ಮೊಬೈಲ್ ಕೈಬಿಡಿ ಪುಸ್ತಕ ಕೈ ಹಿಡಿ : ಡಿಎಸ್ ವಿಜಯಕುಮಾರ್ ಮಡ್ಡೆ

ವಡಗೇರಾ:- ಡಿಜಿಟಲ್ ಮಾಧ್ಯಮಗಳಿಂದ ಪುಸ್ತಕ ಓದುವ ಅಭಿರುಚಿ ಕಳೆದುಕೊಳ್ಳದೆ, ಜ್ಞಾನದ ಭಂಡಾರ ಹೆಚ್ಚಿಸಿಕೊಳ್ಳಲು ಪುಸ್ತಕದ‍ ಗೂಡು ಕಾರ್ಯಕ್ರಮಕ್ಕೆ ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ ಚಾಲನೆ ನೀಡಿದರು.ವಡಗೇರಾದ ಬಾಲಾಜಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಪಂಚಾಯತಿಯಿಂದ ಆಯೋಜಿಸಿದ ಕಾರ್ಯಕ್ರಮಕ್ಕೆ ಡಿಎಸ್ ರವರು ಚಾಲನೆ ನೀಡಿ ಮಾತನಾಡಿದರು, ರಾಜ್ಯ ಗ್ರಾಮೀಣರು ಅಭಿವೃದ್ಧಿ ಹಾಗೂ ಪಂಚಾಯತಿ ರಾಜ್ಯ ಇಲಾಖೆ ಅಧಿಕಾರಿಗಳ ಸೂಚನೆ ಮೇರಿಗೆ, ತಾಲ್ಲೂಕಿನ 17 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪುಸ್ತಕ ಗೂಡು(ಜ್ಞಾನದ ಗೂಡು) ಪ್ರಾರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಗ್ರಾಮೀಣ ಭಾಗದ ಜನರು ಡಿಜಿಟಲ್ ಮಾಧ್ಯಮಗಳಾದ ಟಿವಿ, ಮೊಬೈಲ್ ಹಾಗೂ ಇತರ ಮಾಧ್ಯಮಗಳಿಗೆ ಕಡಿಮೆ ಸಮಯಕೊಟ್ಟು, ಹೆಚ್ಚಿನ ಜ್ಞಾನಾರ್ಧನೆಗೆ ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಳ್ಳಬೇಕಿದೆ, ಅಲ್ಲದೆ ಪುಸ್ತಕ ಗೂಡುಗಳ ನಿರ್ವಹಣೆ ಗ್ರಂಥಪಾಲಕರ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ಇದೇ ವೇಳೆ ಕಾರ್ಯಕ್ರಮದ ನೇತೃತ್ವ ವಹಿಸಿದ ತಾಪಂ ಇಓ ಮಲ್ಲಿಕಾರ್ಜುನ ಸಂಗ್ವಾರ ಮಾತನಾಡಿ, ಗ್ರಾಮೀಣ ಭಾಗದ ಅದೆಷ್ಟೋ ಓದುಗರ, ಯುವಕರ, ಗ್ರಾಮದ ಹಿರಿಯರ ಕನಸು ಪುಸ್ತಕ ಗೂಡು ಆರಂಭಿಕವಾಗುವ ಮೂಲಕ ನೆನಸಾಗುತ್ತಿದೆ. ಪುಸ್ತಕ ಗೂಡಿನಲ್ಲಿರುವ ಪ್ರತಿಯೊಂದು ಪುಸ್ತಕವು ತಮ್ಮದೆಂದು ಭಾವಿಸಿ, ಅನ್ಯ ಅವಶ್ಯಕ ಹಾಳು ಮಾಡದೆ, ಗ್ರಾಮದವರೇಲ್ಲ ಈ ಜ್ಞಾನದ ಗೂಡು ತಮ್ಮದೆಂದು ಸ್ವೀಕಾರ ಮಾಡಬೇಕಿದೆ, ವಿಶೇಷವಾಗಿ ಗ್ರಾಪಂ ಗೊಂದು ಈಗಾಗಲೇ ಗ್ರಂಥಾಲಯಗಳಿದ್ದು, ಎಲ್ಲಾ ಗ್ರಾಮದಲ್ಲಿ ಗ್ರಂಥಾಲಯ ಆರಂಭಿಸಲು ಸಾಧ್ಯವಾಗದೆ ಇರದಕ್ಕೆ, ಎಲ್ಲಾ ಗ್ರಾಮಗಳಲ್ಲಿ ಪುಸ್ತಕ ಗೂಡು ಓದುಗರ ಅಭಿರುಚಿ ಹೆಚ್ಚಿಸಲಿದೆ ಎಂದಿದ್ದಾರೆ.

ಇನ್ನೂ ಸಹಾಯಕ ನಿರ್ದೇಶಕ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಆರ್ ಡಿಪಿಆರ್ ಇಲಾಖೆ ಯಿಂದ ಪ್ರತಿಯೊಂದು ಗ್ರಾಮಕ್ಕೆ ಪುಸ್ತಕದ ಗೂಡು ಆರಂಭಿಸುವುದು ಸಾಧ್ಯತೆಯಿತೆ. ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಇದ್ರಲ್ಲಿ ಸಂಗ್ರಹಿಸ ಬಹುದಾಗಿದೆ. ತಮ್ಮಲ್ಲಿರುವ ಪುಸ್ತಕಗಳನ್ನು ಕೂಡ ಇದ್ರಲ್ಲಿ ಇರಿಸಿ ಓದುಗರ ಅಭಿರುಚಿ ಮತ್ತಷ್ಟು ಹೆಚ್ಚಿಸಬಹುದಾಗಿದೆ ಎಂದಿದ್ದಾರೆ.

ಈ ವೇಳೆ ಗ್ರಾಪಂ ಅಧ್ಯಕ್ಷರು ಸಿದ್ಧಪ್ಪ, ಪಿಡಿಓ ಶರಣುಗೌಡ, ಸಿದ್ದವೀರಪ್ಪ, ಬಸವಂತರಾಯ, ಮಲ್ಲಿಕಾರ್ಜುನ, ಮತ್ತು ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್, ಸೆಕ್ರೆಟರಿ, ಬಿಲ್ ಕಲೆಕ್ಟರ್, ಗ್ರಂಥ ಪಾಲಕರು, ಟಿಎಇ, ಜಿಕೆಮ್ ಎನ್ ಆರ್ ಎಲ್ ಎಮ್ ಸಿಬ್ಬಂದಿಗಳು ಹಾಗೂ ರಾಜೀವ್ ಗಾಂಧಿ ಪೇಲೋ ದೀಕ್ಷಿತ್, ತಾಪಂ, ಗ್ರಾಪಂ ಸಿಬ್ಬಂದಿಗಳು ಇದ್ಧರು.