ದೇವದುರ್ಗ:- ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಿಣಿ ಬ್ರಿಡ್ಜ್ ಕನಕ ಗುರು ಪೀಠದ ಶ್ರೀ ಸಿದ್ದರಾಮನಂದಪೂರಿ ಗುರುಗಳು ನೇತೃತ್ವದಲ್ಲಿ ಜನವರಿ 12-13-14 ರಂದು ಹಾಲುಮತ ಸಂಸ್ಕೃತ ವೈಭವ ಕಾರ್ಯಕ್ರಮ ನಡೆಯಲಿವೆ ಎಂದು ಶ್ರೀ ಮಠದ ಭಕ್ತ ಅಯ್ಯಪ್ಪಗೌಡ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರು ಸಂಘ ಯುವ ಘಟಕ ಗಾಂಧಿನಗರ ಬೆಂಗಳೂರು ರವರು ತಿಳಿಸಿದ್ದಾರೆ.
ಕಾರ್ಯಕ್ರಮಗಳು ವಿವರ ಜನವರಿ 12 ರಂದು ಕೃಷ್ಣಾ ನದಿಯಲ್ಲಿ ಗಂಗಾ ಪೂಜೆ ಬೀರದೇವರ ಪಲ್ಲಕ್ಕಿ ಮೆರವಣಿಗೆ,ಶಿವ ಸಿದ್ದ ಯೋಗ ವಿದ್ಯಾ ಮಂದಿರ ಶಿಲಾನ್ಯಾಸ ಮತ್ತು ಪೂಜಾರಿಗಳು ಟಗರು ಕಾಳಗ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳು.
ಜ.13-01-2025/ ಹಾಲುಮತ ಭಾಸ್ಕರ ಕನಕರತ್ನ ಸಿದ್ದಶ್ರೀ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಸಮಾರಂಭ ಹಾಗೂ ರಾಜ್ಯಪಾಲರಾದ ಶ್ರೀ ಸಿ.ಎಚ್.ವಿಜಯಶಂಕರ,ಶ್ರೀ ಭಂಡಾರು ದತ್ತಾತ್ರೇಯ ಮತ್ತು ಮಹಾರಾಷ್ಟ್ರ ರಾಜ್ಯದ ಧನಗರ್ ಸಮುದಾಯದ ಶಾಸಕರನ್ನು ರಾಷ್ಟ್ರೀಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಗುರಿಕಾರ ರವರೆಗೆ ಸನ್ಮಾನ ಕಾರ್ಯಕ್ರಮ ಸಾಧಕರಿಗೆ ಪ್ರಶಸ್ತಿ ಕಿರುಕಾಣಿಕೆ ಮಾಡಲಾಗುತ್ತಿದೆ ಇನ್ನೂ ಹಲವಾರು ಕಾರ್ಯಕ್ರಮಗಳು.
ಜ.14-01-2025 ಶ್ರೀ ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ ಸರ್ವ ಸಿದ್ದರ ಸ್ಮರಣೊತ್ಸವ ಕಾರ್ಯಕ್ರಮ ಎತ್ತುಗಳು ಭಾರ ಎಳೆಯುವ ಸ್ಪರ್ಧೆ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಸರ್ವ ಭಕ್ತಾದಿಗಳು ಬಂಧು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಶ್ರೀ ಮಠಧ ಭಕ್ತ ಅಯ್ಯಪ್ಪಗೌಡ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.