ಪಂಚ ಪಲ್ಲಕಿಗಳ ಮಹಾಸಂಗಮ :: ನಾಳೆ ಸೈದಾಪುರ ಗ್ರಾಮದ  ಮಾಳಿಂಗರಾಯ ಜಾತ್ರಾ ಮಹೋತ್ಸವ  

ಶಹಾಪುರ :: ತಾಲೂಕಿನ ಸೈದಾಪುರ ಗ್ರಾಮದಲ್ಲಿ ನಾಳೆ ಕುರುಬರ ಸಾಂಸ್ಕೃತಿಕ ವೈಭವೆಂದು ಸಾರುವ ಮಾಳಿಂಗರಾಯ ಜಾತ್ರಾ ಮಹೋತ್ಸವ ಪಂಚ ಪಲ್ಲಕ್ಕಿಗಳ ಮಹಾ ಸಂಗಮ ಜರುಗಲಿದೆ. ಜಾತ್ರಾ ಮಹೋತ್ಸವದಲ್ಲಿ  ಪೂಜ್ಯರು, ಗಣ್ಯರು, ರಾಜಕೀಯ ಮುಖಂಡರು, ಹಾಲುಮತ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದು ಭಕ್ತರು ಮಾಳಿಂಗರಾಯನ ಕೃಪೆಗೆ ಪಾತ್ರರಾಗಬೇಕೆಂದು ಹಾಲುಮತದ ಮುಖಂಡರಾದ ಡಾ. ಭೀಮಣ್ಣ ಮೇಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರಾ ಕಾರ್ಯಕ್ರಮದಲ್ಲಿ ಕನಕ ಗುರು ಪೀಠ ಕಲಬುರ್ಗಿಯ ವಿಭಾಗ ಪೀಠದ ತಿಂಥಣಿ ಬ್ರಿಡ್ಜ್ನ ಪೂಜ್ಯ ಶ್ರೀ ಶ್ರೀ ಸಿದ್ದರಮಾನಂದಪುರಿ ಮಹಾಸ್ವಾಮಿಗಳು ಸರೂರಿನ ಅಗತೀರ್ಥ ಪೀಠದ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು,ಹೋತಪೇಠ ಕೈಲಾಸ ಆಶ್ರಮದ ಶ್ರೀ ಶಿವಲಿಂಗ ಸ್ವಾಮಿಗಳು, ಮಾಳಿಂಗರಾಯ ದೇವಸ್ಥಾನದ ಪಟ್ಟದ ಪೂಜಾರಿ ಮಹದೇವಪ್ಪ ಪೂಜಾರಿ  ಸಾನಿಧ್ಯವಹಿಸಲಿದ್ದಾರೆ ಎಂದು ತಿಳಿಸಿದರು.
ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮಾತೆಪ್ಪ ಕಂದಕೂರ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಲಾದಪುರ ಜ್ಯೋತಿ ಬೆಳಗಿಸುವರು.
ಕಾರ್ಯಕ್ರಮದ ಅತಿಥಿಗಳಾಗಿ ಬಸವರಾಜಪ್ಪ ವಿಭೂತಿಹಳ್ಳಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಮಲ್ಲಣ್ಣ ಐಕೂರು, ಮುಖಂಡರಾದ ಗಿರಿಯಪ್ಪಗೌಡ ಬಾಣತಿಹಾಳ, ತಾಲೂಕು ಕುರುಬ ಸಂಘದ ಅಧ್ಯಕ್ಷರಾದ ಯಲ್ಲಪ್ಪ ನರಿ, ಕಾಂಗ್ರೆಸ್ ಮುಖಂಡರಾದ ಶಿವುಮಾಂತಪ್ಪ ಚಂದಾಪುರ, ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷರಾದ ರಾಯಪ್ಪ ಚೆಲುವಾದಿ, ಗ್ರಾಪಂ. ಅಧ್ಯಕ್ಷ ತಿಪ್ಪವ್ವ ಸಕ್ರೆಪ್ಪ, ಮಾಜಿ ಗ್ರಾಪಂ.ಅಧ್ಯಕ್ಷ ನಾನೇಗೌಡ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಕಾರ್ಯಕ್ರಮಗಳ ವಿವರ 

* ಬೆಳಗ್ಗೆ 11 ಗಂಟೆಗೆ ಮಾಳಿಂಗರಾಯನ ಜಾತ್ರಾ ಮಹೋತ್ಸವದ ಕುರುಬರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.
* ಮಾಳಿಂಗರಾಯನ ಗದ್ದುಗೆ ಪ್ರವೇಶ 
* ಜಿಲ್ಲೆಯ ಬಡ ಕುರಿಗಳ ವಿತರಣೆ.
* ಪಂಚ ಪಲ್ಲಕ್ಕಿಗಳ ಪುರ ಪ್ರವೇಶ ಪಟ್ಟದ ಪೂಜಾರಿಗಳ ಹೇಳಿಕೆ. 
* ಜನವರಿ 01ರಂದು ಗುಂಡು, ಚೀಲ, ಕಲ್ಲು, ಭಾರ ಎತ್ತುವ ಕುಸ್ತಿ ಸ್ಪರ್ಧೆಗಳು.ಪ್ರತಿ ವಿಜೇತರಿಗೆ 05 ತೊಲೆ ಬೆಳ್ಳಿ ಕಡಗ ವಿತರಣೆ.