“ಪೀಠಾಧ್ಯಕ್ಷರಿಂದ ವಿಶ್ವೇಶ್ವರನಿಗೆ ಸಲ್ಲಿತು ಯುಗಾದಿಯ ಮೊದಲ ಮಹಾಪೂಜೆ”
ಧರೆಗಿಳಿದ ಕೈಲಾಸವೆಂಬ ಖ್ಯಾತಿಯ ‘ ಮಾತನಾಡುವ ಮಹಾದೇವನ ನೆಲೆ’ ಯಾದ ಗಬ್ಬೂರಿನ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಯುಗಾದಿಯಂದು ಹಬ್ಬದ ವಾತಾವರಣ.ಪ್ರತಿವರ್ಷ ಯುಗಾದಿಯಂದು ಮಹಾಶೈವ ಧರ್ಮಪೀಠದಲ್ಲಿ ‘ ಯುಗಾದಿ ಉತ್ಸವ’ ವನ್ನು ಸಡಗರ – ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಇತ್ತೀಚೆಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮಾತೋಶ್ರೀ ಮಲ್ಲಮ್ಮನವರು ಕೈಲಾಸವಾಸಿಗಳಾಗಿದ್ದರಿಂದ ವಿಶ್ವಾವಸು ಸಂವತ್ಸರದ ಯುಗಾದಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಪೀಠದ ಸಂಪ್ರದಾಯದಂತೆ ಯುಗಾದಿಯಂದು ಕ್ಷೇತ್ರನಾಥ ವಿಶ್ವೇಶ್ವರನಿಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಅಗ್ರಪೂಜೆಯನ್ನು ನೆರವೇರಿಸುವ ಮೂಲಕ ವಿಶ್ವಾವಸು ಸಂವತ್ಸರದ ಪೂಜಾಕೈಂಕರ್ಯಗಳಿಗೆ ಶುಭಾರಂಭ ಮಾಡಿದರು.ಪೀಠಾಧ್ಯಕ್ಷರು ಪ್ರತಿವರ್ಷ ಯುಗಾದಿ,ಶಿವರಾತ್ರಿ ಮತ್ತು ನವರಾತ್ರಿಯ ದಿನಗಳಲ್ಲಿ ಸ್ವಯಂ ಶಿವ ದುರ್ಗಾದೇವಿಯರ ಪೂಜೆ ನೆರವೇರಿಸುತ್ತಾರೆ.ಉಳಿದ ದಿನಗಳಲ್ಲಿ ಪೀಠಾಧ್ಯಕ್ಷರ ಅಳಿಯ,ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ ಶಿವ ದುರ್ಗಾದೇವಿಯರ ನಿತ್ಯ ಪೂಜೆಯನ್ನು ನೆರವೇರಿಸುವರು.
ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಇಂದು ವಿಶ್ವೇಶ್ವರ ಶಿವನಿಗೆ ಪಂಚಾಮೃತ ಅಭಿಷೇಕದೊಂದಿಗೆ ೧೦೮ ಎಳೆನೀರುಗಳ ಅಭಿಷೇಕಸೇವೆ ಸಲ್ಲಿಸಿದರು.ಹಾಗೆಯೇ ದುರ್ಗಾದೇವಿಗೂ ಸಹ ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ಕ್ಷೇತ್ರಕಾಳಿಗೆ ಪೂಜೆಸಲ್ಲಿಸಲಾಯಿತು.ಪೂಜೆಯು ಮಂಗಳಗೊಂಡ ನಂತರ ಭಕ್ತರುಗಳಿಗೆ ಯುಗಾದಿಯ ವಿಶೇಷ ಪಾನೀಯ ಬೇವನ್ನು ನೀಡಲಾಯಿತು.
ಆ ಬಳಿಕ ಪೀಠಾಧ್ಯಕ್ಷರ ಸನ್ನಿಧಿಯಲ್ಲಿ ವಿಶ್ವೇಶ್ವರ ಶಿವನಿಗೆ ಭಕ್ತರು ಸಲ್ಲಿಸಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಯಿತು. ಶಿವರಾತ್ರಿಯಿಂದ ಯುಗಾದಿಯವರೆಗೆ ₹3.33,000 ಕಾಣಿಕೆ ಸಂಗ್ರಹವಾಗಿತ್ತು.
ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನನಗಳ ಅರ್ಚಕ ದೇವರಾಜ ಕರಿಗಾರ,ಈರಪ್ಪ ಹಿಂದುಪುರ,ಶರಣಗೌಡ ಮಾಲೀಪಾಟೀಲ ಹೊನ್ನಟಗಿ,ಶಿವಯ್ಯಸ್ವಾಮಿ ಮಠಪತಿ,ಸಿದ್ರಾಮಯ್ಯಸ್ವಾಮಿ ಹಳ್ಳಿ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಷಣ್ಮುಖ ಹೂಗಾರ,ಬಸವಲಿಂಗ ಕರಿಗಾರ,ಆನಂದ ಬಾಡದ,ರಾಮಕೃಷ್ಣ ಯಾದವ,ತಿಪ್ಪಯ್ಯ ಭೋವಿ,ಬೂದಿಬಸವ ಶಾಂತಪ್ಪ ಕರಿಗಾರ,ಶಿವಕುಮಾರ ವಸ್ತಾರ ಸೇರಿದಂತೆ ಭಕ್ತರುಗಳು ಉಪಸ್ಥಿತರಿದ್ದರು.