ಎಚ್.ರೇವಣ್ಣರವರ ಮೇಲೆ ಮಹಿಳೆ ಮಾಡಿರುವ ಆರೋಪ ಸತ್ಯಕ್ಕೆ ದೂರ : ರಂಗನಗೌಡ ಪಾಟೀಲ್

Yadgiri : ಸುರಪುರ : ಕರ್ನಾಟಕ ರಾಜ್ಯದ ಒಬ್ಬ ಧೀಮಂತ ನಾಯಕರ ಮಾಜಿ ಸಚಿವರು ಪ್ರಸ್ತುತ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ರೇವಣ್ಣರವರ ಮೇಲೆ ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ನಂದಿನಿ ನಾಗರಾಜ್ ಅವರು ಮೊದಲು ಹೆಣ್ಣು ಮಕ್ಕಳ ಬೆಲೆ ಏನು ಅನ್ನುವುದನ್ನು ತಿಳಿದುಕೊಳ್ಳಲಿ ರೇವಣ್ಣನವರು ಸರಳ ಸಜ್ಜನಿಕೆಯ ರಾಜಕಾರಣಿ. ಇಂದಿರಾಗಾಂಧಿ ಕಾಲದಿಂದ ಸುಮಾರು 40ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣದಲ್ಲಿ ಪ್ರಚಲಿತ ಇರುವಂತ ನಾಯಕರು.ಸಚಿವರಾಗಿ ಹಲವಾರು ಕೆಲಸ ಮಾಡಿದಂತಹ ವ್ಯಕ್ತಿ ನಂದಿನಿ ನಾಗರಾಜ್ ಅವರು ನಾನು ಕಾಂಗ್ರೆಸ್ ಕಾರ್ಯಕರ್ತೆ ನನಗೆ ರೇವಣ್ಣರವರು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಹೇಳುತ್ತಿರುವುದು ಅವರ ರಾಜಕೀಯ ಬೆಳವಣಿಗೆ ಸಹಿಸದ ಕಾಣದ ಕೈಗಳ ಷಡ್ಯಂತ್ರ ಎಂದು ಕಾಂಗ್ರೆಸ್ ಮುಖಂಡ ರಂಗನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅಹಿಂದ ನಾಯಕರ ಸಂಘಟನೆಯಲ್ಲಿ ತೊಡಗಿರುವಂತಹ ವ್ಯಕ್ತಿತ್ವ ಇರುವ ರಾಜಕಾರಣಿ ರೇವಣ್ಣರವರು. ಸುಳ್ಳು ಆರೋಪ ಮಾಡುತ್ತಿರುವ ನಂದಿನಿ ನಾಗರಾಜ್ ಅವರನ್ನು ಪೊಲೀಸ ಇಲಾಖೆ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.