ಗೋಗಿ ಕೆ.ಗ್ರಾಮ : ಚರಂಡಿಯಂತಾದ ರಸ್ತೆ :  ಪಿಡಿಒ ನಿರ್ಲಕ್ಷ : ಸಾಂಕ್ರಾಮಿಕ ರೋಗ ಹರಡುವ ಭೀತಿ

ದಲಿತ ಸಂಘರ್ಷ ಸಮಿತಿ (ಸಂಯೋಜಕ ಬಣ) ಜಿಲ್ಲಾಧ್ಯಕ್ಷ  ರಾಯಪ್ಪ ಸಾಲಿಮನಿ
************
ಶಹಾಪುರ : ತಾಲೂಕಿನ ಗೋಗಿ ಕೆ ಗ್ರಾಮದಲ್ಲಿ ಯಾದವ ಸಮಾಜದ ಓಣಿಯಲ್ಲಿನ ರಸ್ತೆ ಚರಂಡಿಯಂತಾಗಿ ಮಾರ್ಪಟ್ಟು ಸಾರ್ವಜನಿಕರು ಓಡಾಡಲು ಬಾರದಂತಾಗಿದೆ. ನೂರಾರು ಜನರು ಓಡಾಡುವ ಈ ರಸ್ತೆಯನ್ನು ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿಯವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತೀವ್ರ ನಿರ್ಲಕ್ಷ ವಹಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ ಬಣ) ಜಿಲ್ಲಾಧ್ಯಕ್ಷ  ರಾಯಪ್ಪ ಸಾಲಿಮನಿ ಆರೋಪಿಸಿದ್ದಾರೆ.
ರಸ್ತೆಗಳ ಮಧ್ಯೆ ಗುಂಡಿಗಳು ಬಿದ್ದಿದ್ದು ದ್ವಿಚಕ್ರವಾಹನ ಸೇರಿದಂತೆ ಇತರ ವಾಹನಗಳು ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಗ್ರಾಮದ ಚರಂಡಿ ನೀರು ಕೂಡ ರಸ್ತೆಯ ಮೇಲೆ ಹರಿದಾಡುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಮನೆಯ ಮುಂದೆ ದುರ್ನಾತ ಹೊಡೆಯುತ್ತಿದೆ. ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡಿದ್ದು, ಇದರಿಂದಾಗಿ ಚರಂಡಿ ನೀರು ರಸ್ತೆಯ ಮೇಲೆ ಬರುತ್ತಿವೆ. ಗ್ರಾಮ ಪಂಚಾಯಿತಿಯವರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ಯಾರೇ ಎನುತ್ತಿಲ್ಲ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.