ಏ.10ರವರೆಗೆ ರೈತರ ಜಮೀನಿಗೆ ನೀರು ಬಿಡುವಂತೆ ರೈತ ಮುಖಂಡ ಶರಣಪ್ಪ ಸಲಾದಪುರ ಒತ್ತಾಯ

ಶಹಾಪುರ : ರೈತರ ಬೆಳೆ ಕೈಸೇರಲು ಏ.10 ರವರೆಗೆ ನೀರು ಕೊಟ್ಟರೆ ಮಾತ್ರ ರೈತರು ಬದುಕಿ ಕೊಳ್ಳುತ್ತಾರೆ. ಇಲ್ಲದೆ ಹೋದರೆ ಆತ್ಮಹತ್ಯೆ  ಮಾಡಿಕೊಳ್ಳಬೇಕಾಗುತ್ತದೆ  ಎಂದು ಹಿರಿಯ ರೈತ ಮುಖಂಡ ಶರಣಪ್ಪ ಸಲಾದಪುರ ಹೇಳಿದರು. ತಾಲೂಕಿನ ಭೀಮ ರಾಯನ ಗುಡಿಯ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ  ಮಾತನಾಡಿದ ಅವರು ಕಟಾವಿನ ಹಂತಕ್ಕೆ ಬಂದಿರುವ ಬೆಳೆಗಳ ಸಂರಕ್ಷಣೆಯ ಜವಾಬ್ದಾರಿ ಕೆಬಿಜೆಎನ್ ಎಲ್‌ಅಧಿಕಾರಿಗಳಮತ್ತು ಸರ್ಕಾರದ್ದಾಗಿದೆ. ಬೇಸಿಗೆ ಹಂಗಾಮಿನ ಬೆಳೆಗಳಾದ ಶೇಂಗಾ, ಸಜ್ಜೆ, ಮೆಣಸಿನಕಾಯಿ, ಹತ್ತಿ, ಸೂರ್ಯ ಕಾಂತಿ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಈಗ ಬೇಸಿಗೆ ಕಾಲವಾಗಿರುವುದರಿಂದ ಅಧಿಕ ನೀರು ಬೆಳೆಗೆ ಬೇಕಾಗುತ್ತದೆ. ಕಾಲುವೆಗೆ ನಿರಂತರ ನೀರು ಹರಿಸಿದರೆ ಸಮಸ್ಯೆ ಉಂಟಾಗುವುದಿಲ್ಲ. ಇಲ್ಲದೆ ಹೋದರೆ ರೈತರ ನಡುವೆ ಕಂದಕ ಉಂಟಾಗುತ್ತದೆ ಎಂದರು.

ನಾರಾಯಣಪೂರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರ ಹವಿದೆ. ನಿಗಮದ ಅಧಿಕಾರಿಗಳು ಸುಳ್ಳು ಹೇಳಿ, ರೈತರನ್ನು ಯಾಮಾರಿಸಬೇಡಿ. ಏ.10ರವರೆಗೆ ಕಾಲುವೆಗೆ ನೀರು ಹರಿಸಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾ ಯಿಸಿದರು.ಹಿರಿಯ ರೈತ ಮುಖಂಡ ಶಂಕ್ರಣ್ಣ ಒಣಕ್ಯಾಳ ಹಿರಿಯ ರೈತ ಮುಖಂಡ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಹಿರಿಯ ರೈತ ಮುಖಂಡ ಮಲ್ಲಣ್ಣ ಗೌಡ ಪರಿವಾಣ, ಶಿವಮಾಂತು ಸಾಹು ಚಂದಾಪುರ ಇದ್ದರು.