ಎನ್‌ಪಿಎಸ್ ತಾಲೂಕು ಅಧ್ಯಕ್ಷರಾಗಿ ಅಶೋಕ್ ಕಲಾಲ್ ಆಯ್ಕೆ ಹರ್ಷ

ಶಹಾಪುರ : ಸರಕಾರಿ ನೌಕರರಿಗೆ ಭದ್ರತೆಯನ್ನು ಕಲ್ಪಿಸಲು ಸರಕಾರಿ ನೌಕರಸ್ಥರು ಎನ್‌ಪಿಎಸ್ ಜಾರಿಗೆ ತರುವಂತೆ ಕಳೆದ ಹತ್ತು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಪ್ರಸ್ತುತ  ಸರಕಾರ ಸ್ಪಂದಿಸುವ ವಿಶ್ವಾಸವಿದ್ದು ಮತ್ತೆ ಎನ್‌ಪಿಎಸ್ ಜಾರಿಗೆ ತರುತ್ತಾರೆ ಎನ್ನುವ ಭರವಸೆ ಇದೆ. ಎನ್ಪಿಎಸ್ ಜಾರಿಗೆ ಬಂದರೆ ಸರಕಾರಿ ನೌಕರಸ್ಥರಿಗೆ ಮತ್ತು ಅವರ ಕುಟುಂಬಕ್ಕೆ ಭದ್ರತೆ ಕಲ್ಪಿಸಿದಂತಾಗುತ್ತದೆ ಎಂದು ಪ್ರಸ್ತುತ ಎನ್‌ಪಿಎಸ್ ನೌಕರರ ಸಂಘದ ನೂತನ ಯಾದಗಿರಿ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್  ಕಲಾಲ್ ಪ್ರತಿಕ್ರಿಯಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಸ್ತುತದಲ್ಲಿ ನನಗೆ ಹೆಚ್ಚಿನ ಜವಾಬ್ದಾರಿ ಬಂದಿದೆ ಎಂದಿದ್ದಾರೆ.

ಸರಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕರಾಗಿ ಆಯ್ಕೆಯಾದ ಅಶೋಕ ಕಲಾಲ್ ಪ್ರಸ್ತುತ ಜಿಲ್ಲಾ ಪಂಚಾಯಿತಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎನ್‌ಪಿಎಸ್ ತಾಲೂಕು ನೌಕರರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಸಹಕರಿಸಿದ ಯಾದಗಿರಿ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರಾಯಪ್ಪ ಗೌಡ ಹುಡೇದ್ ಮತ್ತು ಎನ್‌ಪಿಎಸ್ ಯಾದಗಿರಿ ಜಿಲ್ಲಾಧ್ಯಕ್ಷರಾದ ರಾಮನಗೌಡ ಅವರ ಮಾರ್ಗದರ್ಶನದ ಅವಶ್ಯಕತೆ ಎಂದು ತಿಳಿಸಿದರು. ಗ್ರಾಮೀಣಾಭಿವೃದ್ಧಿ ಇಲಾಖೆ ಜೊತೆಗೆ ಇತರ ಇಲಾಖೆಗಳ ಸರಕಾರಿ ನೌಕರರ ಜೊತೆಗೆ ಅಶೋಕ ಕಲಾಲ್ ಒಳ್ಳೆಯ ಸಂಪರ್ಕ ಹೊಂದಿದ್ದಾರೆ. ಇದನ್ನರಿತು ಎಲ್ಲಾ ಇಲಾಖೆ ನೌಕರರು ಅಶೋಕ ಕಲಾಲ್ ಅವರನ್ನು ಎನ್‌ಪಿಎಸ್ ಯಾದಗಿರಿ ತಾಲೂಕ ಅಧ್ಯಕ್ಷರನ್ನಾಗಿ ಎಲ್ಲಾ ಇಲಾಖಾ ನೌಕರರ ನೌಕರಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಎನ್‌ಪಿಎಸ್ ಜಾರಿಗೆ ತರುವುದರಿಂದ ಸರಕಾರಿ ನೌಕರಸ್ಥರಿಗೆ ಭದ್ರತೆ ಕಲ್ಪಿಸಿದಂತಾಗುತ್ತದೆ.ನನ್ನನ್ನು ಯಾದಗಿರಿ ತಾಲೂಕು ಎನ್ಪಿಸ್ ಅಧ್ಯಕ್ಷರನ್ನಾಗಿ ಮಾಡಿರುವುದರಿಂದ ಹೆಚ್ಚಿನ ಜವಾಬ್ದಾರಿ ಬಂದಿದೆ. ಮುಂದಿನ ದಿನಮಾನಗಳಲ್ಲಿ ಸರಕಾರಿ ನೌಕರರ ಸೇವಾ ಭದ್ರತೆಗಾಗಿ ಶ್ರಮಿಸುತ್ತೇನೆ 
ಅಶೋಕ ಕಲಾಲ್
ಎನ್‌ಪಿಎಸ್ ಯಾದಗಿರಿ ನೂತನ ತಾಲೂಕ ಅಧ್ಯಕ್ಷರು ಹಾಗೂ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ನಿರ್ದೇಶಕರು.