ನಿಖಿಲ್ ವಿ ಶಂಕರ್ ಅವರಿಂದ ವಸತಿ ನಿಲಯಕ್ಕೆ ಧನ ಸಹಾಯ ಅಭಿನಂದನೆ ಸಲ್ಲಿಸಿದ ವಿದ್ಯಾರ್ಥಿಗಳು

ಶಹಾಪುರ : ಗುಡಿ ಗೋಪುರದ ಜೊತೆಗೆ ವಿದ್ಯಾಭ್ಯಾಸಕ್ಕೂ ಹೆಚ್ಚಿನ ಒತ್ತು ಕೊಡುತ್ತಾ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಿದರೆ ಒಂದು ದೇಶ ಸಮಾಜ ಸುಧಾರಿಸಲು ಸಾಧ್ಯ ಎನ್ನುವ ಮನೋಭಾವನೆ ಇಟ್ಟುಕೊಂಡಿರುವ ವ್ಯಕ್ತಿ ನಿಖಿಲ್ ವಿ ಶಂಕರ್. ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಲ್ಲಿ ಶಿಕ್ಷಣ ಮುಂದುವರಿಸಲು ಕಷ್ಟವಾಗುತ್ತದೆ. ಅಂತಹ  ವಿದ್ಯಾರ್ಥಿಗಳು ಒಂದು ಸಮಾಜದ ವಿದ್ಯಾರ್ಥಿ ನಿಲಯವೋ ಅಥವಾ ಸರಕಾರಿ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆ. ಅಂತಹ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೂ ಅಲ್ಲಿನ ವ್ಯವಸ್ಥೆ ಅಚ್ಚುಕಟ್ಟಾಗಿರಲು ಸಾಧ್ಯವಿರುವುದಿಲ್ಲ.
ಕಲ್ಬುರ್ಗಿಯ ವಸತಿ ನಿಲಯದಲ್ಲಿ ಹಲವಾರು ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟದೇ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಅಲ್ಲಿನ ನೀರಿನ ಮೋಟರು ಕೂಡ ಕೆಟ್ಟು ಹೋಗಿತ್ತು. ಆಕಸ್ಮಿಕವಾಗಿ ವಸತಿ ನಿಲಯಕ್ಕೆ ಭೇಟಿ ನೀಡಿದ ನಿಖಿಲ್ ವಿ ಶಂಕರ್ ಅಲ್ಲಿನ ವ್ಯವಸ್ಥೆಯನ್ನು ಕಂಡು ಬೆರಗಾದರು. ಇಂತಹ ವಸತಿ ನಿಲಯದಲ್ಲಿ ವ್ಯಾಸಂಗ ಮಾಡಲು ಸಾಧ್ಯವೇ ಎಂದರು.ಸುಮಾರು 39000 ರೂ. ಜೆಸ್ಕಾಂ ಬಿಲ್ ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟರು. ನೀರಿನ ಕರೆಂಟ್ ಮೋಟಾರು ರಿಪೇರಿ ಮಾಡಿಸಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟರು. ಅಲ್ಲಿನ ವಿದ್ಯಾರ್ಥಿಗಳು ನಿಖಿಲ್ ವಿ ಶಂಕರ್ ಅವರು ಮಾಡಿದ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಸ್ವಂತ ಹಣದಿಂದ ಅವರು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ದಾರಿ ದೀಪವಾಗಬೇಕು ಎನ್ನುತ್ತಾರೆ ವಸತಿ ನಿಲಯದ ವಿದ್ಯಾರ್ಥಿಗಳು.