ಸರಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ರಾಯಪ್ಪಗೌಡ ಹರ್ಷ 

ಶಹಾಪುರ : ರಾಜ್ಯ ಸರಕಾರಿ ನೌಕರರಿಗೆ ಸಚಿವ ಸಂಪುಟವು ದಿನಾಂಕ 27-3-2025 ರಂದು ರಾಜ್ಯ ಸರಕಾರಿ ನೌಕರರಿಗೆ ಮತ್ತು ಅವಲಂಬಿತ ಕುಟುಂಬಸ್ಥರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ ಮಹತ್ವದ ಯೋಜನೆ ಆರೋಗ್ಯ ಸಂಜೀವಿನಿ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ ಎಂದು ಯಾದಗಿರಿ ಜಿಲ್ಲಾ ಕರ್ನಾಟಕ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರಾಯಪ್ಪಗೌಡ ಹುಡೇದ ತಿಳಿಸಿದರು. ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರು ಮತ್ತು ಈ ಯೋಜನೆ ಜಾರಿಯಾಗಲು ಕಾರಣೀಭೂತರಾದ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಯೋಜನೆಯಿಂದ ರಾಜ್ಯದ 6 ಸರಕಾರಿ ನೌಕರರಿಗೆ 3 ಲಕ್ಷ ನಿಗಮ ಮಂಡಳಿ ನೌಕರರಿಗೆ ಮತ್ತು ಅವಲಂಬಿತ ಕುಟುಂಬಸ್ಥರಿಗೆ ಲಾಭವಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಯಪ್ಪ ಚಂಡ್ರಿಕಿ, ಖಜಾಂಚಿ ರಂಗನಾಥ ನಾಯಕ, ರಾಜ್ಯ ಪರಿಷತ್ ಸದಸ್ಯರಾದ ಮಲ್ಲಿಕಾರ್ಜುನ ಹನಗಂಡಿ ಇದ್ದರು.