರ ನಿರಾಶಾದಾಯಕ ಮನೋಭಾವನೆ ಹೊಂದಿದ್ದಾರೆ.

ಚುನಾವಣೆ ಬಂದರೆ ಮಾತ್ರ ಟಿಕೆಟ್ ಆಕಾಂಕ್ಷಿಗಳು ನಮ್ಮ ಬಳಿಗೆ ಬರುತ್ತಾರೆ.ಇಲ್ಲದಿದ್ದರೆ ಬರುವುದಿಲ್ಲ ಎನ್ನುವುದನ್ನು ಸಂಪೂರ್ಣವಾಗಿ ಯಾದಗಿರಿ ಕ್ಷೇತ್ರದ ಜನರು ಅರಿತುಕೊಂಡಿದ್ದಾರೆ. ಇದಕ್ಕೂ ಮೀರಿ ಚುನಾವಣೆ ಆಕಾಂಕ್ಷಿಯಾಗಿದ್ದ ನಿಖಿಲ್ ವಿ. ಶಂಕರ್ ಚುನಾವಣಾ ಮುಗಿದ ಮೇಲೂ ಕೂಡ ಯಾದಗಿರಿ ಜಿಲ್ಲೆಯಾದ್ಯಂತ ಸಂಚಾರ ಕೈಗೊಂಡಿದ್ದು ಮದುವೆ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿರುವುದು ಕ್ಷೇತ್ರದಾದ್ಯಂತ ಕಂಡುಬರುತ್ತಿದೆ. ಇದಕ್ಕೆ ಎನ್ನುವುದು ಜನನಾಯಕರು ಎಂದು.

ಚುನಾವಣೆ ಬರಲಿ ಹೋಗಲಿ ಚುನಾವಣೆಯಲ್ಲಿ ಸೋಲು ಗೆಲುವು ಅನಿವಾರ್ಯ. ಆದರೆ ಜನರ ಮಧ್ಯೆ ಜನರಿಗೋಸ್ಕರ ಇರುವ ನಾಯಕರಾಗಿರಬೇಕು ಎನ್ನುವುದಕ್ಕೆ ನಿಖಿಲ್ ವಿ. ಶಂಕರ್ ಅವರೇ ಉದಾಹರಣೆ. ಸಮುದಾಯದ ಜನರ ಬೇಡಿಕೆಗಳು, ಪ್ರತಿಮೆಗಳು, ವೈಯಕ್ತಿಕ ಧನ ಸಹಾಯ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ನಿಖಿಲ್ ವಿ. ಶಂಕರ್ ರಾಜ್ಯಾದ್ಯಂತ ಯಾವತ್ತಿಗೂ ಬ್ಯುಸಿಯಾಗಿರುತ್ತಾರೆ ಇಂತಹ ನಾಯಕರು ನಮ್ಮ ಕ್ಷೇತ್ರದ ಜನನಾಯಕರಾಗಬೇಕು ಎನ್ನುವ ಮನೋಭಾವನೆ ಕ್ಷೇತ್ರದಾದ್ಯಂತ ಅತಿ ಹೆಚ್ಚಿನ ಜನರಲ್ಲಿ ಕಂಡುಬರುತ್ತಿದೆ. ಮುಂದಿನ ಚುನಾವಣೆಯಲ್ಲಿ ಇದು ನೆರವೇರುತ್ತದೆ ಎನ್ನುವ ಮನದಾಸೆ ಕ್ಷೇತ್ರದ ಜನತೆಯಲ್ಲಿದೆ ಎಂದುಕೊಳ್ಳೋಣ.

ಜಿಲ್ಲೆಯಲ್ಲಿ ನಿಖಿಲ್ ಶಂಕರ್ ನೀಡಿದ  ಸೇವೆಗಳು.

* 50 ಲಕ್ಷ ರೂ.ವೆಚ್ಚದಲ್ಲಿ ಕೊಲ್ಲೂರು ಮಲ್ಲಪ್ಪ ಸ್ಮಾರಕ ನಿರ್ಮಾಣ.
* ಸುರಪುರ ಕನಕ ಭವನ ಅಭಿವೃದ್ಧಿಗೆ 30 ಲಕ್ಷ ರೂ.ದೇಣಿಗೆ.
* ಯಾದಗಿರಿ ಮಾತಾಮಾಣಿಕೇಶ್ವರಿ ನಗರ ವಾರ್ಡ್ ನಂ-31ಆಂಜನೇಯ ದೇವಸ್ಥಾನದ ಅಭಿವೃದ್ಧಿಗೆ 1 ಲಕ್ಷ ರೂ  ದೇಣಿಗೆ.
* ವಡಗೇರಿ ತಾಲ್ಲೂಕು ಹಂಚಿನಾಳ ಗ್ರಾಮ ಬೀರಲಿಂಗೇಶ್ವರ ದೇವಸ್ಥಾನಕ್ಕೆ 1 ಲಕ್ಷ ರೂಪಾಯಿ ದೇಣಿಗೆ.

* ಸುರಪುರ ತಾಲ್ಲೂಕಿನ ವಾಗಣಗೆರೆ ಗ್ರಾಮ ಬೀರಲಿಂಗೇಶ್ವರ ದೇವಸ್ಥಾನಕ್ಕೆ 1 ಲಕ್ಷ ರೂ.ದೇಣಿಗೆ.

* ಸುರಪುರ ತಾಲ್ಲೂಕು ಕವಡಿಮಟ್ಟಿ ಗ್ರಾಮ ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆ.

* ಸುರಪುರ ತಾಲ್ಲೂಕು ಬಾದ್ಯಾಪುರ ಗ್ರಾಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಕೊಡುಗೆ.

* ಸುರಪುರ ತಾಲ್ಲೂಕಿನ ಶಳ್ಳಿಗಿ ಕ್ರಾಸ್ ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಕೊಡುಗೆ.

* ಸುರಪುರ ತಾಲ್ಲೂಕು ಪರಸನಳ್ಳಿ ಗ್ರಾಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಕೊಡುಗೆ.

* ಬಸವಂತಪುರ ಗ್ರಾಮದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಹಾಯದ ಭರವಸೆ.