ಬೀದರ,,,
ಜಿಲ್ಲೆಯ ಗ್ರಾಮೀಣಪ್ರದೇಶದ ದುಡಿಯುವ ವರ್ಗಗಳು ಮತ್ತು ದುರ್ಬಲ ವರ್ಗಗಳ ಜನಸಮುದಾಯಕ್ಕೆ ಆಸರೆಯಾಗಬೇಕು ಎನ್ನುವ ಮಹದುದ್ದೇಶದಿಂದ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಗಿರೀಶ ದಿಲೀಪ್ ಬದೋಲೆಯವರು ಮಹಾತ್ಮಗಾಂಧಿ ನರೆಗಾ ಯೋಜನೆಯಡಿ 2025 ನೇ ಆರ್ಥಿಕ ವರ್ಷದಲ್ಲಿ ಹಮ್ಮಿಕೊಂಡ ವಿನೂತನ ಯೋಜನೆ ” ಕಾಯಕ ಮಾಸಾಚರಣೆ” ಗೆ ಉತ್ತಮಪ್ರತಿಕ್ರಿಯೆ ವ್ಯಕ್ತವಾಗಿದೆ. 30.04.2025 ರಿಂದ 31.05.2025 ರ ವರೆಗೆ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ಒಂದು ಲಕ್ಷ ಕೂಲಿಕಾರರಿಗೆ ಕೆಲಸ ನೀಡುವ ಉದ್ದೇಶದಿಂದ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರು ಬಸವಜಯಂತಿಯ ದಿನದಂದು ಬೀದರ ತಾಲೂಕಿನ ಅಷ್ಟೂರು ಗ್ರಾಮ ಪಂಚಾಯತಿಯಲ್ಲಿ ” ಕಾಯಕ ಮಾಸಾಚರಣೆ ” ಕಾರ್ಯಕ್ರಮ ಉದ್ಘಾಟಿಸಿದ್ದರು.
ಕಾಯಕ ಮಾಸಾಚರಣೆಯ ಪ್ರಾರಂಭದ ದಿನದಂದು ಜಿಲ್ಲೆಯಲ್ಲಿ 24,931 ಜನ ಕೂಲಿಕಾರರು ಕೆಲಸ ಮಾಡಿದರೆ ಎರಡನೇ ದಿನವಾದ ಇಂದು 22162 ಜನ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ.”ಇಂದು ಕಾರ್ಮಿಕ ದಿನಾಚರಣೆ ಆಚರಿಸುವ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಬಂದಿಲ್ಲ.ನಾಳೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಬರುವ ನಿರೀಕ್ಷೆ ಇದ್ದು ಈ ಕುರಿತು ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು,ಎಡಿಗಳು ಮತ್ತು ಪಿಡಿಒಗಳಿಗೆ ಅಗತ್ಯ ನಿರ್ದೇಶನ ನೀಡಲಾಗಿದ್ದು ಈ ತಿಂಗಳಲ್ಲಿ ನಮ್ಮ ನಿರೀಕ್ಷೆಯಂತೆ ಒಂದು ಲಕ್ಷ ಜನಕೂಲಿಕಾರರಿಗೆ ಕೆಲಸ ನೀಡುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.. ಗಿರೀಶ ದಿಲೀಪ್ ಬದೋಲೆಯವರು.