ಆಧುನಿಕ ವೈಜ್ಞಾನಿಕ ಪದ್ದತಿ ಅಳವಡಿಕೊಳ್ಳಿ: ಚಿದಾನಂದ

ಶಹಾಪುರ:ರೈತರು ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಉತ್ತಮ ಇಳುವರಿ ಪಡೆಯಲು ಆಧುನಿಕ ವೈಜ್ಞಾನಿಕ ಪದ್ದತಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಾಂಬಾರ ಪಧಾರ್ಥಗಳ ಅಭಿವೃದ್ದಿ ಮಂಡಳಿ ಉಪನಿರ್ಧೇಶಕ ಚಿದಾನಂದ ರೈತರಿಗೆ ಕರೆ ನೀಡಿದರು. ು ತಾಲುಕಿನ ಭೀ,ಗುಡಿ ಕೃಷಿ ವiಹಾವಿಧ್ಯಾಲಯದ ಅಡಿಟೋರಿಯಂನಲ್ಲಿ ಹಮ್ಮಿಕೊಂಡ ತೋಟಗಾರಿಕೆ ಇಲಾಖೆ ಮತ್ತು ಸಾಂಬರ ಪಧಾರ್ಥಗಳ ಅಭಿವೃದ್ದಿ ಮಂಡಳಿ ಆಶ್ರಯದಲ್ಲಿ ನಡೆದ ಮೆಣಸಿನಕಾಯಿ ಬೆಳೆ ಇಳುವರಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ಮಹಾ ವಿಧ್ಯಾಲಯದ ಡೀನ್ ಡಾ,ಚೆನ್ನಬಸವಣ್ಣ ಮಾತನಾಡಿ ಮೇಣಸಿಕಾಯಿ ಬೆಳೆ ದೇಶದಲ್ಲೆ ಅತ್ಯಂತ ಅವಶ್ಯಕವಾದ ವಸ್ತುವಾಗಿದೆ.ಅದನ್ನು ಆರ್ಥಿಕವಾಗಿ ಮತ್ತು ಸಾಂಬಾರ ಪಧಾರ್ಥಗಳ ವಸ್ತುಗಳ ಉತ್ಪನ್ನ ಹೆಚ್ಚಿಸಬೇಕು ಎಂದರು.ಹಿರಿಯ ವಿಜ್ಞಾನಿ ಜಯಪ್ರಕಾಶರವರು,ತೊಟಗಾರಿಕೆ ಉಪ ನಿರ್ಧೆಶಕರಾದ ಸಂತೋಷ ಶೇಷಲು,ಸಹಾಯಕ ಪ್ರಾಧ್ಯಾಪಕರಾದ ಶ್ಯಾಮರಾವ್ ಕುಲಕರ್ಣಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ಧೇಶಕರಾದ ದತ್ತಾತ್ರಯ ಪಾಟೀಲ್, ಸುರೇಶರಡ್ಡಿ ಸೇರಿದಂತೆ ಶಹಾಪುರ ಸುರುಪುರ ಯಾದಗಿರಿ ತಾಲುಕಾ ಕೇಂದ್ರಗಳಿಂದ ರೈತರು ಆಗಮಿಸಿದ್ದರು.

About The Author