ಶಹಾಪುರ : ವಡಗೇರಾ ತಾಲೂಕಿನ ಹುಲ್ಕಲ್ ಜೆ ಗ್ರಾಮದ ಹಜರತ್ ಸೈಯದ್ ಮಾನಶಾವಲಿ ಖಾದ್ರಿ ದರ್ಗಾದಲ್ಲಿ ಗ್ರಾಮದ ಹಿಂದೂ ಮುಸ್ಲಿಮರು ಸೇರಿ ದೇಶದ ಗೆಲುವಿಗಾಗಿ, ಸೈನಿಕರ ಸುರಕ್ಷತೆಗಾಗಿ, ಶತ್ರುಗಳ ನಾಶಕ್ಕಾಗಿ ಅಲ್ಲಾನಲ್ಲಿ ಪ್ರಾರ್ಥಿಸಿದರು. ಕೆಪಿಸಿಸಿ ರಾಜ್ಯ ಸಂಯೋಜಕರಾದ ರಾಜ್ ಮೈನುದ್ದಿನ್ ಜಮಾದಾರ್ ದೋರನಹಳ್ಳಿ ಮಾತನಾಡಿ, ಇಂದು ಗ್ರಾಮ ದರಗಾದಲ್ಲಿ ಮುತುವಲ್ಲಿ ಸಜ್ಜಾದ ನಶಿನ್ ಹಜ್ರತ್ ಮೊಹಸೀನ್ ಸಾಹೇಬ್ ಖಾದ್ರಿ ನೇತೃತ್ವದಲ್ಲಿ ದೇಶದ ಒಳಿತಿಗಾಗಿ ದೇಶದ ಗೆಲುವಿಗಾಗಿ ಅಲ್ಲಾನಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು. ಕಳೆದ ನಾಲ್ಕೈದು ದಿನಗಳಿಂದ ದೇಶದ ಸೈನಿಕರು ಉಗ್ರರನ್ನು ಸದೆ ಬಡಿಯುತ್ತಿದ್ದಾರೆ.ಸೈನಿಕರು ದೇಶದ ಸುರಕ್ಷಿತವಾಗಿ ಹೋರಾಡುತ್ತಿದ್ದಾರೆ. ಸೈನಿಕರ ಹೋರಾಟದಿಂದಾಗಿ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಮೊದಲು ಭಾರತೀಯರು ನಾವು.ಭಾರತದಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದ ಬಾಳುತ್ತಿದ್ದೇವೆ. ದೇಶದಲ್ಲಿ ಉಗ್ರರ ಉಪಟಳ ಅಡಗಿಸಲು ನಮ್ಮ ದೇಶದ ಸೈನಿಕರು ಯುದ್ಧದಲ್ಲಿ ತೊಡಗಿದ್ದಾರೆ. ಸೈನಿಕರಿಗೆ ಯಾವುದೇ ತೊಂದರೆಯಾಗದಂತೆ ಆ ಭಗವಂತನು ಅವರಿಗೆ ಹೆಚ್ಚಿನ ಶಕ್ತಿ ಕೊಡಲಿ ಎಂದು ನಮ್ಮ ಗುರುಗಳ ನೇತೃತ್ವದಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಕ್ರೈಸ್ತ ಸಮಾಜದ ಆನಂದಪ್ಪ ಹಾಗೂ ಹನುಮಂತ, ಹುಸೇನ್ ಬಾಷಾ ಸೇರಿದಂತೆ ಇತರರು ಪ್ರಾರ್ಥಿಸಿದರು.