ಶಹಾಪುರ : ಸರ್ವ ಜನಾಂಗದ ಅಭಿವೃದ್ಧಿ ಬಜೆಟ್ ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ್ದಾರೆ. ಅಹಿಂದ ಒಳಗೊಂಡು ಮೇಲ್ವರ್ಗದವರ ಪರವಾಗಿ ಬಜೆಟ್ ಮಂಡನೆಯಾಗಿದೆ. ಇಷ್ಟಿದ್ದರೂ ಕೂಡ ಬಿಜೆಪಿ ಪಕ್ಷದವರು ಒಂದು ವರ್ಗವನ್ನು ಉಲ್ಲೇಖಿಸಿ ಟೀಕಿಸುತ್ತಿರುವುದು ದುರದೃಷ್ಟಕರ ಎಂದು ಕೆಪಿಸಿಸಿ ರಾಜ್ಯ ಸಂಯೋಜಕರಾದ ರಾಜ್ ಮೈನುದ್ದೀನ್ ಜಮಾದಾರ ಕಿಡಿಕಾರಿದ್ದಾರೆ.
ಬಿಜೆಪಿಯವರಿಗೆ ಮುಸ್ಲಿಮರ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿರುವುದು ಬಿಟ್ಟರೆ ಬೇರೆ ಕೆಲಸವೆ ಇಲ್ಲದಂತಾಗಿದೆ.ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಕಾಮಗಾರಿಗಳಲ್ಲಿ ಶೇ. ನಾಲ್ಕರಷ್ಟು ಮೀಸಲಾತಿ ನೀಡಲಾಗಿದೆ. ಅಲ್ಪಸಂಖ್ಯಾತರೆಂದರೆ ಬೌದ್ಧರು ಜೈನರು ಕೂಡ ಅಲ್ಪಸಂಖ್ಯಾತರು. ಬಿಜೆಪಿಯವರು ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಇದು ಪಾಕಿಸ್ತಾನ ಬಜೆಟ್ ಹಲಾಲ್ ಬಜೆಟ್ ಎಂದು ಟೀಕಿಸುತ್ತಿರುವುದು ಅವರ ಮನಸ್ಥಿತಿ ಎಂತಹದು ಎಂದು ತೋರಿಸಿಕೊಡುತ್ತದೆ. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ನಂತರ ಹಿಂದುಳಿದ ವರ್ಗ ಜನಾಂಗಕ್ಕೆ ಆಶಾಕಿರಣ ಎಂದರೆ ಸಿದ್ದರಾಮಯ್ಯನವರು. 10 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯ ಯಾವ ಭರವಸೆಗಳನ್ನು ಈಡೇರಿಸಿದೆ ಎಂದು ಮನವರಿಕೆ ಮಾಡಿಕೊಳ್ಳಲಿ.ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮ ಎನ್ನದೆ ಎಲ್ಲರನ್ನೂ ಒಟ್ಟಿಗೆ ಸೇರಿಕೊಂಡು ಅಭಿವೃದ್ಧಿ ಕಡೆ ಗಮನ ಕೊಡುತ್ತಿದೆ. ಇದನ್ನರಿತು ಬಿಜೆಪಿಯವರು ಮುಸ್ಲಿಮರ ಬಗ್ಗೆ ಕೀಳರಿಮೆ ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ಕಿವಿಮಾತು ಹೇಳಿದರು.
Post Views: 134