ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೊದಲು ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲಿ ಎಂದು ಅಹಿಂದ ಜನ ಸಂಘಟನೆ ರಾಜ್ಯಧ್ಯಕ್ಷರು ಅಯ್ಯಪ್ಪಗೌಡ ಹೇಳಿದ್ದಾರೆ.ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ಕೊಡಬೇಕು ಎಂಬ ಆಗ್ರಹಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆದಾಗಿನಿಂದ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಈಗ ಪಕ್ಷದಲ್ಲಿ ಒಡಕುಂಟಾಗಿದೆ, ಹಿರಿಯ ನಾಯಕರು ತಿರುಗಿ ಬಿದ್ದಿದ್ದಾರೆ. ಹೈಕಮಾಂಡ್ ಬಿಜೆಪಿ ಪಕ್ಷದಲ್ಲಿ ಸರ್ಜರಿ ಮಾಡೋದಕ್ಕೆ ಚಿಂತನೆ ಮಾಡುತ್ತಾ ಇದ್ದಾರೆ. ವಿಜಯೇಂದ್ರ ಕುರ್ಚಿ ಯಾವುದೇ ಕ್ಷಣದಲ್ಲೂ ಬೀಳಬಹುದು. ಹೀಗಿರುವಾಗ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವುದು ನಗೆಪಾಟಲಾಗಿದೆ ಎಂದು ಅವರು ಕುಟುಕಿದ್ದಾರೆ. ಮುಡಾದಲ್ಲಿ ಸೈಟು ಹಂಚಿಕೆ ಆಗಿರುವುದು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ. ಆಗ ನಿಮ್ಮ ಪೂಜ್ಯ ತಂದೆ ಹಾಗೂ ಹಾಗೂ ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿದ್ದರು.ಮೊದಲು ನಿಮ್ಮ ಮನೆ ಬೀಗ ಭದ್ರ ಪಡಿಸಿಕೊಳ್ಳಿ ಎಂದು ವ್ಯಂಗ್ಯವಾಡಿದರು.