BREAKING News : ಬೈಕ್ ಮತ್ತು ಕಾರು ಡಿಕ್ಕಿ ಸವಾರರಿಬ್ಬರ ದುರ್ಮರಣ

ಶಹಾಪುರಃ ಕಲ್ಬುರ್ಗಿ ಯಿಂದ ಶಹಾಪುರ ಕಡೆ ಹೊರಟಿದ್ದ ಕಾರೊಂದು ವೇಗಗಾಗಿ ಬಂದು ಎದುರಿಗೆ ಹೊರಟಿದ್ದ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಮೃತಪಟ್ಟ ಘಟನೆ ಆರಬೋಳ ಕಲ್ಯಾಣ ಮಂಟಪ ಬಳಿ ಹೆದ್ದಾರಿ ಮೇಲೆ ಮಂಗಳವಾರ ರಾತ್ರಿ 9-20 ರ ಸುಮಾರಿಗೆ ನಡೆದಿದೆ.

ಚಾಮನಾಳ ಕಡೆ ಹೊರಟ್ಟಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಸುರಪುರದಿಂದ ಕಲಬುರ್ಗಿ ಗೆ ಹೊರಟಿದ್ದ ಬಸ್ ಗೂ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.

ಬೈಕ್ ಸವಾರರಾದ ದೇವಿಂದ್ರ ತಂದೆ ಸುಭಾಷ ದಂಡಸೋಲಾಪುರ (22)
ರಾಜು ತಂದೆ ಗುರುನಾಥ ಚಾಮನಾಳ ತಾಂಡಾ (31) ಮೃತಪಟ್ಟ ದುರ್ದೈವಿಗಳಾಗಿದ್ದಾರೆ
ಎಂದು ಗುರುತಿಸಲಾಗಿದೆ.

ಇಬ್ಬರು ಯುವಕರು ನಗರದ ಸೂರ್ಯೋದಯ ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಕರ್ತವ್ಯ ಮುಗಿಸಿಕೊಂಡು ಚಾಮನಾಳ ಕಡೆ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದು ಕಾರು ಸ್ಥಳದಲ್ಲಿಯೇ ನಿಂತಿದ್ದು, ಚಾಲಕ, ಇತರರು ಪರಾರಿಯಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆ ನಂತರವೇ ಸಮಗ್ರ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮೃತರ ದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ ನಗರ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.