ಶಹಾಪುರ : ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ 134ನೇ ಜಯಂತೋತ್ಸವ ಅಂಗವಾಗಿ ಸರ್ ಎಮ್ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘಟನೆ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಜೆಪಿ ಮುಖಂಡರಾದ ಕರಣ ಸುಬೇದಾರ, ಶಾಂತಪ್ಪ ಗುತ್ತೇದಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರು,ಡಾ ಪದ್ಮಾನಂದ ಗಾಯ್ಕವಾಡ ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ ಎಮ್ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘಟನೆವತಿಯಿಂದ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಪತ್ರಕರ್ತರಾದ ಬಸವರಾಜ ಕರೆಗಾರ, ಸಿದ್ದು ಮುಂಡಾಸ,ಸುನೀಲ ಗೋಗಿ,ರಾಜಪ್ಪ ಕಟ್ಟಿಮನಿ, ಬೀಮರಾಯ ಕಟ್ಟಿಮನಿ, ಅಧ್ಯಕ್ಷರಾದ ಪ್ರದೀಪ ಅಣಬಿ, ಬೋಜಪ್ಪ ಮುಂಡಾಸ,ಅಂಭ್ರೇಶ ಶಿರವಾಳ, ಹಣಮಂತ ವಡಗೇರಾಅಂಭ್ರೇಶ ಕಟ್ಟಿಮನಿ,ಸಂಗು ಬೇವಿನಹಳ್ಳಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Video Player
Media error: Format(s) not supported or source(s) not found