ಜ.17ರಂದು ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ ಅವರಿಗೆ ನೌಕರರ ಸಂಘದಿಂದ ಅಭಿನಂದನಾ ಸಮಾರಂಭ

ಶಹಾಪುರ : ತಾಲೂಕಿನ ಫಕಿರೇಶ್ವರ ಮಠದಲ್ಲಿ ಜನವರಿ 17ರಂದು ಶಹಪೂರು ತಾಲೂಕು ಸರಕಾರಿ ನೌಕರರ ಸಂಘ ಮತ್ತು ಎಲ್ಲಾ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ನೂತನ ಯಾದಗಿರಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಯಪ್ಪಗೌಡ ಹುಡೇದ್ ಅವರಿಗೆ ಅಭಿನಂದನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾರ್ಯದರ್ಶಿಗಳ ಸಂಘದ ಅಧ್ಯಕ್ಷರಾದ ಗೋವಿಂದ ರಾಥೋಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಫಕೀರೇಶ್ವರ ಮಠದ ಪೂಜ್ಯ ಶ್ರೀ ಗುರುಪಾದ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಸಚಿವ ಶರಣಬಸಪ್ಪಗೌಡ ದರ್ಶನಪುರ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಚನ್ನಾರೆಡ್ಡಿ ತುನ್ನೂರು, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ್ ರೆಡ್ಡಿ ದರ್ಶನಾಪುರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಶರಭೈ, ಮಲ್ಲಿಕಾರ್ಜುನ ಸಂಗ್ವಾರ್ ಸೇರಿದಂತೆ ನೌಕರರ ಸಂಘದ ರಾಜ್ಯ ಜಿಲ್ಲೆ ತಾಲೂಕು ಮಟ್ಟದ ಪದಾಧಿಕಾರಿಗಳು ನೌಕರಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಂದೇ ತಾಲೂಕಿನ ಪದಾಧಿಕಾರಿಗಳಿಗೆ ಅಭಿನಂದನ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.