ಶಹಾಪುರಃ ಮಾ.16 ರಂದು ಕುರುಬ ಸಮಾಜದಿಂದ ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮ ಪಕ್ಷಾತೀತವಾಗಿರದೆ ಬಿಜೆಪಿ ಪಕ್ಷಕ್ಕೆ ಸೀಮಿತವಾದಂತೆ ಕಾಣುತ್ತಿದ್ದು,
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡ ಕುರುಬ ಸಮಾಜದ ಹಿರಿಯ ಮುಖಂಡರಾದ ಬಸವರಾಜ ವಿಭೂತಿಹಳ್ಳಿ ಅವರಿಗೆ ಮಾತ್ರ ಸನ್ಮಾನ ಏರ್ಪಡಿಸಿದೆ. ಹಾಲುಮತ ಸಮಾಜದಲ್ಲಿಯೇ ರಾಜ್ಯ ಸರ್ಕಾರ ಹಲವು ಕ್ಷೇತ್ರಗಳಿಗೆ ನಾಮನಿರ್ದೇಶನಗೊಂಡಿದ್ದು ಅವರಿಗೂ ಕೂಡ ಸನ್ಮಾನ ಮಾಡಬಹುದಿತ್ತು. ಆದರೆ ಅವರನ್ನು ಗಮನಕ್ಕೆ ತರದೆ ಒಂದೇ ಪಕ್ಷಕ್ಕೆ ಮೀಸಲಾದವರಿಗೆ ಸನ್ಮಾನ ಕಾರ್ಯಕ್ರಮ ಇಟ್ಟಿರುವುದು ಸರಿಯಲ್ಲ ಎಂದು ಕುರುಬ ಸಮಾಜದ ಹಿರಿಯ ಮುಖಂಡ ಶರಣಪ್ಪ ಸಲಾದಪುರ ಆಕ್ಷೇಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ದ ಅವರು, ಸಮಾಜದವರೊಬ್ಬರು ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿರುವದು ಸಮಾಜ ಸಂತಸ ತರುವಂತಹದ್ದೆ, ಆದರೆ ಕುರುಬ ಸಮಾಜದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರೊಬ್ಬರಿಗೆ ಮಾತ್ರ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇಂತಹ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಸಮಾಜದ ಮುಖಂಡರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ನಮ್ಮ ಸಮಾಜದವರು ಕೈ ಪದಾಧಿಕಾರಿಗಳು, ಮತ್ತು ಸರ್ಕಾರದಿಂದ ನಾಮನಿರ್ದೇಶನಗೊಂಡ ಕುರುಬ ಸಮಾಜದ ಹಲವರು ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಉಳಿದವರು ಅವರವರ ವೈಯಕ್ತಿಕತೆಗೆ ಬಿಟ್ಟ ವಿಚಾರ, ಅದು ಸಮಾಜದ ಕಾರ್ಯಕ್ರಮ ಆಗಬೇಕಿತ್ತು. ಅಲ್ಲಿ ಒಂದು ಪಕ್ಷದ ಕಾರ್ಯಕ್ರಮವೆಂಬಂತೆ ಕಂಡು ಬರುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿರುವ ನಾವು ಆ ಕಾರ್ಯಕ್ರಮಕ್ಕೆ ಹೋಗುವದಿಲ್ಲ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ಗಿರೆಪ್ಪಗೌಡ ಬಾಣತಿಹಾಳ, ಈರಣ್ಣಗೌಡ ಮಲ್ಲಾಬಾದಿ, ಶಿವಮಹಾಂತ ಚಂದಾಪುರ, ಮಲ್ಲಣ್ಣ ತಿಪ್ಪನಟಿಗಿ, ಧರ್ಮಣ್ಣ ಹೋತಪೇಟ, ಶರಭಣ್ಣ ರಸ್ತಾಪುರ, ಶಾಂತಗೌಡ ನಾಗನಟಗಿ, ಭೀಕ್ಷಣಗೌಡ ಗುರುವರ, ಭೀಮಾಶಂಕರ ಹುಲಕಲ್, ಕಳಸಪ್ಪಗೌಡ ಶಖಾಪುರ, ರೇವಣಸಿದ್ದಪ್ಪಗೌಡ ಶೆಟಿಗಾರ, ಸಿದ್ದಪ್ಪ ಕನ್ಯಾಕೋಳೂರ, ಶಾಂತು ಪಾಟೀಲ್ ಕಾಡಂಗೇರಾ, ಶರಣಗೌಡ ಚಾಮನಾಳ, ಮಲ್ಲನಗೌಡ ತಿಪ್ಪನಳ್ಳಿ, ಚನ್ನಬಸವ ಹೊಸಕೇರಾ, ತಮ್ಮಣ್ಣಗೌಡ, ಮಂಜುನಾಥ ಬಿರೆದಾರ ಸೇರಿದಂತೆ ಇತರರು ಇದ್ದರು.
Post Views: 114