SSLC ಶೇ.91 ಪಡೆದ ಅರ್ಚನಾಗೆ ಎಸ್ಪಿ ಸನ್ಮಾನ

ಶಹಾಪುರ:ಎಸ್.ಎಸ್.ಎಲ್.ಸಿ.ಯಲ್ಲಿ ವಡಗೇರಾ ತಾಲುಕಿನ ಕುರುಕುಂದಾ ಸರ್ಕಾರಿ ಪ್ರೌಡ ಶಾಲೆ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅರ್ಚನಾ  569 ಅಂಕಗಳನ್ನು ಪಡೆದುಕೊಂಡು ಶೇ. 91 ರಷ್ಟು  ಪಾಸಾಗಿದ್ದಕ್ಕೆ ಯಾದಗಿರಿ ಜಿಲ್ಲಾ ಎಸ್ಪಿ.ಡಾ.ವೇದಮೂರ್ತಿ ಅರ್ಚನಾಳರನ್ನು ಸನ್ಮಾನಿಸಿ ಗೌರವಿಸಿದರ. ಮುಂದೆ ಅಚಲತೆಗಳಿಂದ ವಿಧ್ಯಾಬ್ಯಾಸ ಮಾಡಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಉತ್ತಮ ನಾಗರಿಕತ್ವದ ಗುಣಗಳನ್ನು ಬಳಸಿಕೊಂಡು ಉನ್ನತ ಹುದ್ದೆಯಲ್ಲಿ ಅರ್ಚನಾ ಸಾಗಲಿ ಎಂದು ಆಶಿಸಿದರು.ಈ ಸಮಯದಲ್ಲಿ ತಂದೆ ತಾಪಂ.ಮಾಜಿ ಸದಸ್ಯರಾದ ಪರಶುರಾಮ ಕುರುಕುಂದಿ ಮತ್ತು ಕಚೇರಿ ಸಿಬ್ಬಂದಿಯವರು ಹಾಜರಿದ್ದರು.