ಗಬ್ಬೂರು ಶ್ರೀ ಕ್ಷೇತ್ರ ಕೈಲಾಸ
107 ನೆಯ ಶಿವೋಪಶಮನ ಕಾರ್ಯ
ವಿಶ್ವೇಶ್ವರ ಶಿವ ಕರುಣಿಸಿದ ಮಕ್ಕಳು, ಪೀಠಾಧ್ಯಕ್ಷರ ತೊಡೆಯಮೇಲೆ ನಲಿದಾಡಿದ ಹಸುಳೆಗಳು
ದೇವದುರ್ಗ : ಸಂತಾನೇಶ್ವರ ಶಿವ’ನೆಂದು ಪ್ರಖ್ಯಾತನಾಗಿರುವ ಮಹಾಶೈವ ಧರ್ಮಪೀಠದ ಶ್ರೀ ಕ್ಷೇತ್ರ ಕೈಲಾಸದ ಕ್ಷೇತ್ರನಾಥ ವಿಶ್ವೇಶ್ವರ ಸನ್ನಿಧಿಯು ಎಪ್ರಿಲ್ 06 ರ ರವಿವಾರದಂದು ಶಿವಾನುಗ್ರಹದಿಂದ ಹುಟ್ಟಿದ ಎಳೆಮಕ್ಕಳಿಬ್ಬರ ಅಳು- ನಗು- ಕೇಕೆಗಳಿಂದ ಸಂಭ್ರಮಗೊಂಡಿತ್ತು,ಮಂದಸ್ಮಿತಗೊಂಡಿತ್ತು. ಶ್ರೀಕ್ಷೇತ್ರ ಕೈಲಾಸದಲ್ಲಿ ಎಪ್ರಿಲ್ 06 ರ ರವಿವಾರದಂದುನಡೆದ 107 ನೆಯ ‘ ಶಿವೋಪಶಮನ ಕಾರ್ಯ’ ದಲ್ಲಿ ಡಾ.ಪ್ರಶಾಂತ ಅವರ ಮೂರು ತಿಂಗಳ ಗಂಡುಮಗು ಹಾಗೂ ಒಣಕುಣಿಯ ಮಹೇಶ ಸುಪ್ರಿಯಾ ದಂಪತಿಗಳ ಒಂದುವರ್ಷದ ಹೆಣ್ಣುಮಗು ಅಪೇಕ್ಷಾ ಇಬ್ಬರು ಶ್ರೀಕ್ಷೇತ್ರ ಕೈಲಾಸದಲ್ಲಿ ಶಿವ ವಿಶ್ವೇಶ್ವರನ ಸನ್ನಿಧಿಯಲ್ಲಿ ತಮ್ಮ ಬಾಲಲೀಲೆಗಳನ್ನು ಮೆರೆದರು.ತನ್ನನ್ನು ನಂಬಿರುವ ಭಕ್ತರಿಗೆ ವಿಶ್ವೇಶ್ವರನು ನಿಶ್ಚಿತವಾಗಿ ಸಂತಾನವನ್ನು ಕರುಣಿಸುವದರಿಂದ ವಿಶ್ವೇಶ್ವರನ ಅನುಗ್ರಹದಿಂದ ಮಕ್ಕಳನ್ನು ಪಡೆದ ದಂಪತಿಗಳು ಶಿವೋಪಶಮನದ ದಿನಗಳಲ್ಲಿ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ವಿಶ್ವೇಶ್ವರ ಶಿವನಿಗೆ ಭಕ್ತಿ ಸಮರ್ಪಿಸುತ್ತಾರೆ.ಪೀಠಾಧ್ಯಕ್ಷರು ಮಕ್ಕಳನ್ನು ಮುದ್ದಾಡಿ ಸಂಭ್ರಮಿಸುತ್ತಾರೆ.
ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಸರಕಾರಿ ಕರ್ತವ್ಯದಲ್ಲಿ ಬ್ಯುಸಿ ಆಗಿದ್ದುದರಿಂದ ಕಳೆದ ಕೆಲವು ತಿಂಗಳುಗಳಿಂದ ಶಿವೋಪಶಮನ ಕಾರ್ಯ ನಡೆದಿರಲಿಲ್ಲ. ವಿಶ್ವಾವಸು ಸಂವತ್ಸರದ ಯುಗಾದಿಯಂದು “ನನ್ನ ಸನ್ನಿಧಿಯನ್ನರಸಿ ಬರುವ ಭಕ್ತರನ್ನು ನಿರಾಶೆಗೊಳಿಸಬೇಡ” ಎಂದು ಪೀಠಾಧ್ಯಕ್ಷರಿಗೆ ವಿಶ್ವೇಶ್ವರ ಶಿವನು ಅಪ್ಪಣೆಯನ್ನು ಇತ್ತಿದ್ದರಿಂದ ತೀರ ಅನಿವಾರ್ಯ ಕಾರಣಗಳ ಹೊರತುಪಡಿಸಿ ಶಿವೋಪಶಮನ ಕಾರ್ಯ ನಡೆಸಲು ಪೀಠಾಧ್ಯಕ್ಷರು ಸಂಕಲ್ಪಿಸಿದ್ದು ಎಪ್ರಿಲ್ ಮೊದಲವಾರದ ಮೊದಲ ರವಿವಾರದಂದು 107 ನೆಯ ಶಿವೋಪಶಮನ ಕಾರ್ಯ ನಡೆಯಿತು.
ಇಂದಿನ ಶಿವೋಪಶಮನದಲ್ಲಿ ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ, ವಾರ್ತಾಧಿಕಾರಿ ಬಸವರಾಜ ಕರೆಗಾರ,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಗಾಯತ್ರಿ ಪೀಠದ ಅಧ್ಯಕ್ಷ ಉದಯಕುಮಾರ ಪಂಚಾಳ,ಶರಣಗೌಡ ಮಾಲೀಪಾಟೀಲ ಹೊನ್ನಟಗಿ,ಚಿತ್ರ ಕಲಾವಿದ ಶರಣಪ್ಪ ಬೂದಿನಹಾಳ, ವಿರುಪನಗೌಡ ಹೊನ್ನಟಗಿ,ಬಾಬುಗೌಡ ಯಾದವ ಸುಲ್ತಾನಪುರ,ಪತ್ರಕರ್ತ ಏಳುಬಾವೆಪ್ಪಗೌಡ,ರಂಗನಾಥ ಮಸೀದಪುರ,ಯಲ್ಲಪ್ಪ ಕರಿಗಾರ, ಬಿಬ್ಬಣ್ಣ ಮರಾಠ,ಮೌನೇಶ ಬಳ್ಳಾರಿ,ಬೂದಿಬಸವ ಶಾಂತಪ್ಪ ಕರಿಗಾರ,ತಿಪ್ಪಯ್ಯ ಭೋವಿ,ವೆಂಕಟೇಶ ಮಸೀದಪುರ,ಖಾಸೀಂ ಮಸೀದಪುರ ಮೊದಲಾದವರು ಉಪಸ್ಥಿತರಿದ್ದರು .