ಅಕ್ರಮ ಮತ್ತು ನಕಲಿ ಮದ್ಯವನ್ನು ತಾಲ್ಲೂಕಿನಾದ್ಯಂತ ಮಧ್ಯ ಸರಬರಾಜು ಆಗಲು ಇಲಾಖೆಯ ಸಹಕಾರವೆ ಕಾರಣ ಆರೋಪ

ಶಹಾಪು:ತಾಲ್ಲೂಕಿನಾದ್ಯಂತ ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ವಡಗೆರಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಮದ್ಯ ಮಾರಾಟ ಆಗುತ್ತಿದ್ದರು ತಾಲೂಕು ಅಬಕಾರಿ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಕಿರಾಣಿ ಅಂಗಡಿಗಳಲ್ಲಿ,ಪಾನ್‍ಶಾಪ್,ಮದ್ಯಮಾರಾಟ ಮಾಡುತ್ತಿರುವುದು ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ.ತಾಲ್ಲೂಕಿನಲ್ಲಿ ಕಾನೂನಿನ ಬಲಕ್ಕಿಂತ ಇನ್ನಾವುದೋ ಬಲಕ್ಕೆ ಮಣಿದಂತೆ ಕಾಣುತ್ತಿದೆ.ಇದಕ್ಕೆ ತಾಜಾ ಉದಾಹರಣೆ ಎಂದರೆ, ಅಕ್ರಮ ಮತ್ತು ನಕಲಿ ಮದ್ಯದ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳು ಶಹಾಪುರ ನಗರದ ಲಕ್ಷ್ಮೀ ವೈನ್‍ಶಾಪ್‍ನಲ್ಲಿ ಪರಿಶೀಲಿಸಿದಾಗ ಅಕ್ರಮ ಹಾಗೂ ನಕಲಿ ಮದ್ಯ ಇರುವುದು ಬೆಳಕಿಗೆ ಬಂದಿದೆ.

ಇತ್ತಿಚೆಗೆ ತಾಲ್ಲೂಕಿನ ಚಂದಾಪುರ ಗ್ರಾಮದಲ್ಲಿ ಐಬಿ ಬ್ಯಾಂಡ್‍ನ ಹೆಸರಿನಲ್ಲಿ ನಕಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲು ಹೋದಾಗ ನಕಲಿ ದಂಧೆಯಲ್ಲಿ ತೊಡಗಿದ ವ್ಯಕ್ತಿಗಳು ಅಧಿಕಾರಿಗಳಿಗೆ ಕರ್ತವ್ಯಕ್ಕೆ ತೊಂದರೆ ಮಾಡಿ ಅಧಿಕಾರಿಗಳ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.ಜಾಲದ ಹಿಂದೆ ತಾಲ್ಲೂಕಿನ ಪ್ರಮುಖ ರಾಜಕೀಯ ಪಕ್ಷವೊಂದರ ಹಲವಾರು ಕಾರ್ಯಕರ್ತರು ಭಾಗಿಯಾಗಿ ಸರಬರಾಜು ಮಾಡಲು ಸಹಕಾರ ನೀಡಿದ್ದಾg.Éಅಕ್ರಮ ಮತ್ತು ನಕಲಿ ಮದ್ಯವನ್ನು ತಾಲ್ಲೂಕಿನಾದ್ಯಂತ ಸರಬರಾಜು ಆಗಲು ಇಲಾಖೆಯ ಸಹಕಾರವೆ ಕಾರಣ ಎಂದು ಸಾರ್ವಜನಿಕರ ಬಾಯಲ್ಲಿ ಹರಿದಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ..

ಇಂತಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮೂಲಜಾಲವನ್ನು ಪತ್ತೆ ಹಚ್ಚಿ,ದೈಹಿಕ ಶ್ರಮವಹಿಸಿ ದುಡಿಯುವ ಬಡ ಕಾರ್ಮಿಕರು ನಕಲಿ ಮದ್ಯದ ಹಾವಳಿಗೆ ತುತ್ತಾಗಿದ್ದಾರೆ. ಜನಸಾಮಾನ್ಯರ ಮೇಲೆ ಉಂಟಾಗುವ ಆರೋಗ್ಯ ಸಮಸ್ಯೆಗೆ ಯಾರು ಹೊಣೆ. ಅಕ್ರಮ ಮದ್ಯ ಸರಬರಾಜು ಮಾಡಿದ ವ್ಯಕ್ತಿಗಳ ಆಸ್ತಿಯನ್ನು ವಶಪಡಿಸಿಕೊಂಡು ಪರವಾನಿಗೆ ರದ್ದುಗೊಳಿಸಿ ಇದರ ಹಿಂದಿರುವ ಬಹುದೊಡ್ಡ ಜಾಲವನ್ನು ಬಯಲಿಗೆಳೆದು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕಲ್ಯಾಣ ಕರ್ನಾಟಕ ಯುವ ಸೇನೆ(ಯುವ ಶಕ್ತಿಗಳ ಒಕ್ಕೂಟ) ಜಿಲ್ಲಾ ಘಟಕ, ಯಾದಗಿರಿ ವತಿಯಿಂದ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಅಬಕಾರಿ ಇಲಾಖೆ, ಬೆಂಗಳೂರು ಇವರಿಗೆ ಮಾನ್ಯ ತಹಸೀಲ್ದಾರರು, ಶಹಾಪುರ ಇವರ ಮೂಲಕ ಜಿಲ್ಲಾಧ್ಯಕ್ಷ ಭೀಮಾಶಂಕರ ಎಚ್ ಕಟ್ಟಿಮನಿ ನೇತೃತ್ವದಲ್ಲಿ ಆಗ್ರಹಿಸಿ
ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕಾಧ್ಯಕ್ಷ ಕಾಶಪ್ಪ ಹಳಿಸಗರ, ಖಂಡಪ್ಪ ನಾಟೇಕಾರ, ಹೊನ್ನಪ್ಪ ನಾಟೇಕಾರ, ನಾಗು ರಸ್ತಾಪುರ, ಶಿವುಕುಮಾರ ಕಟ್ಟಿಮನಿ, ಮಂಜು ಹಾದಿಮನಿ, ಸುರೇಶ ಕಟ್ಟಿಮನಿ, ಸಂತೋಷ ರಸ್ತಾಪುರ, ಶಾಂತಪ್ಪ ಗಂಗನಾಳ ಇನ್ನೀತರರು ಇದ್ದರು.

About The Author