ಶಹಾಪುರ : ನಗರದ ಚಾಂದ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಮಾರ್ಚ್ 16ರಂದು ಕುರುಬ ಸಮಾಜದ ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ವಿಭೂತಿ ಹಳ್ಳಿ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದ್ದು,ತಾಲೂಕು ಕರ್ನಾಟಕ ಪ್ರದೇಶ ಕುರುಬರ ಸಂಘ, ತಾಲೂಕು ಕನಕ ನೌಕರರ ಸಂಘ, ಸಂಗೊಳ್ಳಿ ರಾಯಣ್ಣ ಯುವಕ ಸಂಘಗಳ ಸಂಯುಕ್ತಾಶ್ರಯದಲ್ಲಿ ಈ ಸಮಾರಂಭವು ಅದ್ದೂರಿಯಾಗಿ ಜರುಗಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ತಾಲೂಕಿನ ಸಮಾಜದ ಮುಖಂಡರು ಸಹಕರಿಸಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕ ಅಧ್ಯಕ್ಷರಾದ ಯಲ್ಲಪ್ಪ ನರಿ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷನಾದ ಮೇಲೆ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ವಿಭೂತಿಹಳ್ಳಿ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಕನಕ ನೌಕರರ ಸಂಘದ ಅಧ್ಯಕ್ಷರಾದ ಧರ್ಮಣಗೌಡ ಹುಲ್ಕಲ್, ಮಾತನಾಡಿ,ನಾವು ಈ ಮೊದಲು ಸಮಾಜದ ಮೂರು ಸಂಘಟನೆಗಳಿಂದ ಪೂರ್ವಭಾವಿ ಸಭೆಯನ್ನು ಕರೆದಿದ್ದು ಹಿರಿಯರ ಒಮ್ಮತದ ಮೇರೆಗೆ ಪಕ್ಷಾತೀತವಾಗಿ ರಾಜಕೀಯ ಶೈಕ್ಷಣಿಕವಾಗಿ ಸಮಾಜದ ಯಾವ ವ್ಯಕ್ತಿ ಉನ್ನತ ಸ್ಥಾನ ಪಡೆಯುತ್ತಿರುವರೊ ಅವರನ್ನು ಸನ್ಮಾನಿಸಿ ಅಭಿನಂದಿಸುವುತ್ತಾ ಬಂದಿದ್ದೇವೆ.ಅದೇ ರೀತಿ ಸಮಾರಂಭವು ಕೂಡ ಒಂದಾಗಿದ್ದು, ಈ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿಕೊಳ್ಳುವೆ ಎಂದು ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷರಾದ ರಾಯಪ್ಪ ಚಲುವಾದಿ ಮಾತನಾಡಿ, ತಾಲೂಕಿನ ಕುರುಬ ಸಮಾಜದ ಯುವಕರು ಸಮಾಜದ ಬಾಂಧವರು ಹಿರಿಯರು ಯಾವುದೇ ಸಂಕೋಚಕ್ಕೆ ಒಳಪಡದೆ ಪಕ್ಷಾತೀತವಾಗಿ ಅಭಿನಂದನಾ ಕಾರ್ಯಕ್ರಮ ಯಶಸ್ವಿಗೊಳಿಸಲು ಕುರುಬ ಸಮಾಜದ ಬಂಧುಗಳಿಗೆ ಕರೆ ನೀಡಿದರು.
ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷರಾದ ಅಯ್ಯಣ್ಣ ಇನಾಮ್ದಾರ್, ಕನಕ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮಾಳಿಂಗರಾಯ ಮಂಡಗಳ್ಳಿ, ಬಾಲಕೃಷ್ಣ ಹುಲ್ಕಲ್, ಚಂದಪ್ಪ ಮಡ್ನಾಳ್ ,ನಿಂಗಣ್ಣ ಸಗರ, ಮಹೇಶ್ ರಸ್ತಾಪುರ, ಬಲಭೀಮ ಮಡ್ನಾಳ್, ಸೀನು ನಾಶಿ, ಭೀಮರಾಯ ಭಂಡಾರಿ, ಈರಣ್ಣ ಶೆಟ್ಟಿ ಕೇರಾ, ದೇವಪ್ಪ ಮಾಡಗಿ, ಬಸವರಾಜ ಹಳಿಸಗರ, ಮಲ್ಲಪ್ಪ ಹಳಿ ಸಗರ, ಅಮೋಘ ಹೋತಪೀಠ, ಮಲ್ಲಿಕಾರ್ಜುನ ಹೋತಪೀಠ, ಸಾಯ್ಬಣ್ಣ ನಾಶಿ ಮಲ್ಲಿಕಾರ್ಜುನ ದೋರನಹಳ್ಳಿ, ಭೀಮಣ್ಣಗೌಡ ಕುಲಕಲ್, ಶರಣು ಹುರಸಗುಂಡಗಿ, ಈರಣ್ಣ ಅಗಸ್ತಿಹಾಳ, ಗೋಪಿ ಹುಲ್ಕಲ್, ರಾಯಣ್ಣ ಕನ್ಯೆ ಕೋಳೂರು, ಧರ್ಮರಾಯ ಹಳಿಸಗರ, ಮರ್ದಾನಿ ಸಲಾದಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.