ಶಹಾಪೂರ :ತಾಲೂಕಿನ ಸೈದಾಪುರ ಗ್ರಾಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾಕ್ಟರ್ ಭೀಮಣ್ಣ ಮೇಟಿಯವರಿಗೆ ಗ್ರಾಮದ ಹಿರಿಯ ಮುಖಂಡರು ಸೇರಿದಂತೆ ಹಲವಾರು ಅಭಿಮಾನಿ ಬಳಗದವರು ಸನ್ಮಾನಿಸಿ ಗೌರವಿಸಿದರು.ಗ್ರಾಮದ ಮುಖಂಡರಾದ ಶರಣಗೌಡ ಪೋ. ಪಾಟೀಲ್ ಮಾತನಾಡಿ, ನಮ್ಮ ಗ್ರಾಮದ ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ಸ್ವ ಸಾಮರ್ಥ್ಯದಿಂದ ರಾಜ್ಯ ಮಟ್ಟಕ್ಕೆ ಬೆಳೆದು ಇಂದು ರಾಜ್ಯ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ ಭೀಮಣ್ಣ ಬೇಟಿಯವರು ಆಯ್ಕೆಯಾಗಿದ್ದು ಸಂತಸದ ವಿಚಾರ. ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿ ಪ್ರಮುಖವಾದ ಸ್ಥಳಗಳಲ್ಲಿ ಹಳ್ಳಿಗಳು ನಗರಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಹೆಸರು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಭೀಮಣ್ಣ ಮೇಟಿಯವರು ಯಾದಗಿರಿ ಕ್ಷೇತ್ರದ 2023ರ ಚುನಾವಣೆ ಆಕಾಂಕ್ಷಿಯಾಗಿದ್ದರು ಪರಿ ಪಕ್ಷದ ವರಿಷ್ಠರ ಸೂಚನೆಯಂತೆ ಟಿಕೆಟ್ ಕೈತಪ್ಪಿದ್ದರು ಪಕ್ಷದ ಪರವಾಗಿ ನಿಂತು ಯಾದಗಿರಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಜಯ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದರು ಅದರಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಗುರುತಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ ಇಂದು ತಿಳಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಭೀಮಣ್ಣ ಮೇಟಿ, ನನ್ನ ಹುಟ್ಟೂರಿನಲ್ಲಿ ನನಗೆ ಸನ್ಮಾನಿಸುತ್ತಿರುವುದು ಸಂತೋಷದಾಯಕ ವಿಚಾರ. ನಿಮ್ಮ ಈ ಸತ್ಕಾರಕ್ಕೆ ನಾನು ಸದಾ ಋಣಿಯಾಗಿದ್ದೇನೆ. ಗ್ರಾಮಕ್ಕೆ ಸದಾ ಹೆಸರು ತರುವ ಕೆಲಸ ಮಾಡುತ್ತೇನೆ. ನನ್ನ ಶಕ್ತಿ ಮೀರಿ ನಮ್ಮ ಗ್ರಾಮಕ್ಕೆ ನನ್ನ ಕೈಲಾದ ಸೇವೆಯವನ್ನು ಸಲ್ಲಿಸುತ್ತೇನೆ. ಶೈಕ್ಷಣಿಕವಾಗಿ ಉನ್ನತ ಅವಕಾಶಗಳು ಒದಗಿ ಬಂದಾಗ ಪ್ರತಿಯೊಬ್ಬರ ಬೆನ್ನಿಗೆ ನಿಂತು ಪ್ರೊತ್ಸಾಹಿಸುತ್ತೇನೆ. ನನ್ನ ಮೇಲಿಟ್ಟಿರುವ ಅಭಿಮಾನ ಪ್ರೀತಿ ವಿಶ್ವಾಸಕ್ಕೆ ಸದಾ ಚಿರು ಋಣಿಯಾಗಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪರ್ವತ ರೆಡ್ಡಿ ಪೋ.ಪಾಟೀಲ್, ಸಿದ್ರಾಮಪ್ಪ ಸನ್ನತಿ,ಮೈಲಾರಿ ಮೇಟಿ,ಭೀರುಮೇಟಿ, ಈರಣ್ಣ ಹೊಸಮನಿ, ಶಿವಾರೆಡ್ಡಿ ಮೇಟಿ, ರಾಜೇಸಾಬ ಬುರಂಜಿ, ರಾಜಶೇಖರ ಪೂಜಾರಿ, ಮಲ್ಲಣ್ಣಗೌಡ ಮಾಲಿ ಪಾಟೀಲ್, ಬಸವರಾಜ ವಿಶ್ವಕರ್ಮ, ಸಂಗಣ್ಣ ಸಾಹು, ಸಂಗಪ್ಪ ದೊಡ್ಡಮನಿ, ಶಿವಗೇನಿ ಮೇಟಿ,ಸೋಮರಾಯಗೌಡ ಬಿರಾದಾರ, ನಿಂಗಣ್ಣ ಹೊಸಮನಿ, ತಿಮ್ಮಯ್ಯ ಅಮ್ಮಾಪೂರ, ಇಬ್ರಾಹಿಂ ಪಟೇಲ್,ಮಾದೇವ ಮೇಟಿ, ಅಯ್ಯಪ್ಪ ಸ್ವಾಮಿ, ಶರಣಪ್ಪ ಸನ್ನತಿ,ಅಂಬ್ಲಪ್ಪ ಗೌಡಿಗೇರಿ, ಮುದುಕಪ್ಪ ಕುರಿ, ಸೇರಿದಂತೆ ಗ್ರಾಮದ ಯುವಕರು, ಹಿರಿಯ ಮುಖಂಡರು ಉಪಸ್ಥಿತರಿದ್ದರು.