ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಚಿವರು

ಶಹಾಪುರ : ಸತತ ಹದಿನಾಲ್ಕು ತಿಂಗಳ ಹೋರಾಟದ ಪ್ರಯತ್ನದ ಫಲವಾಗಿ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಪ್ರತಿಷ್ಠಾಪನೆಗೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮತಿ ಪಡೆದಿದ್ದು ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಹೇಳಿದರು. ನಗರದ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಮಾತನಾಡಿದವರು. ಕಾನೂನಾತ್ಮಕವಾಗಿ ಯಾವುದೇ ತೊಡಕಾಗದಂತೆ ಸಚಿವರಾದ ಎಚ್ ಸಿ ಮಹದೇವಪ್ಪ ಹಾಗೂ ಮುಖ್ಯಮಂತ್ರಿ ಅವರ ಸಹಕಾರದಿಂದ ಸಾಧ್ಯವಾಯಿತು ಎಂದರು. ಬಾಬಾ ಸಾಹೇಬರ ಮೂರ್ತಿ ಸ್ಥಾಪನೆ

ಮತ್ತು ಉದ್ಯಾನವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಅನುದಾನಕ್ಕಾಗಿ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಬಾಬಾ ಸಾಹೇಬರ ಕನಸು ನನಸಾಗಬೇಕಾದರೆ ನಾವೆಲ್ಲರೂ ಸಮ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣಕ್ಕೆ ಒತ್ತು ಕೊಡಬೇಕಿದೆ ಎಂದು ತಿಳಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಲಾದಪುರ ಮಾತನಾಡಿ ಮಾನವ ಸಮಾಜದ ಒಳಿತಿಗಾಗಿ ಬಾಬಾ ಸಾಹೇಬರು ಹುಟ್ಟಿ ಬಂದಿದ್ದರು. ಬಾಬಾ ಸಾಹೇಬರ ಜೊತೆಗೆ ಬಸವಣ್ಣನವರು ಕೂಡ ಶೋಷಿತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಇಂತಹ ಮಹಾತ್ಮರ ಜಯಂತಿಗಳನ್ನು ಎಲ್ಲಾ ಸಮುದಾಯದವರು ಸೇರಿ ಆಚರಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಕರವೇ ಅಧ್ಯಕ್ಷರಾದ ಶರಣು ಗದ್ದುಗೆ, ರೈತ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಆರ್ಬೋಳ್ ಹಾಗೂ ಸಿದ್ದಲಿಂಗಪ್ಪ ಆನೆಗುಂದಿ, ಬಸವರಾಜ‌ ಹೇರುಂಡಿ ಡಾ. ಭೀಮಣ್ಣ ಮೇಟಿ, ಸೈಯದ್ ಖಾದ್ರಿ, ಆರ್ ಚನ್ನಬಸು ವಕೀಲರು, ಖಾಲಿಫ್ ಎಸ್ಡಿಪಿಐ ಮುಖಂಡರು, ಗೌಡಪ್ಪಗೌಡ ಆಲ್ದಾಳ, ಅಯ್ಯನಗೌಡ ಕನ್ಯೆಕೊಳೂರು, ಮಾನ್ಸಿಂಗ್ ಚೌಹಾಣ್, ಶಿವುಮಾಂತು ಚಂದಾಪುರ, ಗಿರಿಯಪ್ಪಗೌಡ ಬಾಣತಿಹಾಳ, ರಾಯಪ್ಪ ಸಾಲಿಮನಿ ಶಿವಪುತ್ರಪ್ಪ ಜವಳಿ, ಇಬ್ರಾಹಿಂ ಶಿರವಾಳ, ಹೊನ್ನಪ್ಪ ಗಂಗನಾಳ, ಶಿವಕುಮಾರ ತಳವಾರ, ಸೇರಿದಂತೆ ಇತರ ಮುಖಂಡರು ಪಾಲ್ಗೊಂಡಿದ್ದರು.ನೀಲಕಂಠ ಬಡಿಗೇರ್ ಸ್ವಾಗತಿಸಿದರು. ಶ್ರೀಶೈಲ್ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು.
ನಗರದ ಹೃದಯ ಭಾಗದ ಹಳೆ ಬಸ್ ನಿಲ್ದಾಣದ ಸ್ಥಳದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ. ಬಾಬಾ ಸಾಹೇಬರ ಪುತ್ತಳಿ ನಿರ್ಮಾಣಕ್ಕಾಗಿ ಹಲವು ದಿನಗಳ ಹೋರಾಟಗಳ ಫಲ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ್ ಅವರ ಕಾಳಜಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಚಿವರಾದ ಹೆಚ್.ಸಿ. ಮಹದೇವಪ್ಪನವರ ಸಹಕಾರದಿಂದ ಸಚಿವ ಸಂಪುಟದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಅನುಮತಿ ದೊರೆತಿದ್ದು, ಕಾನೂನಾತ್ಮಕವಾಗಿ ಯಾವುದೇ ಅಡೆತಡೆ ಇಲ್ಲದೆ ಜಯ ಸಿಕ್ಕಂತಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲ ಮುಖಂಡರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ರಾಯಪ್ಪ ಸಾಲಿಮನಿ
 ದಲಿತ ಸಂಘರ್ಷ ಸಮಿತಿ (ಸಂಯೋಜಕ ಬಣ) ಯಾದಗಿರಿ ಜಿಲ್ಲಾಧ್ಯಕ್ಷರು.