ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಪದಗ್ರಹಣ : ಬೂತ್ ಮಟ್ಟದಿಂದ ಪಕ್ಷದ ಬಲವರ್ಧನೆಗೆ ಶ್ರಮಿಸಿ ಸಚಿವ ದರ್ಶನಾಪೂರ ಸಲಹೆ

ಶಹಾಪುರ : ತಾಲೂಕಿನ ಆರ್ಬೋಳ ಕಲ್ಯಾಣ ಮಂಟಪದಲ್ಲಿ ಶಹಪೂರ ಮತಕ್ಷೇತ್ರದ ವ್ಯಾಪ್ತಿಯ ಶಹಪುರ ಮತ್ತು ಕೆಂಭಾವಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಸುದೀರ್ಘ 21 ವರ್ಷಗಳ ಕಾಲ ಶಹಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಶೇಖರ ಆರ್ಬೋಳ್ ಕರ್ತವ್ಯ ನಿರ್ವಹಿಸಿದ್ದಾರೆ. ಅನಾರೋಗ್ಯದ ನಿಮಿತ್ತ ನೂತನವಾಗಿ ಶಿವುಮಾಂತಪ್ಪ ಚಂದಾಪುರ ಅವರನ್ನು ಅಧ್ಯಕ್ಷರನ್ನಾಗಿ, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಬಸನಗೌಡ ಹೊಸಮನಿ ಯಾಳಗಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಚುನಾವಣೆಗೆ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ನೂತನ ಅಧ್ಯಕ್ಷರಿಗೆ ಸಚಿವರು ಸಲಹೆ ನೀಡಿದರು.
ಶೋಷಿತರ ಬಡವರ ಅಲ್ಪಸಂಖ್ಯಾತರ ಪರ ಕಾಂಗ್ರೆಸ್ ಪಕ್ಷವಿದೆ. ಪಕ್ಷದ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಕೊಟ್ಟ ಮಾತಿಗೆ ತಪ್ಪದೆ ಕಾಂಗ್ರೆಸ್ ಪಕ್ಷ ನಡೆದುಕೊಂಡಿದೆ. ಬಿಜೆಪಿಯವರಂತೆ ಸುಳ್ಳು ಹೇಳಿ ಅಧಿಕಾರಕ್ಕೆ ಬರುವ ಮಾತೇ ಇಲ್ಲ. ಕೇಂದ್ರದಲ್ಲಿ 11 ವರ್ಷದಿಂದ ಆಳ್ವಿಕೆ ಮಾಡುತ್ತಿರುವ ಬಿಜೆಪಿಯವರು ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದರ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಬಿಜೆಪಿ ವಿರುದ್ಧ ಕಿರಿಕಾಡಿದರು. ರಾಜ್ಯ ದಿವಾಳಿಯಾಗಿದೆ ಎಂದು ಹೇಳುವ ಬಿಜೆಪಿಯವರು ರಾಜ್ಯದಲ್ಲಿ ನಡೆಯುವುದು ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುತ್ತಿಲ್ಲ. ಜಾತಿ ಧರ್ಮಗಳ ಮಧ್ಯೆ ಜಗಳ ಬಿಜೆಪಿಯವರ ಸಾಧನೆ ಬಿಜೆಪಿ ವಿರುದ್ಧ ಹರಿಹಾಯ್ದರು.ನ್ಯಾಯಾಲಯವು ಆಲಮಟ್ಟಿ ಜಲಾಶಯವನ್ನು 519 ರಿಂದ 524 ಅಡಿ ಎತ್ತರಕ್ಕೆ ಹೆಚ್ಚಿಸಲು ಸೂಚಿಸಿದೆ. ಆದರೆ ಕೇಂದ್ರ ಸರ್ಕಾರ ಇದುವರೆಗೆ ಆದೇಶ ಪತ್ರ ನಮಗೆ ನೀಡಿಲ್ಲ. ಇದನ್ನು ರಾಜ್ಯ ಬಿಜೆಪಿಯವರು ಮಾಡಲಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.
ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಕಾಶ್ಮೀರದ ಪಹಲ್ಗಾಮ್ ನಲ್ಲಿ ಮೃತಪಟ್ಟ ಪ್ರವಾಸಿಗರ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷ ಮೌನಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಸವರಾಜ ಪಾಟೀಲ್ ಚಿಂಚೋಳಿ, ಗೌಡಪ್ಪಗೌಡ ಆಲ್ದಾಳ, ತಿಮ್ಮಯ್ಯ ಪುರ್ಲೆ,ಸಲಿಂ ಸಂಗ್ರಾಮ, ಮುಸ್ತಫಾ ದರ್ಬಾನ್, ವಾಮನರಾವ್ ದೇಶಪಾಂಡೆ, ಮಲ್ಲನಗೌಡ ಉಕ್ಕಿನಾಳ, ಗಿರಿಯಪ್ಪಗೌಡ ಬಾಣತಿಹಾಳ, ಇಬ್ರಾಹಿಂ ಶಿರ್ವಾಳ,ಸೈಯುದ್ದೀನ್ ಖಾದ್ರಿ, ನೀಲಕಂಠ ಬಡಿಗೇರ, ಗುರುನಾಥ ರೆಡ್ಡಿ, ಸಣ್ಣ ನಿಂಗಣ್ಣ ನಾಯ್ಕೋಡಿ, ವಿನೋದ್ ಪಾಟೀಲ್ ದೋರನಹಳ್ಳಿ,ಮಾನ್ಸಿಂಗ್ ಚೌಹಾಣ್, ಭೀಮಶಂಕರ, ಶಾಂತಗೌಡ ನಾಗನಟಗಿ, ಮರೆಪ್ಪ ಬಿಳಾರ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಪಕ್ಷ ಅತಿ ದೊಡ್ಡ ಜವಾಬ್ದಾರಿನೀಡಿದೆ. ಪಕ್ಷ ನಿಷ್ಠೆ ಪ್ರಾಮಾಣಿಕತೆಗೆ ಒಲಿದ ಸ್ಥಾನ ಇದಾಗಿದೆ. ಸಚಿವರ ಮಾರ್ಗದರ್ಶನ  ಹಿರಿಯರ ಕಿರಿಯರ ಕಾರ್ಯಕರ್ತರ  ಸಲಹೆ ಯೋಚನೆಗಳ ಮೇರೆಗೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ. 
ಶಿವುಮಾಂತಪ್ಪ ಸಾಹು
ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಹಾಪುರ.
ಬ್ಲಾಕ್ ಕಾಂಗ್ರೆಸ್ ಎಂದರೆ ಇಡೀ ಮತಕ್ಷೇತ್ರದ ಜವಾಬ್ದಾರಿಯಾಗಿರುತ್ತದೆ. ಬೂತ್ ಮಟ್ಟದ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ. ಮುಂದಿನ ಸ್ಥಳೀಯ ಚುನಾವಣೆಗೆ ಪಕ್ಷ ಸಜ್ಜಾಗಬೇಕಿದೆ. ಕಾಂಗ್ರೆಸ್ ಗೆಲುವಿಗಾಗಿ ಶ್ರಮಿಸಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಸರೆಡ್ಡಿ ಅನಪುರ ಹೇಳಿದರು.